ಲಾಕ್ಡೌನ್ ಶುರುವಾದಾಗಿನಿಂದ,ಬೆಳಗ್ಗಿನಿಂದ ರಾತ್ರಿಯವರಿಗೂ ಎಲ್ಲರೂ ಟಿ.ವಿ ಮುಂದೆ ಕುಳಿತಿದ್ದಾರೆ.ಕಡೆ ಪಕ್ಷ ಮನೋರಂಜನೆಗಲ್ಲದಿದ್ದರು,ಹೊತ್ತು ಕಳಿಯುವುದಕ್ಕೆ ಅದುವೇ ದಿಕ್ಸೂಚಿ.
“ಟಿ.ಆರ್.ಪಿ.ಯಲ್ಲಿ ಅಗ್ರ ಸ್ಥಾನ” ಎಂಬ ಚಿನ್ನದ ಮಾವಿನ ಹಣ್ಣು ಈ ಬಾರಿ ಉದಯಾ ಟಿವಿಯ ಪಾಲಾಗಿದೆ.. “2000ಕ್ಕು ಅಧಿಕ ಕನ್ನಡ ಸಿನಿಮಾಗಳ ಒರಿಜಿನಲ್ ರೈಟ್ಸ್ ಇರುವ ಏಕೈಕ ಕನ್ನಡ ವಾಹಿನಿ”, ಉದಯ ಟಿ.ವಿ.
ಅದನ್ನು ಸರಿಯಾಗಿ ಉಪಯೋಗಿಸಿ,ಕಳೆದು 30 ದಿನಗಳಿಂದ ದಿನಕ್ಕೆ 4-5 ಸೂಪರ್ ಹಿಟ್ ಸಿನಿಮಾಗಳನ್ನ(ಡಬ್ ಆದ ಸಿನಿಮಾ ಕೂಡ) ಪ್ರಸಾರ ಮಾಡುತ್ತಾ ಎಲ್ಲ ವರ್ಗದ ಪ್ರೇಕ್ಷಕರನ್ನು ತನ್ನತ್ತ ಸೆಳೆದು ಇದೀಗ ಟಿ.ಆರ್.ಪಿ ಯಲ್ಲಿ #1 ಚಾನ್ನೆಲ್ ಆಗಿದೆ.
ಹೊಸದಾಗಿ ಏನು ಸೃಷ್ಟಿಸಲು ಸಾಧ್ಯವಾಗದಿದ್ದಾಗ, ಹಳೆಯದಕ್ಕೆ ಹೊಸ ರೂಪ ನೀಡಿ ಆಕರ್ಷಕವಾಗಿ ಕಾಣುವಂತೆ ಮಾದುವುದೇ ಕ್ರಿಯಾಶೀಲತೆ..
ಆ ಕೆಲಸದಲ್ಲಿ ಕೆಲವು ವಾಹಿನಿಗಳು ತೊಡಗಿದ್ದಾರೆ
ಇಡೀ ಭಾರತದ ಮನೆ ಮಾತಾಗಿದ್ದ, ಶಂಕರನಾಗ್ ನಿರ್ಮಿಸಿ ನಿರ್ದೇಶಿಸಿದ “ಮಾಲ್ಗುದು ಡೇಸ್” ದಾರವಾಹಿ ಕನ್ನಡಕ್ಕೆ ಡಬ್ ಆಗಲಿದ್ದು,ಅದನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನ “zee ಕನ್ನಡ” ವಾಹಿನಿ ಪಡೆದಿದೆ. ಸೋಮವಾರದಿಂದ ಶುಕ್ರವಾರಾದವರಗೆ ಪ್ರತಿ ರಾತ್ರಿ 9:30 ಇದೆ ಮೇ11 ನಿಂದ ಪ್ರಾರಂಭವಾಗಲಿದೆ. “R. K. ನಾರಾಯಣ್” ಬರೆದಿರುವ ಕಾದಂಬರಿ “ಮಾಲ್ಗುಡಿ ಡೇಸ್” ಆಧಾರಿತ ಧಾರಾವಾಹಿ ಇದಾಗಿತ್ತು.
“ಸ್ಟಾರ್ ಸುವರ್ಣ” ಕನ್ನಡದಲ್ಲಿ,ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಮಹಾಭಾರತ ಇದೆ ಸೋಮವಾರದಿಂದ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.
ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯತ್ನಗಳಿಗೆ ಯಾವಾಗಲೂ ಒಳ್ಳೆ ಪ್ರತಿಕ್ರಿಯೆ ದೊರಕಿದೆ.ಈ ಬಾರಿಯು ಅದು ನಿಜ ಆಗಲಿದೆ.