“ಇಂದು 07.05.1954 ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಣ್ಣಾವ್ರ ಹೆಸರು ಸುವಣಾ೯ಕ್ಷರದಲ್ಲಿ ದಾಖಲಾದ ದಿನ “
“ಶಿವಪ್ಪ ಕಾಯೋ ತಂದೆ
ಮೂರು ಲೋಕಸ್ವಾಮಿ ದೇವ
ಹಸಿವೆಯನ್ನು ತಾಳಲಾರೆ
ಕಾಪಾಡೆಯ ಶಿವನೇ “
ಈ ಹಾಡು ಕೇಳ್ತಿದ್ರೆ ಈಗಲೂ ನಾವು ದಿಗ್ಬ್ರಾಂಥರಾಗ್ತೀವಿ ಕಾರಣ ಎಂದಿಗೂ ಮರೆಯಲಾಗದ ಚಿತ್ರ “ಬೇಡರ ಕಣ್ಣಪ್ಪ ” ಜ್ನ್ನಾಪಕ ಬರುತ್ತೆ.
ಅಣ್ಣಾವೃ ನಟನೆ ಪ್ರಾರಂಭಿಸಿ ಮೊದಲ ಚಿತ್ರದಲ್ಲಿ ಶತಕ ಬಾರಿಸಿ ಕರುನಾಡ ಅಭಿಮಾನಿಗಳ ಹೃದಯ ಗೆದ್ದ ದಿನ ಇಂದು “ಬೇಡರ ಕಣ್ಣಪ್ಪ ” ಚಿತ್ರ ಬಿಡುಗಡೆಯಾಗಿ ಇಂದಿಗೆ 66 ವಷ೯ಗಳು, ಈ ಚಿತ್ರ ತಯಾರಿಕೆಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ, ನಿದೇ೯ಶಕರಿಗೂ, ನಿಮಾ೯ಪಕರಿಗೂ ಹೃದಯ ಪೂವ೯ಕ ಅಭಿನಂದನೆಗಳು.
ಅಣ್ಣಾವೃ, ವರದಪ್ಪ ಮತ್ತು ತಂಗಿ ಶಾರದಮ್ಮ ಎಲ್ಲರೂ ಗುಬ್ಬಿ ವೀರಣ್ಣ ಕಂಪನಿಯಲ್ಲಿ ನಾಟಕ ಕಲಿಯುತ್ತಿದ್ದರು, ರಾಜ್ ರವರಿಗೆ ನಾಟಕ ನೋಡೋದಂದ್ರೆ ಬಲು ಇಷ್ಟ.
ಹೆಸರಾಂತ ನಿದೇ೯ಶಕರಾದ ಹೆಚ್ ಎಲ್ ಎನ್ ಸಿಂಹ ರವರು ಕನ್ನಡ ಚಿತ್ರರಂಗಕ್ಕೆ ಹೊಸ ಮುಖ ಪರಿಚಯಿಸುವ ನಿಟ್ಟಿನಲ್ಲಿ ಇರುವಾಗ ಮುತ್ತುರಾಜ್ ರವರ ತಂದೆ ಪುಟ್ಟಸ್ವಾಮಿ ಪರಿಚಯಸ್ತರು ಅವರನ್ನು ಭೇಟಿ ಮಾಡಿದಾಗ ಹೇಳ್ತಾರೆ ಮುಂದೆ ನೀನು ಚಿತ್ರ ಮಾಡುವಾಗ ನನ್ನ ಮಗನಿಗೊಂದು ಅವಕಾಶ ಕೊಡಿ ಅಂತ, ಅದೃಷ್ಟವಶಾತ್ ಅಣ್ಣಾವ್ರ ನಂಜನಗೂಡು ಬಸ್ ನಿಲ್ದಾಣದಲ್ಲಿ ಹೋಗೋದನ್ನು ಗಮನಿಸಿದ ನಿದೇ೯ಶಕರು ಈ ಚಿತ್ರಕ್ಕೆ ಮುತ್ತುರಾಜೇ ಕಣ್ಣಪ್ಪ ಚಿತ್ರಕ್ಕೆ ನಾಯಕರು ಎಂದು ತಿಳಿಸುತ್ತಾರೆ. ದೊಡ್ಡ ನಿಮಾ೯ಪಕರಾದ ಎ. ವಿ. ಮೆಯ್ಯಪ್ಪ ಚೆಟ್ಟಿ ರವರು ನಿಮಾ೯ಣ ಮಾಡಿದ್ದು, ಅಣ್ಣಾವ್ರ ಹೆಸರನ್ನು ಮುತ್ತುರಾಜ್ ರಿಂದ ರಾಜಕುಮಾರ್ ಎಂದು ಬದಲಾಯಿಸಿದರು. ಮೊದಲು ಒಪ್ಪಲಿಲ್ಲ ನಂತರ ಅವರ ಹೆಸರಿನ ಜೊತೆ ರಾಜ್ ಇರಲೇಬೇಕೇಂದು ಹೇಳಿದಾಗ ಅದರಂತೆ ಹೆಸರಿಟ್ಟರು ಮುತ್ತುರಾಜ್ ರಾಜ್ ಕುಮಾರ್ ಆದರು.
ಮುಗ್ಧ ಮಾನವ ಬೇಡ ಪಾತ್ರದಲ್ಲಿ ಶಿವ ಎಂದರೆ ತುಂಬಾ ಭಕ್ತಿ, ಶಿವನಿಗಾಗಿ ಪೂಜೆ ಮಾಡಿ ನೈವೇದ್ಯ ಏನೂ ಇಲ್ಲವೆಂದು ಅರಿತು ಜಿಂಕೆಯನ್ನು ಬೇಟೆಯಾಡಿ ಆ ಮಾಂಸವನ್ನು ಆಹಾರವಾಗಿ ಇಡುತ್ತಾರೆ, ಹಾಗಿಟ್ಟರೂ ಶಿವ ಲಿಂಗದ ಕಣ್ಣುಗಳು ಅಳುವುದನ್ನು ಅರಿತು ತನ್ನ ಮೊದಲ ಕಣ್ಣನ್ನು ಕಿತ್ತು ಆ ಲಿಂಗಕ್ಕೆ ಇಟ್ಟರೂ ಶಿವ ಅಳುವುದನ್ನು ನಿಲ್ಲಿಸುವುದಿಲ್ಲ, ಏನೂ ಅರಿಯದ ಮುಗ್ಧ ಮಾನವ ತನ್ನ ಮತ್ತೊಂದು ಕಣ್ಣನ್ನು ಕಿತ್ತು ಶಿವಲಿಂಗಕ್ಕೆ ಇಡುತ್ತಾರೆ, ಕೊನೆಯಲ್ಲಿ ಶಿವ ಇವರ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷವಾಗಿ ಬೇಡರ ಕಣ್ಣಪ್ಪ ಎಂದು ನಾಮಕರಣ ಮಾಡುವುದು.
ಅಣ್ಣಾವ್ರ ಜೊತೆ ಮಡದಿಯಾಗಿ ಹೆಸರಾಂತ ನಟಿ ‘ಪಂಡರೀಬಾಯಿ “ನಟನೆ ಮೆಚ್ಚುಗೆ ಪಡೆಯುವುದು.
ಮೊದಲ ಚಿತ್ರದಲ್ಲಿ ನಟಿಸಿದ ಅಣ್ಣಾವ್ರ ನಟನೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡುವಂತದು.
ಬಾಕ್ಸ್ ಆಫೀಸ್ ಪರಬ್ರಹ್ಮ, ನಟಸಾವ೯ಭೌಮ, ಗಾನಗಂಧವ೯,ಡಾ.ರಾಜ್ ಕುಮಾರ್ ಇಂದಿಗೆ ಚಿತ್ರರಂಗ ಪ್ರವೇಶಿಸಿ 66 ವಷ೯ಗಳು.”ಇಂದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಣ್ಣಾವ್ರ ಹೆಸರು ಸುವಣಾ೯ಕ್ಷರದಲ್ಲಿ ದಾಖಲಾದ ದಿನ “
“ಈ ಚಿತ್ರ ನಂತರ ತಮಿಳು, ತೆಲುಗು ಮತ್ತು ಇತರೆ ಭಾಷೆಯಲ್ಲಿ ತಜು೯ಮೆಯಾಗಿ ಪ್ರಪ್ರಥಮ ಪ್ಯಾನ್ ಇಂಡಿಯ ಸಿನಿಮಾ ಎನಿಸಿಕೊಂಡಿದೆ”.
ಹೇಗೆ ಆ ಚಿತ್ರದಲ್ಲಿ ಕಣ್ಣುಗಳನ್ನು ದಾನ ಮಾಡಿ ಕಣ್ಣಪ್ಪ ಎನಿಸಿಕೊಂಡರೋ ಹಾಗೆ ನಿಜ ಜೀವನದಲ್ಲಿ ಅಂಧರ ಬಾಳಿಗೆ ಬೆಳಕು ನೀಡುವ ಮೂಲಕ ನೇತ್ರದಾನದ ಸಂದೇಶ ನೀಡಿದ್ದಾರೆ.
ಯುಗಕ್ಕೆ ಒಬ್ಬರೇ ಯುಗಪುರುಷ ಅವರೇ ನಮ್ಮ ರಾಜಕುಮಾರ 🌹
ಕನ್ನಡ ಚಿತ್ರರಂಗಕ್ಕೆ ರಾಜ್ ಕುಮಾರ್ ರವರು ಪರಿಚಯವಾಗಿ ಮುಂದೆ ಇಡೀ ವಿಶ್ವ ಮೆಚ್ಚುವ ಕಲಾವಿದರಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ 💐
ಮತ್ತೊಮ್ಮೆ ಹುಟ್ಟಿ ಬನ್ನಿ ಕರುನಾಡ ದೇವರೇ 🙏
ಆತ್ಮೀಯ ರಾಜ್ ವಂಶ ಅಭಿಮಾನಿ ದೇವರು ಕನ್ನಡ ಭಾಷೆ ಕನ್ನಡ ನಾಡು ನುಡಿ ಅಭಿಮಾನ ಸಮಾಜ ಸೇವಕರು ಶ್ರೀ ಯುತರು ಶ್ರೀನಿವಾಸ್ ಅವರಿಗೆ ಧನ್ಯವಾದಗಳು ನಮಸ್ತೆ ಇಂದಿನ ತಮ್ಮ ಲೇಖನ ಸಂಚಿಕೆ ಮಾಹಿತಿ ವಿಶೇಷ ಗೌರವ ದೊರೆತಿದೆ ಕಾರಣ ಕನ್ನಡ ಚಿತ್ರ ರಂಗ ಮರಳು ಭೂಮಿ ರೀತಿ ಬರಡಾಗಿ ಇದ್ದಂತ ಸಮಯದಲ್ಲಿ ಕರುನಾಡಿಗೆ ತಾಯಿ ಭುವನೇಶ್ವರಿ ಒಬ್ಬ ಮುತ್ತು ರಾಜಕುಮಾರ ರನ್ನು ಗುಬ್ಬಿ ವೀರಣ್ಣ ಸುಬ್ಬಯ್ಯ ನಾಯ್ಡು ನಾಟಕ ರಂಗಭೂಮಿ ವಿಶ್ವ ವಿದ್ಯಾನಿಲಯದಿಂದ ಒಬ್ಬ ಕಲಾ ದೇವತೆ ಸರಸ್ವತಿ ಪುತ್ರರು ಮುತ್ತು ರಾಜ್ ಅವರನ್ನು ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಕನ್ನಡ ಬೆಳ್ಳಿ ತೆರೆಗೆ ಎಚ್ ಎಲ್ ಏನ್ ಸಿಂಹ ಅವರು ಕೊಟ್ಟ ಸ್ವಾತಿ ಮುತ್ತು ಅಪ್ಪಾಜಿ ದೇವರು ಮುತ್ತು ರಾಜಕುಮಾರ್ ಆಮೇಲೆ ನೆಡೆದಿದ್ದು ಇತಿಹಾಸ ಐತಿಹಾಸಿಕ ಚರಿತ್ರೆ ಕನ್ನಡ ನಾಡಿನ ಧ್ರುವ ತಾರೆ ಅಪ್ಪಾಜಿ ದೇವರು ಅವರ ಬಗ್ಗೆ ಬರೆದಿರುವ ನಿಮ್ಮ ಲೇಖನ ಶ್ಲ್ಯಾಘನೀಯ ನಿಜಕ್ಕೂ ನಿಮ್ಮ ಬರವಣಿಗೆ ಶಕ್ತಿ ಅಗಾಧ ಹೀಗೆಯೇ ತಮ್ಮ ಲೇಖನ ಮುಂದುವರಿಯಲಿ ಧನ್ಯವಾದಗಳು ನಮಸ್ತೆ
Thank u.
Please tell your friends to read the articles also regularly.