ಭಲೇ ರಾಜ

ನಾನೇ ಬಾಳಿನ ಜೋಕರ್. ನಾನೇ ಬಡವರ ಮೆಂಬರ್. ಕರೆಯೋ ಹೆಸರೋ ಭಲೇರಾಜ ನಾಳೆ ಊಟಕೆ ಚಕ್ಕರ್ ಎನ್ನುತ್ತಾ ಪಿಬಿಎಸ್ ದನಿಯಲ್ಲಿ ಹಾಡುತ್ತಾರೆ ರಾಜ್. ಟಿ ಶರ್ಟ್, ಒಂದು ಕಾಲು ಮಡಿಚಿರುವ ಪ್ಯಾಂಟ್, ತಲೆ ಮೇಲೆ ಟೋಪಿ. ಅದಕ್ಕೆ ಪುಕ್ಕಗಳು. ಹಿಂದೆ ಪಿಕ್ ಪಾಕೆಟ್. ಈಗ ರಾಬ್ ಪೀಟರ್ ಪೇ ಪೌಲ್ ಸ್ವಭಾವ. ಒಂದು ದಿನ ಒಬ್ಬ ಯುವತಿಯ ಪರ್ಸ್ ಮೂವರು ಕಳ್ಳರು ಕದಿಯುತ್ತಾರೆ. ತಗೋಳ್ಳಿ ಫೈಟಿಂಗು. ಕೊನೆಗೆ ಪರ್ಸ್ ತೆಗೆದು ನೋಡಿದರೆ ಆ ಯುವತಿಯ ಪರ್ಸಿನಲ್ಲಿ ರಾಜ್ ಮತ್ತು ಆ ಯುವತಿ (ಬಿವಿರಾಧ) ಪಟ ಇರುತ್ತೆ. ಅವರಿಬ್ಬರೂ ಅಣ್ಣ ತಂಗಿ!

ಚಿಕ್ಕಂದಿನಲ್ಲಿ ಅಮ್ಮನ (ಜಯಶ್ರೀ) ಜೊತೆ ರೈಲಿನಲ್ಲಿ ಹೋಗುವಾಗ ಅಪಘಾತ ಆಗಿ ಬೇರೆ ಆಗಿರುತ್ತಾರೆ. ಅದೇ ಡಬ್ಬಿಯಲ್ಲಿದ್ದ ತಾಯಿಯಿಲ್ಲದ ತಬ್ಬಲಿ ಮಗನಿಗೆ (ರಂಗ) ಶ್ರೀಮಂತ ತಾಯಿ ಆಗುತ್ತಾಳೆ ಜಯಶ್ರೀ. ಇತ್ತ ಹಸಿವಿನಿಂದ ಕಂಗೆಟ್ಟ ಮಕ್ಕಳಿಗೆ ಯಾರೂ ಇಲ್ಲದ ಕೆ ಎಸ್ ಅಶ್ವತ್ಥ್ ಆಶ್ರಯ ನೀಡುತ್ತಾರೆ. ನದಿಯಲ್ಲಿ ಹುಡುಗನೊಬ್ಬನನ್ನು ತಳ್ಳಿದ ರಾಜ ಆ ಹುಡುಗ ಸತ್ತನೆಂದು ತಿಳಿದು ಮನೆಯಿಂದ ಓಡಿ ಹೋಗುತ್ತಾನೆ. ತಂಗಿ ಪುಷ್ಪಲತಾ ಅಲ್ಲೇ ಬೆಳೆಯುತ್ತಾಳೆ. ಅವರು ಊರು ಬಿಡುವುದರಿಂದ ರಾಜನಿಗೆ ತಂಗಿ ಎಲ್ಲೆಂದು ತಿಳಿಯುವುದಿಲ್ಲ.

ಫಾಸ್ಟ್ ಫಾರ್ವರ್ಡ್… ರಾಜನ ಮನೆಗೆ ಅಯಾಚಿತವಾಗಿ ರಾಣಿ (ಜಯಂತಿ) ಬರುತ್ತಾಳೆ. ಅವಳು ಸಿ.ಐ.ಡಿ. ಎಂದು ನಮಗೆ ತಿಳಿಯುವ ಅನೇಕ ಸಂದರ್ಭಗಳಿವೆ. ಬೀದಿಯಲ್ಲಿ ಕುಣಿಯುತ್ತಾಳೆ, ರಾಜನ ಮನೆ ಸೇರಿ ಅವನನ್ನು ಗೋಳು ಹುಯ್ದುಕೊಳ್ಳುತ್ತಾಳೆ. ಹೇಗೋ ರಂಗನ ಡ್ರೈವರ್ ಕೆಲಸ ಗಿಟ್ಟಿಸಿದ ರಾಜ ಯಾವಾಗಲೋ ತಂಗಿಗೆ ತಾನೇ ಅಣ್ಣ ಎಂದು ಬಾಯಿ ಬಿಡುತ್ತಾನೆ.

ರಂಗನಿಗೂ ಲತಾಗೂ ಮದುವೆ ಆಗುತ್ತದೆ. ಹಲಂ ರಂಗನನ್ನು ಬಲೆಗೆ ಹಾಕಿಕೊಂಡು ಅವನಿಂದ ಕಳ್ಳ ಸಾಗಾಣಿಕೆ ಮಾಡಿಸುತ್ತಾಳೆ.

ನಾಗಪ್ಪ, ಎಂ.ಪಿ.ಶಂಕರ್ ಕಳ್ಳರು.

ಕೊನೆಗೆ ಎಲ್ಲವೂ ಶುಭಂ.

ನಾನೇ ಬಾಳಿನ ಜೋಕರ್ ಒಂದೇ ನನಗೆ ನೆನಪಿದ್ದ ಹಾಡು. 

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply