‘ಬಿಡುಗಡೆ’


ಪತ್ರಕರ್ತ… ಅವನ ಬಾಸ್‌ನ ಮಗಳೊಂದಿಗೆ ಪ್ರೇಮ… ಪತ್ರಕರ್ತನ ಗೆಳೆಯ ರಾಜೇಶ್.
ಒಂದು ಕೊಲೆಯಾದಾಗ ಅಯಾಚಿತವಾಗಿ ಪತ್ರಕರ್ತನ ತಂದೆ ಕೊಲೆಗಾರನೆಂಬ ಆಪಾದನೆಗೆ ಸಿಲುಕುತ್ತಾನೆ. ತಂದೆಯನ್ನು ಉಳಿಸಿಕೊಳ್ಳಲು ನಿರ್ಧಾರ ಮಾಡಿದ ಪತ್ರಕರ್ತ ತಾನೊಂದು ಕೊಲೆ ಮಾಡಿದ ಹಾಗೆ ಸನ್ನಿವೇಶ ಸೃಷ್ಟಿ ಮಾಡಿ, ಅದರಲ್ಲಿ ತಾನು ಆಪಾದಿತನಾಗಿ ನಂತರ ಬಿಡುಗಡೆ ಆಗಿ ತನ್ನ ತಂದೆಯನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಾನೆ. ಅವನ ಈ ಶೋಧವು ಅವನನ್ನು ಡಾರ್ಜಿಲಿಂಗ್‌ಗೆ ಒಯ್ಯುತ್ತದೆ. ಅಲ್ಲಿ ಆ ಕೊಲೆಯಾದ ವ್ಯಕ್ತಿಯ ತಂಗಿಯನ್ನು ಭೇಟಿ ಆಗುತ್ತಾನೆ.


ಅವಳು ಇವನತ್ತ ಪ್ರೇಮ ತೋರಿಸುವ ವೇಳೆಗೆ ಅವಳ ಕೊಲೆ ಆಗಿ ಅದರ ಆಪಾದನೆ ಪತ್ರಕರ್ತನ ಮೇಲೇ ಬರುತ್ತದೆ.


ಅವನು ಅದರಿಂದ ಖುಲಾಸೆಗೊಂಡು ನಿಜವಾದ ಕೊಲೆಗಾರನನ್ನು ಪತ್ತೆ ಹಚ್ಚಿ ಅಂದೇ ನೇಣಿಗೇರಲಿರುವ ತಂದೆಯ ಬಿಡುಗಡೆಗೆ ಜೈಲಿಗೆ ಧಾವಿಸುತ್ತಾನೆ…

ಬಾನಿಗೆ ನೀಲಿಯಾ… ಬೆಡಗಿನ ಹೆಣ್ಣಾ ಹಾಡುಗಳು ರಾಜ್ ಮತ್ತು ಭಾರತಿ ಜೋಡಿಗೆ.
ನೆನ್ನೆಯೋ ಮುಗಿದ ಕಥೆ… ಒಂದು ಕ್ಯಾಬರೆ ಹಾಡು.
ಬಹಳ ದಿನಗಳ ನಂತರ ಮಿನುಗುತಾರೆ ರಸಿಕರ
ರಾಜನೊಂದಿಗೆ ಅತಿಥಿ ಪಾತ್ರದಲ್ಲಿ ‘ನನ್ನ ಪುಟ್ಟ ಸಂಸಾರ’ ಹಾಡುತ್ತಾರೆ.
ಆಸಕ್ತಿಕರ ಚಿತ್ರ ‘ಬಿಡುಗಡೆ.’


ಎರಡು ಅಂತ್ಯಗಳಿವೆ ಈ ಸಿನಿಮಾಗೆ. ರಾಜ್ ಓಡಿ ಬರುವ ವೇಳೆಗೆ ರಾಜ್ ತಂದೆ ನೇಣಿಗೆ ಏರಿರುವ ಅಂತ್ಯ ಮೊದಲು ಇತ್ತು. ಥಿಯೇಟರ್‍ನಲ್ಲಿ ನಾ ನೋಡಿದ ಅಂತ್ಯವದು. ಟಿವಿಯಲ್ಲಿ ನಂತರ ಒಮ್ಮೆ ನೋಡಿದಾಗ ಸಮಯಕ್ಕೆ ಸರಿಯಾಗಿ ಬಂದು ತಂದೆಯನ್ನು ಕಾಪಾಡಿಕೊಳ್ಳುತ್ತಾನೆ ಪತ್ರಕರ್ತ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply