ಸಾಮಾನ್ಯವಾಗಿ ಚಿತ್ರಮಂದಿರಗಳ ಮುಂದೆ ಇರ್ತಿದ್ದ ” ಹೌಸ್ ಫುಲ್” ಬೊರ್ಡ್ ಇದೀಗ ಚಿತಗಾರದ ಗೇಟ್ ಗಳ್ ಮೇಲೆ ನೆತಾಡ್ತಿವೆ.. ಬೆಂಗಳೂರು ನಗರದಲ್ಲಿ ಕೋವಿಡ್ 19ರ ಸೋಂಕಿಗೆ ಬಲಿಯಾಕ್ತಿರೋರ ಸಂಖ್ಯೆ ದಿನೆ ದಿನೆ ಹಿಚ್ಚುತ್ತಿದ್ದು, ಸಹಾಯ ಹಸ್ತದ ಕೊರತೆಯು ಕಾಣಲಾರಂಭಿಸಿದೆ. ಮೃತರ ದೇಹವನ್ನ ಅಂತ್ಯಸ0ಸ್ಕಾರಕ್ಕೆಂದು ಸರ್ಕಾರದವರು ಮನೆಯವರಿಗೆ ನೀಡದ ಕಾರಾಣ, ಸಕಲ ಕರ್ಮಾದಿ ಕ್ರಿಯೆಯನ್ನು BBMPಯವರೆ ಮಾಡುತ್ತಲಿದ್ದು ಅವರ ನೆರವಿಗೆ “ಜಿಮ್ ರವಿ” ಅವರು ಕೈ ಜೋಡಿಸಿದ್ದಾರೆ.
ಜಿಮ್ ಮಾಸ್ಟರ್, ಅಂತರರಾಷ್ಟ್ರೀಯ ಕ್ರೀಡಾ ಪಟು ಹಾಗೂ ಸಿನಿಮಾ ನಟರು ಆಗಿರುವ ಜಿಮ್ ರವಿಯವರು ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಖುದ್ದಾಗಿ ರುದ್ರ ಭೂಮಿಯಲ್ಲಿದ್ದು, ಅಲ್ಲಿ ಬರುವ ಸೋಂಕಿನಿಂದ ಮೃತ ಪಟ್ಟ ದೇಹಗಳಿಗೆ ದಹನ ಕ್ರಿಯೆಯನ್ನ ನೆರೆವೇರಿಸುತ್ತಿದ್ದಾರೆ. P.P.E ಕಿಟ್ ಧರಿಸಿ ಈ ಕೆಲಸಾ ಮಾಡೋ bbmp ಹಾಗೂ ರುದ್ರಭೂಮಿಯ ಕೆಲಸಗಾರರು ಬೆಸತ್ತೋಗಿದ್ದಾರೆ, ಕೆಲಸದೊತ್ತಡದಿಂದಾಗಿ ತ್ರಾಣ ಕ್ಷೀಣಿಸುತ್ತಿದೆ. ಶರವೇಗದಲ್ಲಿ ಹರಡುತ್ತಿರುವ ಈ ಸೋಂಕನ್ನು ಲೆಕ್ಕಿಸದ, ಯಾವುದಕ್ಕೂ ಅಂಜದೆ, ಹಿಂಜರಿಯದೆ ಜಿಮ್ ರವಿ ಹಾಗೂ ಅವರ ಸಂಗಡಿಗರು,ಕಾರ್ಮಿಕರ ಜೊತೆ ಕೈ ಜೋಡಿಸಿ ದಿನ ನಿತ್ಯ ನೂರಾರು ದೇಹಗಳಿಗೆ ಅಂತ್ಯ ಸಂಸ್ಕಾರ ಮಾಡ್ತಿದ್ದಾರೆ, ಇವರ ತೋಳು ಉಕ್ಕಿನಂತೆ ಗಟ್ಟಿಯಾಗಿರಬಹುದು ಆದ್ರೆ ನೋವಿಗೆ ಕರಗಿ ನೆರವಾದ ಇವರ ಹೃದಯ ಬೆಣ್ಣೆಯಷ್ಟೇ ಬಿಳಿ-ಮೃದು ಎಂದು ರುಜುವಾಗಿದೆ. ಇವರು ಮಾಡುತ್ತಿರುವುದನ್ನ ಸೇವೆ ಅಥವಾ ಪುಣ್ಯದ ಕೆಲಸ ಎಂದ್ರೆ ಅದು ಬಹಳ ಚಿಕ್ಕ ಮಾತಾಗುವುದು… ಒಟ್ಟಿನಲ್ಲಿ ಇಡೀ ಮನುಕುಲವೆ ಹೆಮ್ಮೆ ಪಡುವಂತಹ ಕೆಲಸ ಇವರು ಸಾಧಿಸ್ತಿದ್ದಾರೆ..
” ಜಿಮ್ ರವಿಯವರು” ಆರೋಗ್ಯವಾಗಿರಲಿ ಮತ್ತಷ್ಟು ಒಳ್ಳೆ ಕೆಲಸ ಅವರಿಂದ ನೆರವೇರಲಿ ಎಂದು ಚಿತ್ರೋದ್ಯಮಾ.ಕಾಂ ಹಾರೈಸುತ್ತದೆ..