ಮಾಕೆಬಾ ಹಾಡಿನ ಸ್ವಾರಸ್ಯ

ಲೇಖಕರು:ಮೃಣಾಲಿನಿ

ಊ, ಊ …ಮಾಕೆಬಾ ಮೇಕೆ ಬೆ, ಲಾ…ಮೆಕ್ಸ್ ಮೈ ಬಾಡಿ ಡಾನ್ಸ್ ಫಾರ್ ಯು, ಐ ವಾಂಟ್ ಟು ಸೀ ಯು ಫೈಟ್ ಫಾರ್, ಬಿಕಾಸ್ ಯು ಆರಾ ದಿ ರಿಯಲ್ ಬ್ಯೂಟಿ ಒಫ್ ಹ್ಯೂಮನ್ ರೈಟ್ಸ್.

ಅನ್ನುವ ಹಾಡು ರೀಲ್ಸ್ ಸ್ಟಾರಗಳು ಹೆಜ್ಜೆ ಹಾಕುತ್ತಿರುವ ಹೊಸ ಟ್ರೆಂಡಿಂಗ್ ಸಾಂಗ್. ಇದು ಫ್ರಾನ್ಸ್ ದೇಶದ ಗಾಯಕಿ ಜೈನ ಅವರ ‘ಝನಕ’ ಎಂಬ ಚೊಚ್ಚಲ ಆಲ್ಬಮ್ ನ ಹಾಡು.

ಇದು 2015 ರಲ್ಲಿ ಬಿಡುಗಡೆ ಆಗಿ ಫ್ರಾನ್ಸ್ ದೇಶದ ಸಂಗೀತ ಚಾರ್ಟ್ನಲ್ಲಿ ಟಾಪ್ ಹಾಡುಗಳಲ್ಲಿ ಸೇರ್ಪಡೆಯಾಗಿತ್ತು. ಇತ್ತೀಚೆಗೆ ಈ ಹಾಡು ಟಿಕ್ ಟಾಕ್, ಇನ್ಸ್ಟಾಗ್ರಾಮ್, ಯು ಟ್ಯೂಬ್ ಶಾರ್ಟ್ಸ್ ಅಲ್ಲಿ ಮಿಂಚ ತೊಡಗಿದೆ.

ಮಾಕೆಬಾ ಹಾಡಿನ ಸ್ವಾರಸ್ಯ

ಏನಿದರ ವಿಶೇಷತೆ…?

ದಕ್ಷಿಣ ಆಫ್ರಿಕಾದ ಹಾಡುಗಾರ್ತಿ ಮಿರಿಯಮ್ಮ ಮಾಕೆಬಾ ಅವರಿಗೆ ಗೌರವ ಸೂಚಿಸಲು ಈ ಹಾಡನ್ನು ಸ್ವತಃ ಜೈನ ಅವರು ಈ ಹಾಡಿನ ಸಾಹಿತ್ಯ ಬರೆದು, ಇದನ್ನು ‘ಅಫ್ರೋ ಪಾಪ್’ ಶೈಲಿಯಲ್ಲಿ ಹಾಡಿದ್ದಾರೆ.

ಯಾರು ಈ ಮಾಕೆಬಾ…?

ಮರಿಯಮ್ಮ ದಕ್ಷಿಣ ಆಫ್ರಿಕಾ ದ ಕಪ್ಪು ಜನರಿಗೆ ಹೋರಾಡಿದ ಮಹಿಳೆ. ತಮ್ಮ ಕಲೆಯನ್ನು ತಮ್ಮ ಜನರ ಸಂಕಷ್ಟಗಳಿಗೆ ಹೋರಾಡಲು ಬಳಿಸಿಕೊಂಡರು.

ತಮ್ಮ ಜೀವನವನ್ನು ಜನಾಂಗೀಯ ನಿಂದನೆಯ ವಿರುದ್ಧ ಹೋರಾಡಲು ಮುಡಿಪಿಟ್ಟರು. ಇವರು, ದಕ್ಷಿಣ ಆಫ್ರಿಕಾ ಬಿಳಿ ಜನರ ಅಲ್ಪಸಂಖ್ಯಾತ ಸರ್ಕಾರ ಕಪ್ಪು ಜನರ ವಿರುದ್ಧ ಶಸ್ತ್ರಾಸ್ತ್ರವನ್ನು ಬಳಿಸುವ ಹುನ್ನಾರ ನಡೆಸಿದೆ ಎಂದು ವಿಶ್ವ ಸಂಸ್ಥೆಗೆ ದೂರ ಸಹ ಕೊಟ್ಟಿದ್ದರು. ಈ ಶಸ್ತ್ರಾಸ್ತ್ರಗಳನ್ನು ಕಪ್ಪು ಮಹಿಳೆಯರ ವಿರುದ್ಧ ಉಪಯೋಗಿಸುವ ಯೋಜನೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದರು. ಇವರ ಕೂಗು ಹತ್ತಿಕ್ಕಲು, ಸರ್ಕಾರ ಇವರ ನಾಗರಿಕತ್ವವನ್ನು ಕಿತ್ತುಕೊಳ್ಳುವುದಲ್ಲದೆ, ಅವರ ಹಾಡುಗಳನ್ನು ನಿಷೇಧಿಸಿತು.

ಸಾಮಾನ್ಯ ಜನರಲ್ಲಿ ಇವರಿಗೆ ತಾಯಿ ಸ್ಥಾನ ಕೊಟ್ಟು ಇವರಿಗೆ ‘ಮಮ್ಮಾ ಆಫ್ರಿಕಾ’ ಎಂದು ಕರೆಯುತ್ತಾರೆ. ಇಂತಹ ಮಹಿಳಾ ಹೋರಾಟಗಾರ್ತಿಯನ್ನು ಸ್ಮರಿಸಲು, ಜೈನ್ ಅವರು ಈ ಹಾಡುನ್ನು ಅವರಿಗೋಸ್ಕರ ಬರೆದು, ಹಾಡಿ ಅದನ್ನು ಮತ್ತೆ ಬೆಳಕಿಗೆ ತಂದಿದ್ದಾರೆ. ಮಾಕೇಬಾ ಅವರ ಹಾಡುಗಳು ಜನಾಂಧೋಲನದ ಧ್ವನಿ ಆಗಿತ್ತು. ಅವರ ‘ಕಲೆ’ ಕೇವಲ ದುಡ್ಡು ಗಳಿಸುವುದಕ್ಕಾಗಿ ಅಲ್ಲ ಸಾಮಾಜಿಕ ಕಳಕಳಿಗಾಗಿ ಮೀಸಲಾಗಿತ್ತು.

ಲೇಖಕರು:ಮೃಣಾಲಿನಿ

ಮೃಣಾಲಿನಿ ಅಗರಖೇಡ್

ಮೃಣಾಲಿನಿ ಅಗರಖೇಡ್

Leave a Reply