ಕಲಾವಿದರಲ್ಲಿ ವಿಶೇಷತೆ ಇರೋದು ಸಹಜ, ಒಬ್ಬೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಅಭಿಮಾನಿಗಳಿಗೆ ತಮ್ಮ ನಟನೆಯ ಮೂಲಕ ಜನರಿಗೆ ಆನಂದವನ್ನು ನೀಡುತ್ತಾರೆ, ಆದರೆ ಈ ಮಹಾನ್ ಕಲಾವಿದರ ಬಗ್ಗೆ ಹೇಳಲು ನಾನು ಸ್ವಲ್ಪ ಚಿಕ್ಕವನು, ನನಗೆ ತಿಳಿದ ಹಾಗೆ ಕೆಲವು ವಿಚಾರಗಳು ನಿಮಗಾಗಿ..
“ಎಲ್ಲಾ ಕಲಾವಿದರು ಮಾತನಾಡಿ ನಟನೆ ಮಾಡಿದರೆ” ಇವರು “ಮೊದಲು ನಟನೆ ಮಾಡಿ ನಂತರ ಮಾತನಾಡುವ ಅಭ್ಯಾಸ ಹೊಂದಿದವರು, ಮರುತೂರ್ ಗೋಪಾಲನ್ ರಾಮಚಂದ್ರನ್ ಜನಪ್ರಿಯತೆಯ ಹೆಸರು (ಎಂ ಜಿ ಆರ್). ಖ್ಯಾತ ಚಲನಚಿತ್ರ ನಟರು, ಚಲನಚಿತ್ರ ರಂಗದಲ್ಲಿ ದಂತಕಥೆಯಾಗಿ ಉಳಿದ ಅಧ್ಭುತ ಕಲಾವಿದರು, ತಮಿಳು ನಾಡಿನ ಜನಪ್ರಿಯ ಮುಖ್ಯಮಂತ್ರಿ (ಹತ್ತು ವರ್ಷಗಳ ಅವಧಿ) ಜನಸೇವೆ ಮಾಡಿದ ಜನರ ಮನಸ್ಸನ್ನು ಗೆದ್ದ ಮರೆಯಲಾಗದ ಮಾಣಿಕ್ಯ “ಪುರಚ್ಚಿ ತಲೈವರ್ “ಡಾ ಎಂ ಜಿ ಆರ್ ಸರ್ ರವರ ಜನುಮ ದಿನದ ನೆನಪಿನಲ್ಲಿ..
ಹುಟ್ಟಿದ್ದು ಕಂಡಿ, ಶ್ರೀಲಂಕ, ಮೇಲಕಾತ್ ಗೋಪಾಲನ್ ಮೆನನ್ ಮತ್ತು ಮರತೂರ್ ಸತ್ಯಭಾಮ ರವರ ಮಗ, ಮಲಯಾಳಿ ನಾಯರ್ ಕುಟುಂಬ, ಎಂ ಜಿ ಆರ್ 2.5 ವಷ೯ದಲ್ಲೇ ತಮ್ಮ ತಂದೆ ಕಳೆದುಕೊಂಡರು, ನಂತರ ತಂಗಿ ಖಾಯಿಲೆಯಿಂದ ತೀರಿಹೋದರು, ತಾಯಿ ಮನೆ ಕೆಲಸ ಮಾಡಿ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸಿ ಜೀವನ ಮಾಡ್ತಿದ್ರು.
ಎಂ ಜಿ ಆರ್ ಶಾಲಾದಿನಗಳಲ್ಲಿ ನಟನೆ ಕಲಿಯೋ ಆಸಕ್ತಿ ಇದಕ್ಕಾಗಿ ತರಬೇತಿ ಪಡೆಯಲು ಬಾಯ್ಸ್ ಡ್ರಾಮಾ ಕಂಪನಿ ಸೇರಿ ನಟನೆ ಜೊತೆಗೆ ಹಾಡೋದು, ಡಾನ್ಸ್ ಮಾಡೋದು, ಕತ್ತಿ ವರಸೆ ..ಹೆಚ್ಚು ಗಮನ ಕೊಟ್ಟು ಕಲಿತರು.
ಇವರು ಚಿಕ್ಕಂದಿನಲ್ಲಿ ಪಟ್ಟ ಕಷ್ಟ ದೂರಮಾಡಿ ಎಲ್ಲರ ರೀತಿ ಬದುಕುವ ಆಸೆ ಮತ್ತು ಕಲಿತ ಪಾಠ ತಮ್ಮ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಕ್ಕೆ ಸಹಾಯವಾದವು, ಮದರಾಸ್ ಕಂದಸ್ವಾಮಿ ಮೊದಲಿಯಾರ್ ನಾಟಕ ಕಂಪನಿಯಲ್ಲಿ ಹೆಣ್ಣು ವೇಷ ಧರಿಸಿ ನಟನೆ ಮಾಡಿದ್ದೂ ಉಂಟು. ನಂತರ ಬಾಯ್ಸ್ ಕಂಪನಿಗೆ ಮರಳಿ ಬಂದು ಅಲ್ಲಿ ನಾಟಕ ಆಡುತ್ತಿದ್ದರು.
ಎಂ ಜಿ ಆರ್ ಬಾಲ್ಯದಲ್ಲಿ ಹಿಂದೂ ದೇವರ ಶ್ರೀ ಮುರುಗನ್ ಭಕ್ತರು, ತಾಯಿಗೆ ಇಷ್ಟವಾದ ದೇವರು ಗುರುವಾಯುರಪ್ಪನ್.
ಮೊದಲ ನಟನೆ ಸತಿಲೀಲಾವತಿ ಚಿತ್ರ, ನಿದೇ೯ಶಕರು ಎಲಿಸ್ ಆರ್ ದುಗ೯ನ್ (ಅಮೇರಿಕ ಫಿಲಂ ಡೈರೆಕ್ಟರ್). ರೊಮ್ಯಾನ್ಸ್ ಆಕ್ಷನ್ ಫಿಲಂ ನಲ್ಲಿ ನಟಿಸೋಕೆ ಪ್ರಾರಂಭ.. ಮಂತಿರಿ ಕುಮಾರಿ ಚಿತ್ರ ಇವರಿಗೆ ಜನಪ್ರಿಯತೆ ನೀಡಿದೆ.. ಕರುಣಾನಿಧಿ ರಚನೆ, ಮಲೈಕ್ಕಳ್ಳನ್ ಚಿತ್ರ ಹೆಚ್ಚು ಗಮನ ಸೆಳೆದಿದೆ. ನಾಡೋಡಿ ಮಣ್ಣನ್, ತಿರುಡಾದೆ, ತಾಯ್ ಸೊಲ್ಲೈ ತಟ್ಟಾದೆ, ಪಾಸಂ, ಕಲೈಯರಸಿ, ಕುಡುಂಬ ತಲೈವನ್, ವೇಟೈಕಾರನ್, ಪಣಕ್ಕಾರ ಕುಡುಂಬಂ, ದೈವ ತಾಯ್, ಎಂಗ ವೀಟು ಪಿಳ್ಳೈ, ಮುಗರಾಸಿ, ನಾಡೋಡಿ, ಅರಸ ಕಟ್ಟಳೈ, ವೆವಸಾಯ್, ನಮ್ ನಾಡು, ತಲೈವನ್, ರಿಕ್ಷಾಕಾರನ್, ರಾಮನ್ ತೇಡಿಯ ಸೀತೈ, ನಲ್ಲ ನೇರಂ,ಅವಸರ ಪೋಲಿಸ್, ಆಯಿರತ್ತಿಲ್ ಒರುವನ್, ಸಿರುತ್ತು ವಾಳ ವೇಂಡುಂ, ನಾನ್ ಏ ಪಿರಂದೇನ್ ಹೀಗೆ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ…
💐🌹ನಿಮಾ೯ಪಕ ಹಾಗೂ ನಿದೇ೯ಶಕರಾಗಿ ನಾಡೋಡಿ ಮಣ್ಣನ್, ಅಡಿಮೈ ಪೆಣ್, ಉಲಗಂ ಸುಟ್ರು ವಾಲಿಬನ್, ಮಧುರಾಯ್ ಮೀಟ್ಟ ಸುಂದರಪಾಂಡಿಯನ್💐🌹.
🎩ಎಂಗ ವೀಟು ಪಿಳ್ಳೈ ಚಿತ್ರದ ನಟನೆಗೆ ಸ್ಪೆಷಲ್ ಜೂರಿ ಅವಾಡ್೯ ಫಿಲಂ ಫೇರ್ ಪ್ರಶಸ್ತಿ ಸೌತ್.
🦚ಕೂಡಿಯಿರುಂದ ಕೋಯಿಲ್ ಚಿತ್ರದ ನಟನೆಗೆ ಅತ್ಯುತ್ತಮ ನಟ ,ಅತ್ಯುತ್ತಮ ಚಿತ್ರ, ತಮಿಳು ನಾಡು ಸಕಾ೯ರ.
🌲ಅಡಿಮೈ ಪೆಣ್ ಚಿತ್ರದ ನಟನೆಗೆ ಅತ್ಯುತ್ತಮ ಚಿತ್ರ ಫಿಲಂ ಫೇರ್ ಪ್ರಶಸ್ತಿ ಸೌತ್.
🏍ರಿಕ್ಷಾಕಾರನ್ ಚಿತ್ರದ ನಟನೆಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ.
ಎಂ ಜಿ ಆರ್ ಜೊತೆ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ ಜಯಲಲಿತ (ಜನಪ್ರಿಯ ಜೋಡಿ ಎನಿಸಿದೆ) , ಲತ, ಬಿ ಸರೋಜದೇವಿ, ನಿಮ೯ಲ ಇನ್ನೂ ನಟಿಯರು ಇವರ ಚಿತ್ರಗಳಲ್ಲಿ ನಟಿಸಿದ್ದಾರೆ.
ಅಣ್ಣಾದ್ರಾವಿಡ ಮುನ್ನೇಟ್ರ ಕಳಗಂ (ಎಐಎಡಿಎಮ್ಕೆ) ಪಕ್ಷ ಸ್ಥಾಪಿಸಿ ಡಿ ಎಂ ಕೆ ಪಕ್ಷ ಆಪೋಸಿಟ್ ನಿಂತು 1977 ರಲ್ಲಿ ತಮಿಳು ನಾಡಿನ ಮುಖ್ಯಮಂತ್ರಿ ಆದರು, ಮೊದಲ ಚಿತ್ರ ನಟ ಮುಖ್ಯಮಂತ್ರಿ ಆಗಿದ್ದು ಇತಿಹಾಸ.
ಮಂತ್ರಿ ಆದ ತಕ್ಷಣ ಇವರು ಗಮನ ಹರಿಸಿದ್ದು ಬಡತನ ನಿರ್ಮೂಲನೆ, ಶಿಕ್ಷಣ, ಸಾಮಾಜಿಕ ಕಾಯ೯ಗಳು, ತಾನು ಜೀವನದಲ್ಲಿ ನೋಡಿದ ಕಷ್ಟ ಜನರಿಗೆ ಬರಬಾರದೆಂದು, ಜನರಿಂದ ನಾವು ನಮ್ಮಿಂದ ಜನ ಅಲ್ಲ ಅನ್ನೋ ಮಾತು ಅನ್ವಯ, ಸಕಾ೯ರಿ ಹಾಗೂ ಸಕಾ೯ರೇತರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ನೀಡುವ ಕಾನೂನು ತಂದದ್ದು, ತೀರ ಬಡತನದಲ್ಲಿರುವ ಮಕ್ಕಳಿಗೆ ಸಹಾಯ ಮಾಡೋದು, ಮಹಿಳೆಯರಿಗೆ ವಿಶೇಷ ಬಸ್ ವ್ಯವಸ್ಥೆ, ಚಲನಚಿತ್ರ ರಂಗದಲ್ಲಿ ಕೆಲಸ ಮಾಡುವ ಟೆಕ್ನಿಷಿಯನ್ ಮಕ್ಕಳಿಗೆ ಕೊಡಂಬಾಕಂ ನಲ್ಲಿ ಎಂ ಜಿ ಆರ್ ಪ್ರೈಮರಿ ಹಾಗೂ ಸೆಕೆಂಡರಿ ಸ್ಕೂಲ್ ಕಟ್ಪಿಸಿ ಉಚಿತವಾಗಿ ವಿಧ್ಯಾಭ್ಯಾಸ ನೀಡುತ್ತಿದ್ದರು.
ತಮಿಳು ಯೂನಿವರ್ಸಿಟಿ ಮತ್ತು ಮದರ್ ತೆರೆಸಾ ಯೂನಿವರ್ಸಿಟಿ ಮಹಿಳೆಯರಿಗಾಗಿ ಸ್ಥಾಪನೆ. ಎಂ ಜಿ ಆರ್ ರವರಿಗೆ ನಮ್ಮ ಕನ್ನಡ ಕುವರ ಅಣ್ಣಾವ್ರೆಂದರೆ ಇನ್ನಿಲ್ಲದ ಪ್ರೀತಿ, ಅಣ್ಣಾವ್ರಿಗೂ ಸಹ. ಶಿವಣ್ಣ ರವರ ಮದುವೆಗೆ ಇವರು ಬಂದು ಆಶಿವ೯ದಿಸಿದ್ದು ವಿಶೇಷ.
ಜನರಿಗಾಗಿ ತನ್ನ ಇಡೀ ಜೀವನ ಮೀಸಲಿಟ್ಟ ಇವರಿಗೆ ಸನ್ಮಾನಗಳು ಲೆಕ್ಕವಿಲ್ಲ, ತಮಿಳು ನಾಡಿನಲ್ಲಿ ಇವರೆಂದರೆ ದೇವರೆನ್ನೋ ಭಾವನೆ ಯಾವ ಊರು ಏರಿಯಾದಲ್ಲಿ ಇವರ ಭವ್ಯವಾದ ಪುತ್ಥಳಿ ಇದ್ದೇ ಇರುತ್ತದೆ. ಜನರ ಪ್ರೀತಿ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ.
🏇ಇವರ ಸ್ಮರಣೆಯ ಗೌರವಾಥ೯ವಾಗಿ ಭಾರತ ಸರ್ಕಾರ ಪೋಸ್ಟಲ್ ಸ್ಟಾಂಪ್ 1990 ರಲ್ಲಿ ಬಿಡುಗಡೆ ಮಾಡಿದೆ.
🦋ಸವ೯ಶ್ರೇಷ್ಠ ಪ್ರಶಸ್ತಿ ಭಾರತ ರತ್ನ ಗೌರವ.
🌺ಪುರಚ್ಚಿ ತಲೈವರ್ ಎಂದು ಕರೆಯೋದು.
👒ಡಾ ಎಂ ಜಿ ಆರ್ ರಸ್ತೆ (ಎಂ ಜಿ ಆರ್ ನಗರ) .
🎷ಎಂ ಜಿ ಆರ್ ಪಾಕ್೯ ತೂತುಕುಡಿ.
🌹ಕೇಂದ್ರ ಸಕಾ೯ರ ಇವರ ಸ್ಮರಣಾರ್ಥ 100 ರೂ 5 ರೂ ಕಾಯ್ನ್ ಬಿಡುಗಡೆ.
🌲ಪುರಚ್ಚಿ ತಲೈವ ಡಾ ಎಂ ಜಿ ಆರ್ ಸೆಂಟ್ರಲ್ ಮೆಟ್ರೋ, ತಮಿಳು ನಾಡು.
👑ಹಾನರರಿ ಡಾಕ್ಟರೇಟ್.
ವೆಟ್ರಿಮೀದ್ ವೆಟ್ರಿವಂದು ಉನ್ನೈ ಸೇರುಂ, ನಾನ್ ಉಂಗ ವೀಟ್ಟು ಪಿಳ್ಳೈ, ನಾನಾಣಯಿಟ್ಟಾಲ್ ಆದು ನಡಂದುವಿಟ್ಟಾಲ್ ..
ಇಷ್ಟು ಹೊತ್ತು ನನಗೆ ತಿಳಿದ ಮಟ್ಟಿಗೆ ಬರೆದಿರವೆ, ಮತ್ತೊಮ್ಮೆ ಜನುಮ ದಿನದ ಶುಭಾಶಯಗಳು ಭಾರತ ರತ್ನ ಡಾ ಎಂ ಜಿ ಆರ್ ಸರ್ 💐