ಬಿಗ್ಬಾಸ್ 8

.

ಕಲರ್ಸ್ವಾಹಿನಿಯಲ್ಲಿ ಪ್ರಸಾರವಾಗುವ ,ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆದ್ “ಬಿಗ್ಬಾಸ್“, ಕಳೆದ 7 ವರ್ಷಗಳಿಂದ ಜನರಿಗೆ ಮನಿರಂಜನೆ ನೀಡಿ  ಅವಿನಾಭಾವ ಸಂಬಂಧ ಬೆಳಸಿಕೊಂಡುಸಾಗ್ತಿದೆ. ಆಟದೊಳಗೊಂದು ಆಟ, ಕನ್ನಡಿಯೊಳಗೊಂದು ಕನ್ನಡಿ ಎನ್ನುವ ಮಾದರಿಯಲ್ಲಿ ರೂಪಗೊಂಡಿರುವ ಸ್ಪರ್ಧೆ ಇದು, ದೈಹಿಕ ಸಾಮರ್ಥ್ಯ , ಇಚ್ಛಾಶಕ್ತಿ- ಎರಡನ್ನು ಉತ್ತಮವಾಗಿ ಸದುಪಯೋಗ ಪಡಿಸಿಕೊಳ್ಳುವ ಚಾಣಾಕ್ಷತೆ ಇದ್ದವ ಇಲ್ಲಿ ಗೆದ್ದವ! ಉಧರ ತುಂಬಿಸುವ ರುಚಿಕರವಾದ ಅಡುಗೆಗೆ ಕಡ್ಡಾಯವಾಗಿ ಬೇಕಾದ “ಉಪ್ಪು, ಹುಳಿ, ಕಾರದಂತೆ ಇಲ್ಲಿ ವಿನೋದ, ವಿಲಾಸ್ ಹಾಗು ವಿಷಾದವೂ ಇದ್ದು ನೋಡಗನ ಮನಸ್ಸು  ಭಾವಭರಿತವಾಗಿರುತ್ತದೆ.

ಸಾಧಕನ ಚೈತನ್ಯ ಭರಿತ ಬುತ್ತಿ, ಸಾಮಾನ್ಯನ ಕನಸಿನ ಬುಟ್ಟಿ ಎರಡನ್ನು ಹೊತ್ತು ಒಂದೇ ಸೂರಿನಡಿ ಹಲವು ವ್ಯಕ್ತಿತ್ವಗಳ ಅಂತರಾಳದ  ಅಲೆಗಳನ್ನಅನಾರವರಣಗೊಳಿಸುವ ‘ತೀರವಿದು’.

ಭಾವಸಾಗರದ ಅಂಬಿಗನಾಗಿ ದಾರಿದೀಪವೂ ಆಗಿರುವ ” ಕಿಚ್ಚಾಸುದೀಪ್”  ಈಗಾಗಲೇ ಸಪ್ತ ಸಾಗರವನ್ನ ಯಶಸ್ವಿಯಾಗಿ ದಾಟಿದ್ದಾರೆ.

ಪಯಣ ಮುಂದೆ ಸಾಗ್ತಾ ಇದೆ ! ಕನ್ನಡದ ಬಿಗ್ಬಾಸ್ 8ನೇ ಸೀಸನ್ಸಧ್ಯದಲ್ಲೇ ಪ್ರಾರಂಭಗೊಳ್ಳಲಿದೆ, ಕಾರ್ಯಕ್ರಮದ ರುವಾರಿ ಹೊತ್ತಿರುವ ಕಲರ್ಸ್ವಾಹಿನಿಯ ಮುಖ್ಯಸ್ಥರಾದ ಪರಮೇಶ್ಗುಂಡ್ಕಲ್, ಇತರ ತಂತ್ರಜ್ಞರು ಮತ್ತು ಕಿಚ್ಚಾಸುದೀಪ್ ಸೇರಿ ಹಲವು ಹೊಸ ನಿರ್ಣಯವನ್ನ ಕೈಗೊಂಡಿದ್ದಾರೆ.

ಮುಂಚಿನಿಂದಲೂ ಸ್ಪರ್ಧಿಗಳ ಕ್ಷೇಮ ಮತ್ತು  ಸುರಕ್ಷತೆ ಕಾಪಾಡಿಕೊಳ್ಳುವುದು ಬಿಗ್ ಬಾಸ ಕಾರ್ಯಕ್ರಮದ ಪ್ರಥಮ ಆಧ್ಯತೆ ಆಗಿದೆ, ಅದು ಕೋವಿಡ್ನ ಬಳಿಕ ದುಪ್ಪಟ್ಟಾಗಿದೆ. ಈ ಸಲದ  ಬಿಗ್ಬಾಸ್ಶೋನಲ್ಲಿಸ್ಪರ್ದಿಗಳ ಪಟ್ಟಿ ದೊಡ್ಡದಾಗಿರುತ್ತದೆ,ಅಂದ್ಮೇಲೆಮಜದ ಅನುಭವ ಕೂಡ ಹೆಚ್ಚಾಗಿರುತ್ತದೆಅನ್ನೋದಂತೂ ನಿಜ. ನಾಲ್ಕು ತಿಂಗಳ ಈ ಪಯಣದಲ್ಲಿಭಾಗಿಯಾಗೋನಾವಿಕರ ಪಟ್ಟಿ ತಯಾರಾಗಿದ್ದು, ಇನ್ನೇನು ಅತಿ ಶೀಘ್ರದಲ್ಲೇ 8ನೆ ಸೀಸನ್ನಾಂದಿಗೊಳ್ಳಲಿದೆ.

ಈ ಮಧ್ಯೆ ತೆಲುಗು ತಮಿಳ್ ಭಾಷೆಗಳಲ್ಲಿ ಬಿಗ್ಬಾಸ್ ಪ್ರಾರಂಭವಾಗಿದ್ದು, ಕಳೆದ ವಾರವಷ್ಟೇಸುದೀಪ್ ಅವರು ತೆಲುಗಿನ ಬಿಗ್ಬಾಸ್ಸೆಟ್ಗೆ ಭೇಟಿ ನೀಡಿದ್ರು, ತೆಲುಗಿನ ಬಿಗ್ಬಾಸ್ಸಾರಥಿಯಾದನಾಗಾರ್ಜುನ ಅವರ ಜೊತೆಗೆ ವೇದಿಕೆ ಹಂಚಿಕೊಂಡುಸ್ಪರ್ದಿಗಳ ಜೊತೆಗೆ ತುಸು ಕಾಲ ಸಂಭಾಷಣೆ ಕೂಡ ನಡೆಸಿದ್ರು…

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply