ಭಜರಂಗಿಯ ಭಾರೀ ವಿಲನ್ನುಗಳು

ಒಂದು ಸಿನಿಮಾದಲ್ಲಿ ಕಥೆಯು ನಾಯಕ ಪ್ರಧಾನವಾಗಿದ್ರು ಅದರಲ್ಲಿ ಒಬ್ಬ ದೊಡ್ಡ ಖಳನಾಯಕನಿದ್ದಾಗಲೇ ಆ ಕಥೆಯ ಆಯಾಮ ಹೆಚ್ಚೋದು, ಭಜರಂಗಿ-2 ರಲ್ಲಿ ನಾಯಕ ಶಿವರಾಜಕುಮಾರ್ ಪಾತ್ರ ಇನ್ನು ಹೆಚ್ಚು ಬಲಿಷ್ಠವಾಗಿದ್ದು, ಉತ್ಕೃಷ್ಠವಾಗಿರುತ್ತದೇ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಅದಕ್ಕೆ ಕಾರಣ ಕಥಾವಸ್ತು ಒಂದೆಡೆಯಾದರೆ ಮತ್ತೊಂದೆಡೆ ಅವರ ಎದುರಾಗಿ ನಿಂತಿರುವ ದೈತ್ಯಾಕಾರದ, ದೈಯ್ಯ ಸ್ವರೂಪ ಹೊಂದು ಭೀಭತ್ಸ ಬೀರುವ ರಕ್ಕಸರ ಹಿಂಡು.. ಆಜಾನುಬಾಹುಗಳು, ಆಳವಾದ ನೋಟದಿಂದಲೇ ನಡುಕ ತರಿಸುವ ಅಗಲದ ಕೆಂಗಣ್ಣುಗಳು, ಕೆದರಿದ ಜಟೆ, ಕೆಂಚು ಗಡ್ಡ, ವಿಕೃತ ನಡೆ, ರುದ್ರ ನರ್ತನ…

ಬರೀ ಒಬ್ಬಿಬ್ಬರಲ್ಲ ಇಂತವರ ಒಂದು ಪಡೆಯೇ ಇದೆ! ಭಜರಂಗಿ ಮೊದಲ ಭಾಗದಲ್ಲಿ ರಕ್ತಾಕ್ಷನಾಗಿ ಕಂಡ “ಸೌರಭ್ ಲೋಕಿ”ಯನ್ನ ಯಾರೂ ಮರೆಯರು, ಆ ಘೋರ ಮರುಕಳಿಸಲಿದೆ ಹೊಸ ಅಕಾರಗಳಲ್ಲಿ. ಈ ಪಾತ್ರವನ್ನು ಅವಚುಕಟ್ಟಾಗಿ ನಿಭಾಯಿಸಿರುವ ಸಾಲಲ್ಲಿ ಹಲವು ಹೊಸ ನವ ಪ್ರತಿಭೆಗಳು ಮತ್ತು ಪಳಗಿದ ಕಲಾವಿದರು ಇದ್ದಾರೆ. ಪರದೆಯಮೇಲೆ ಇವರ ಆರ್ಭಟವನ್ನು ನೋಡುವಾಗ ಸಿಗುವ ಅನುಭವವೇ ಬೇರೆ ಅಭಿನಯ ರಾಕ್ಷಸರು, ನಟ ಸಮರ್ಥರು ಇವರುಗಳು.ಸುಮಾರು 70-80 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಆ ಪಾತ್ರವಾಗಿ ಜೀವಸಿದ್ದಾರೆ. ವಜ್ರಗಿರಿ, ಚೆಲುವರಾಜು, ಯೋಗಿ, ಗಿರಿ, ಪ್ರಶಾಂತ್, ಇನ್ನು ಹತ್ತು ಹಲವು ಭಾರಿ ಗಾತ್ರದ ಕಲೆ ನಾಳೆ ಬೆಳಗ್ಗೆ ಅನಾವರಣಗಳ್ಳಲಿದೆ….

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply