‘ಭಾಗ್ಯದ ಲಕ್ಷ್ಮಿ ಬಾರಮ್ಮ’

ಕೆಲಸ ಸಿಗದೇ ಪರದಾಡುವ ಜೋಡಿ. ಮೂಕರಂತೆ ನಟಿಸಿ ಉದ್ಯೋಗ ಗಿಟ್ಟಿಸಿ ನಂತರ ಅಲ್ಲಿಂದ ಹೊರಬಂದು ಹೊಸ ಸ್ಕೀಂ ಮಾಡಲು ಆಲೋಚಿಸುತ್ತಾರೆ. ಆದರ್ಶ ದಂಪತಿ ಪೈಪೋಟಿಗೆ ಹೊರಟಾಗ ಮಗುವೊಂದು ಸಿಗುತ್ತದೆ. ಪೈಪೋಟಿಯಲ್ಲಿ ಎಲ್ಲ ರೀತಿಯ ಸ್ಪರ್ಧಿಗಳನ್ನು ಗೆಲ್ಲುತ್ತ ಇದ್ದಂತೆ ಅವರಲ್ಲಿ ಪ್ರೇಮಾಂಕುರ ಆಗುತ್ತದೆ. ಒಂದು ಕ್ರೇಝಿ ಕ್ಲೈಮ್ಯಾಕ್ಸ್ ನಂತರ ಚಿತ್ರ ಮುಗಿಯುತ್ತದೆ.
ರಸಿಕರ ರಾಜ ರಾಜ್‌ಕುಮಾರ್ ನವರಸ ಪ್ರದರ್ಶನ ಮಾಡಿದ್ದಾರೆ.
ಮಾಧವಿ ಕೂಡ ಸಖತ್ ನಟನೆ.
ಸಿಂಗೀತಂ ಶ್ರೀನಿವಾಸ್ ರಾವ್ ಈ ಜೋಡಿಯಿಂದ ಹಾಲು ಜೇನು ಚಿತ್ರದಲ್ಲಿ ಅಳಿಸಿದರೆ ಇದರಲ್ಲಿ ನಗಿಸುತ್ತಾರೆ.
ಎಸ್ಪಿ ಅವರ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು.. ರಾಜ್ ವಾಣಿ ಮರಾಠಿ ಲಾವಣಿ ಶೈಲಿಯ ನೀ ಅತ್ತರೆ ಎಂಥಾ ಚಂದ… ಕಾಮಿಡಿ ಹಾಡು.. ಏನು ಮಾಯವೋ ಏನುಮರ್ಮವೋ… ಪ್ರೇಮಗೀತೆ.. ಯಾವ ಕವಿಯು ಬರೆಯಲಾರ… ಇನ್ನೂ ಹತ್ತಿರ ಹತ್ತಿರ ಬರುವೆಯಾ ಅಂತೂ ಬಹಳ ಚಂದ. ಅಂದ ಹಾಗೆ ಚಿತ್ರದ ಸಂಗೀತ ಸಿಂಗೀತಂ ಅವರದೇ.
ಆನಂದ ಕಂಪೆನಿ ಆ್ಯಡ್‌ಗಳ ಹಾಡೂ ಸಖತ್.
ಮಾಧವಿ ಇನ್ನೂ ಹತ್ತಿರ ಹತ್ತಿರ ಬರುವೆಯಾ ಅನ್ನುತ್ತಾ ರಾಜ್ ಅವರನ್ನು ದೂರ ಹೋಗಿ ಎಂದು ಸನ್ನೆ ಮಾಡುವ ದೃಶ್ಯ ಮುದ ನೀಡುತ್ತದೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply