ಮತ್ತೆ ಒಂದಾದ ದುನಿಯಾ ಜೋಡಿ

duniya vijay

ನಿರ್ದೇಶಕ ಸೂರಿ ಅವರು ನಿರ್ಮಾಪಕರಾದ ಜಯಣ್ಣ ಮತ್ತು ಬೋಗೇಂದ್ರ ಅವರೊಂದಿಗೆ ಹೊಸ ಚಿತ್ರಕ್ಕಾಗಿ ಕೈಜೋಡಿಸುತ್ತಿದ್ದಾರೆ. ಇತ್ತೀಚಿನ ಮಾಧ್ಯಮಗಳ ವರದಿಗಳ ಪ್ರಕಾರ, ಮುಂಬರುವ ಈ ಚಿತ್ರಕ್ಕಾಗಿ ದುನಿಯಾ ಜೋಡಿ ಸೂರಿ ಮತ್ತು ನಟ ವಿಜಯ್ ಮತ್ತೆ ಒಂದಾಗಲಿದ್ದಾರೆ ಎನ್ನಲಾಗಿದೆ.

ಸೂರಿಯವರ ಚೊಚ್ಚಲ ನಿರ್ದೇಶನದ 2007ರ ದುನಿಯಾ ಚಿತ್ರ ನಿರ್ದೇಶಕ ಮತ್ತು ನಟ ವಿಜಯ್ ಇಬ್ಬರಿಗೂ ದೊಡ್ಡಮಟ್ಟದ ಯಶಸ್ಸನ್ನು ತಂದುಕೊಟ್ಟಿತ್ತು. ವಿಜಿ ಅವರು ಈ ಚಿತ್ರದಿಂದ ದುನಿಯಾ ವಿಜಯ್ ಎಂದು ಪ್ರಸಿದ್ಧರಾದರೆ, ನಿರ್ದೇಶಕರು ದುನಿಯಾ ಸೂರಿ ಎಂದೇ ಮನೆಮಾತಾದರು. ಈಗ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಮೋದಿ ಮಾಡಲಿದ್ದಾರೆ. ದುನಿಯಾ ನಂತರ, ಇದೇ ಜೋಡಿ ಮತ್ತೆ 2009 ರಲ್ಲಿ ಜಂಗ್ಲಿ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿತು. ಈ ಚಿತ್ರ ಕೂಡ ದೊಡ್ಡ ಮಟ್ಟದ ಹಿಟ್ ಆಯಿತು.
ಜಯಣ್ಣ ಫಿಲ್ಮ್ಸ್ ಈ ಹಿಂದೆ ದುನಿಯಾ ಸೇರಿದಂತೆ ನಿರ್ದೇಶಕ ಸೂರಿ ಅವರ ಕೆಲವು ಚಿತ್ರಗಳನ್ನು ವಿತರಿಸಿದ್ದ ಜಯಣ್ಣ ಫಿಲಂಸ್ ಮೊಟ್ಟಮೊದಲ ಬಾರಿಗೆ ಈ ನಿರ್ದೇಶಕರ ಚಿತ್ರ ನಿರ್ಮಿಸಲು ಕೈ ಹಾಕಿದ್ದಾರೆ. ಚಿತ್ರದ ಮತ್ತಷ್ಟು ಅಧಿಕೃತ ಅಪ್ಡೇಟ್ ಗಳು ಹೊರಬರಬೇಕಿದೆ.
ಒಟ್ಟಿನಲ್ಲಿ ಮತ್ತೊಮ್ಮೆ ದುನಿಯಾ ಜೋಡಿ ಕನ್ನಡದ ಪ್ರೇಕ್ಷಕರನ್ನು ಮೋಡಿ ಮಾಡುವುದಂತೂ ದಿಟ. ಈ ಚಿತ್ರಕ್ಕೆ ಯಶಸ್ಸು ಸಿಗಲೆಂದು ಚಿತ್ರೋದ್ಯಮದ ಹಾರೈಕೆ.

Chitrodyama Updates

Chitrodyama Updates

Leave a Reply