ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕ ಮಹೇಂದ್ರ ಕಪೂರ್

ಐದು ದಶಕಗಳ ವೃತ್ತಿ ಜೀವನದಲ್ಲಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ 2500 ಗೀತೆಗಳನ್ನು ಹಾಡಿರುವ ಮಹೇಂದ್ರ ಕಪೂರ್ ಅವರನ್ನು ಬಾಲಿವುಡ್ ಚಿತ್ರರಂಗದ ವೈಬ್ರಂಟ್ ವಾಯ್ಸ್ ಆಫ್ ಇಂಡಿಯಾ ಎಂದೇ ಕರೆಯಲಾಗುತ್ತದೆ.
1934, ಜನೆವರಿ 9 ರಂದು ಅಮೃತಸರದಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ಗಾಯಕ ಮೊಹಮ್ಮದ್ ರಫಿಯವರಿಂದ ಪ್ರೇರಣೆಯನ್ನು ಪಡೆದು ಶಾಸ್ತ್ರೀಯ ಸಂಗೀತಗಾರರ ಬಳಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಅಲ್ಲದೇ ಮೆಟ್ರೋ ಮರ್ಫಿ ಆಲ್- ಇಂಡಿಯಾ ಹಾಡುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದರು. ಅನಂತರ 24 ವರ್ಷದವರಾಗಿದ್ದಾಗ 1958 ರಲ್ಲಿ ತೆರೆ ಕಂಡ ವಿ.ಶಾಂತಾರಾಮ ನಿರ್ದೇಶನದಲ್ಲಿ ಮೂಡಿ ಬಂದ ನವರಾಂಗ್ನಲ್ಲಿ ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದ್ದ ಇವರು ಬಿ.ಆರ್.ಚೋಪ್ರಾ ಅವರ ರಚನೆಯ ದುಲ್ ಕಾ ಪೂಲ್, ಗುಮರಾ, ವಕ್, ಹಮರಾಜ್, ದಂಡ್ ಮತ್ತು ನಿಕಾಹ್ ಗಳಲ್ಲಿ ಗಮನಾರ್ಹ ಗೀತೆಗಳನ್ನು ಹಾಡಿದ್ದರು. ಅಲ್ಲದೇ ಇಂಗ್ಲೀಷ್ ನಲ್ಲಿ ಸಂಗೀತವನ್ನು ಮುದ್ರಣ ಮಾಡಿದ ಮೊದಲ ಭಾರತೀಯ ಹಿನ್ನಲೆ ಗಾಯಕ ಎಂಬ ಖ್ಯಾತಿಯು ಕೂಡ ಇವರದ್ದೇ ಆಗಿದೆ.

ಇವರು ಕೇವಲ ಚಲನಚಿತ್ರಗಳಿಗೆ ಮಾತ್ರವಲ್ಲದೇ ಚೋರಿ ಚೋರಿ ಚಲೋ,ಓ ಮೇರಿ ಚಾಂಪಿ ಕಿ ದಾಲಿ ಸೇರಿ ಅನೇಕ ಆಲ್ಬಂ ಸಾಂಗ್ ಗಳನ್ನು ಹಾಡಿದ್ದು ಈ ಹಾಡುಗಳು ಮನೋಜ್ ಕಪೂರ್ ಚಿತ್ರಗಳಲ್ಲಿ ಜನಪ್ರಿಯವಾಗಿವೆ. ಇವರು ಮೊಹಮ್ಮದ್ ರಫಿಯೊಂದಿಗೆ ಯುಗಳ ಗೀತೆಯನ್ನು ಹಾಡಿದ್ದರು. ಈ ಹಾಡನ್ನು 1967 ರಲ್ಲಿ ಆದ್ಮಿ ಚಿತ್ರದಿಂದ ಕೈಸಿ ಹಸೀನ್ ಆಜ್ ಬಹರೋನ್ ಕಿ ರಾತ್ ಗೆ ಮಾಡಿದ್ದರಲ್ಲದೆ ರಫಿ ಮತ್ತು ತಲಾತ್ ಮೊಹಮ್ಮದ್ ಹಾಡಿದ್ದ ಯುಗಳ ಗೀತೆಯೊಂದಿಗೆ ದಾಖಲಿಸಲಾಗಿದೆ. ಆದರೆ ಇವರು ಹಿಂದಿಯಲ್ಲಿ ಮಾತ್ರವಲ್ಲದೇ ಮರಾಠಿ, ಗುಜರಾತಿ, ಭೋಜ್ ಪುರಿ ಭಾಷೆಯಲ್ಲಿ ಕೂಡ ಹಾಡಿದ್ದು ಮರಾಠಿಯಲ್ಲಿ ಹಾಡಿದ ಹಾಡುಗಳು ದಾದಾ ಕೊಂಡೈಯ ಧ್ವನಿಯಾಗಿ ಜನಮನ್ನಣೆ ಗಳಿಸಿದ್ದರು.

ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮುಖೇಶ್ ರಂತಹ ಬಾಲಿವುಡ್ ಗಾಯಕರ ಭರಾಟೆಯ ಮಧ್ಯದಲ್ಲಿ ಇವರು ಗೋಲ್ಡನ್ಯು ಗಾಯಕರಾಗಿದ್ದರು. ದಿಲೀಪ್ ಕುಮಾರ್, ಶಮ್ಮಿಕಪೂರ್, ರಾಜಕಪೂರ್, ದೇವಾನಂದ್, ಶಾಹ್ಸಿ ಕಪೂರ್, ಬಿಸ್ವಜಿತ್, ಧರ್ಮೇಂದ್ರ ಮತ್ತು ಅಮಿತಾಭ್ ಬಚ್ಚನ್ ಸೇರಿ ಅನೇಕ ಪ್ರಮುಖ ನಾಯಕರುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದ ಬಾಲಿವುಡ್ ನ ಅತ್ಯಂತ ಜನಪ್ರಿಯ ಗಾಯಕರಾಗಿದ್ದರು. ಇಂತಹ ಅಗಾಧ ಪ್ರತಿಭೆಯನ್ನು ಹೊಂದಿದ್ದ ಇವರು ದುರಾದೃಷ್ಟವಶಾತ್ ಸೆಪ್ಟೆಂಬರ್ 27, 2008 ರಂದು ತಮ್ಮ 74 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮರಣವನ್ನು ಹೊಂದಿದರು.
ಅಂದ ಹಾಗೆ ಬರೆಯುತ್ತ ಒಂದು ಮುಖ್ಯವಾದ ವಿಷಯ ಹೇಳುವುದನ್ನು ಮರೆತಿದ್ದೆ.
ಇವರನ್ನು ಇಂದಿಗೂ ಬಾಲಿವುಡ್ ಚಿತ್ರರಂಗದ ವೈಬ್ರಂಟ್ ವಾಯ್ಸ್ ಆಫ್ ಇಂಡಿಯಾ ಎಂದೇ ಕರೆಯಲಾಗುತ್ತದೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply