ಡಾಲಿ ಧನಂಜಯ್ ಅಭಿನಯದ ಗುರು ಶಂಕರ್ ನಿರ್ದೇಶಿಸಿರುವ ” ಬಡವಾ, ರಾಸ್ಕಲ್” ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಅಂದುಕೊಂಡ ಹಾಗೆ ಸಿನಿಮಾ ಅಚ್ಚುಕಟ್ಟಾಗಿ ,ಮನೋರಂಜೆನೆ ಪೂರಿತವಾಗಿ ತಯಾರಾಗಿದೆ. ಸಿನಿಮಾದಲ್ಲಿನ ಮತ್ತೊಂದು ಸ್ವಾರಸ್ಯಕರ ವಿಷಯ ಅಂದ್ರೆ ನಿರ್ದೇಶಕರಾದ “ಗುರುಪ್ರಸಾದ್” ಮತ್ತು ನೀರ್ ದೋಸೆ ಖ್ಯಾತಿಯ “ವಿಜಯ್ ಪ್ರಸಾದ್” ಕ್ಲೈಮ್ಯಾಕ್ಸ್ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಮೊನ್ನೆಯಷ್ಟೇ ಇಬ್ಬರೂ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ . ಅವರ ಪಾತ್ರದ ಬಗ್ಗೆ ಯಾವ ವಿವರವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಗುರುಪ್ರಸಾದ್ ನಿರ್ದೇಶನದಲ್ಲಿ ಧನಂಜಯ್ ಅಭಿನಯದ “ಎರಡನೆ ಸಲ” ಸಿನಿಮಾ ಬಿಡುಗಡೆಯಾದ ಬಳಿಕ ಇಬ್ಬರ ಮಧ್ಯೆ ಸ್ವಲ್ಪ ಇರಸು ಮುರುಸು ಉಂಟಾಗಿ,ಮಾತಿನ ಚಕಮಕಿಗೆ ಕಾರಣವಾಗಿತ್ತು.ಬೇರೆಯಾಗಿದ್ದ ಇಬ್ಬರನ್ನು ಮತ್ತೆ ಕಾಲ- ಕಲೆ ಒಂದು ಮಾಡಿದೆ. ಹೂಗಳು ನೂರಾದರೇನು ಅವೆಕ್ಕೆಲ್ಲ ಬೇರು(ಸಿನಿಮಾ) ಒಂದೇ ಎಂದು ಮತ್ತೆ ಸಾಬೀತಾಗಿದೆ.
ಮತ್ತೆ ಒಂದಾದ್ರು ಗುರು- ಡಾಲಿ!
