M. G ಶ್ರೀನಿವಾಸ್ 2019ರಲ್ಲಿ ನಟಿಸಿ ನೀರ್ದೇಶಿಸಿರುವ “ಬೀರ್ಬಲ್ಟ್ರೈಯಾಲಜಿ” ಸಿನಿಮಾ ಒಳ್ಳೆ ಯಶಸ್ಸನ್ನುಕಂಡಿತ್ತು,ಈಗ ಆ ಸಿನಿಮಾ ಅಮಝೋನ್ಪ್ರೈಮ್ ನಲ್ಲಿ ಬಿಡುಗಡೆಯಾಗಿ ಮತ್ತೆ ಎಲ್ಲರ ಶಭಾಷ್ ಗಿರಿ ಪಡೆಯುತ್ತಿದೆ. ಕನ್ನಡಿಗರಷ್ಟೇ ಅಲ್ಲದೆ ತಮಿಳ್, ಹಿಂದಿ, ತೆಲುಗು ಸಿನಿಪ್ರೇಕ್ಷಕರಿಂದಲು ಸಹ ಮೆಚ್ಚುಗೆ ಪಡೆದು, ಶ್ರೀನಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಸಿನಿಮಾದ ಮೇಕಿಂಗ್ ಮತ್ತು ಕಥೆ ಎಲ್ಲೆರಿಗು ಬಹಳ ಹಿಡಿಸಿದೆ.
ಹೆಸರೆ ಸೂಚಿಸುವಂತೆ ಟ್ರೈಯಾಲಜಿ ಅಂದರೆ ಮೂರು ಭಾಗ ..
ಮೊದಲ ಭಾಗಕ್ಕೆ ಸಿಕ್ಕ ಮಾನ್ಯತೆ, ಯಶಸ್ಸಿನ ನಂತರ ಈಗ ಸಿನಿ ತಂಡ ಎರಡನೇ ಭಾಗದ ಸ್ಕ್ರಿಪ್ಟ್ ಕೆಲಸದ ಪೂರ್ವ ಸಿದ್ಧತೆಯಲ್ಲಿತೊಡಗಿದೆ. ಸಧ್ಯಕ್ಕೆ ಶ್ರೀನಿ ಹಾಗೂ ಅವರ ತಂಡ “ಓಲ್ಡ್ಮಾಂಕ್” ಅನ್ನೊ ಮತ್ತೊಂದು ಕಾಮಿಡಿ, ಥ್ರಿಲ್ಲರ್ ಸಿನಿಮಾದ ತಯಾರಿಯಲ್ಲಿ ನಿರತವಾಗಿದೆ, ಅದು ಮುಗಿದ ನಂತರ ಬಿರ್ಬಲ್ಪಾರ್ಟ್ 2 ಶುರು ಅಂತ ಹೇಳಿದ್ದಾರೆ..
ಈ ಪೋಸ್ಟರ್ಡಿಸೈನ್ “ಕರಣ್ ಆಚಾರ್ಯ” ಮಾಡಿಕೊಟ್ಟಿದ್ದಾರೆ.