ಮತ್ತೆ ಬಿ.ಆರ್. ಪಂತುಲು, ಭಾರತಿ, ನರಸಿಂಹರಾಜು ಕಾಮನ್ ಫ್ಯಾಕ್ಟರ್ಸ್.
ಈ ಸಲ ಬಹಳ ದುಡ್ಡಿದ್ದ ಪಾಪಮ್ಮ ಈಗ ನಿರ್ಗತಿಕಳು. ಅವಳ ಮಗ ಗೋಪಿ ತನ್ನ ತಂದೆಯ ಆಸ್ತಿಯನ್ನು ಹೊಡೆದವನನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗುತ್ತಾನೆ. ಬಿ.ಆರ್. ಪಂತುಲು ಆ ಆಸ್ತಿಗೆ ಕಾವಲಿದ್ದು ಈ ತಾಯಿ ಮಗ ಬರಲೆಂದು ಕಾದಿರುತ್ತಾರೆ. ಅವರ ಮೊದಲ ಮಗಳು ಚಿಕ್ಕಂದಿನಲ್ಲಿ ತಪ್ಪಿ ಹೋಗಿರುತ್ತಾಳೆ. ಅವಳೀಗ ಪಾಕೆಟ್‍ಮಾರ್. ಆದರೆ ದಿನಕ್ಕೆ ಒಂದು ರೂಪಾಯಿ ಮಾತ್ರವೇ ಉಳಿಸಿಕೊಳ್ಳುವ ಸಿದ್ಧಾಂತದವಳು.
ಎರಡನೆ ಮಗಳು ಭಾರತಿಯನ್ನು ಈ ಗೋಪಿಗೇ ಕೊಟ್ಟು ಮದುವೆ ಮಾಡಬೇಕೆನ್ನುವ ಆಸೆ ಪಂತುಲುಗೆ (ಗೋಪಿ ನೋಡಲು ಹೇಗಿದ್ದಾನೋ ತಿಳಿಯದು). ಭಾರತಿ ಮತ್ತು ಗೋಪಿ ಒಬ್ಬರನ್ನೊಬ್ಬರು ಜಗಳದಲ್ಲಿ ಭೇಟಿ ಆಗುತ್ತಾರೆ. ಗೋಪಿ ಅವಳ ಇಂಗ್ಲೀಷ್ ಟ್ಯೂನ್ ಹಾಡುಗಳನ್ನು ಕಲಿಸಲು ಅವಳ ಮನೆಗೆ ಬರುತ್ತಾನೆ.
ನರಸಿಂಹರಾಜು ಒಬ್ಬ ಅಲಾಲುಟೋಪಿ. ಅವನು ದಿನೇಶ್ ಎಂಬ ವಿಲನ್‍ನನ್ನು ಅಟಕಾಯಿಸಿ, ಗೋಪಿ ಒಬ್ಬ ಸಿ.ಐ.ಡಿ. ಎಂದು ಗೋಪಿಯ ಮೇಲೆ ದಿನೇಶನಿಗೆ ಸಂಶಯ ಬರುವಂತೆ ಮಾಡುತ್ತಾನೆ. ದಿನೇಶ್ ಬಹಳವೇ ಚಾಲಾಕಿಯಿಂದ ಗೋಪಿಯ ತಾಯಿಯನ್ನು ಅಪಹರಿಸಿ, ತಾನೇ ಗೋಪಿ ಎಂದು ಭಾರತಿ ಮತ್ತು ಆಸ್ತಿಗಾಗಿ ಪ್ಲಾನ್ ಮಾಡುತ್ತಾನೆ.
ಒಂದೆರಡು ಅಚ್ಚರಿಯ ಕೊನೆಗಳು.
ಏಕಾಂತವಾಗಿ ಮಾತಾಡೆ ಬಂದೆ ನಾನು, ಲವ್ ಲವ್ ಲವ್ ಅಂದ್ರೆ ಪ್ರೇಮ, ಅಮ್ಮಾ ನೋಡೆ ಕಣ್ಬಿಟ್ಟು ನಿನ್ನಯ ಮಗನ ಒಳಗುಟ್ಟು ಈ ಹಾಡುಗಳು ಗೋಪಿ ಪಾತ್ರದ ರಾಜ್‍ಗೆ. ದಾಡಿಗೆಪ್ಪತ್ತು ನಿಂಗೆ ಇಪ್ಪತ್ತು ಹಾಡು ಭಾರತಿಗೆ. ಬೇಡ ಬೇಡಾ ಬಾಗಿಲು ಹಾಕಬೇಡ ವಂದನಾ ಮತ್ತು ನರಸಿಂಹರಾಜುಗೆ.
ಆಗಾಗ ಹಾಡು, ಆಗಾಗ ಫೈಟುಗಳು. ಒಟ್ಟಿನಲ್ಲಿ ಮನರಂಜನೆಯ ಮಹಾಪೂರ ಬೀದಿ ಬಸವಣ್ಣ.