ಕೃಷ್ಣನಿಗೂ ನಟ ಅಜಯ್ ರಾವ್ ಗೂ ಒಂದು ರೀತಿಯಾದ ಅವಿನಾಭಾವ ಸಂಭಂಧ, ಶಶಾಂಕ್ ನಿರ್ದೇಶನದ “ಕೃಷ್ಣನ ಲವ್ ಸ್ಟೋರಿ” ಸಿನಿಮಾದಿಂದ ಪ್ರಾರಂಭವಾದ ಈ ಕ್ಕೃಷ್ಣಾ ಅನ್ನೋ ಶೀರ್ಷಿಕೆ, ಅಜಯ ಅವರಿಗೆ ಒಂದು ರೀತಿಯ ಅದೃಷ್ಟದ ಸಂಕೇತವೇ ಆಯಿತು, ನಂತರ ದಿನಗಳಲ್ಲಿ ಅವರು ಮೊದಲ ಬಾರಿಗೆ ನಿರ್ಮಿಸಿ ನಟಿಸಿದ ಸಿನಿಮಾಗು ” ಕೃಷ್ಣ ಲೀಲಾ” ಅಂತಲೇ ಟೈಟಲ್ ಇಟ್ಟಿದ್ರು.
ಸುಮಾರು 5 ವರ್ಷಗಳ ಬಳಿಕ ಮತ್ತೆ ಕೃಷ್ಣನ ಹೆಸರಲ್ಲಿ ಬರ್ತಿದ್ದಾರೆ ಅಜಯ್ ರಾವ್, ” ಕೃಷ್ಣಾ ಟಾಕೀಸ್” ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ತಯಾರಾಗಿದ್ದು ಏಪ್ರಿಲ್ 9ನೆ ತಾರಿಕಿಗೆ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಅಜಯ್ ಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ, ಜೊತೆಗೆ ಸಿಂಧು ಲೋಕನಾಥ್, ಚಿಕ್ಕಣ್ಣ, ಶೋಭರಾಜ್, ಮಂಡ್ಯ ರಮೇಶ್ ಹಾಗೂ ಪ್ರಮೋದ್ ಶೆಟ್ಟಿ ಪ್ರಮುಖವಾಗಿ ತಾರಾಗಣದಲ್ಲಿದ್ದಾರೆ.
ಸಿನಿಮಾದ ಕಥೆ ಮತ್ತು ನಿರ್ದೇಶನವನ್ನ ವಿಜಯ್ ಅನಂದ ನಿಭಾಯಿಸಿದ್ದು, ಶ್ರೀಧರ ವಿ ಸಂಭ್ರಮ್ ಸಂಗೀತ ಒದಗಿಸಿದ್ದಾರೆ. ಪ್ರತಿಭಾವಂತ ಛಾಯಾಗ್ರಾಹಕ ಅಭಿಷೇಕ್ ಜಿ. ಕಾಸರಗೋಡು ಅವರ ಕ್ಯಾಮೆರಾ ಕಣ್ಣಲಿ ಸಿನಿಮಾನಾ ಸೆರೆ ಹಿಡಿದಿದ್ದಾರೆ. ಏಪ್ರಿಲ್ 9ಕ್ಕೆ ಟಾಕೀಸ್ ಗಳಿಗೆ ಬರಲಿರುವ “ಕೃಷ್ಣಾ ಟಾಕೀಸ್” ಸಿನಿಮಾ ಏನು ಮೋಡಿ ಮಾಡಲಿದೆ ಎಂದು ಕಾದು ನೋಡಬೇಕು.