ಪುಣ್ಯ ದಿನವಾದ ಮಹಾ ಶಿವರಾತ್ರಿಯಂದು ಹೊಸ ಸಿನಿಮಾಗಳು ಶುರುವಾಗಲಿದೆ..
ಪ್ರಪ್ರಥಮ ಬಾರಿಗೆ ಗೀತಾ ಶಿವರಾಜ್ಕುಮಾರ್ ನಿರ್ಮಾಪಕರಾಗಿ ಹೊಸ ಜವಾಬ್ದಾರಿ ಹೊತ್ತಿದ್ದಾರೆ,
ಹಾಟ್ರಿಕ್ ಹೀರೊ ಡಾ. ಶಿವಾರಾಜ್ಕುಮಾರ್ ಅಭಿನಯದ 125ನೆ ಸಿನಿಮಾದ ಮೊದಲ ಪೋಸ್ಟರ್ ಹೊರಬಂದಿದೆ, ಸಿನಿಮಾಗೆ “ವೇದಾ” ಅನ್ನೋ ಹೆಸರಿಟ್ಟಿದ್ದು, ಶಿವಣ್ಣ ಅವರನ್ನ ಬಹಳ ವಿಭಿನ್ನವಾದ ಮಾಸ್ ಲುಕ್ನಲ್ಲಿ ಪ್ರಸ್ತುತ ಪಡಿಸಿದ್ದಾರೆ. A. ಹರ್ಷ ಸಿನಿಮಾದ ನಿರ್ದೇಶಕರಾಗಿದ್ದು,ಅರ್ಜುನ್ ಜನ್ಯ ಸಂಗೀತ ಒದಗಿಸಲಿದ್ದಾರೆ. ಶಿವಣ್ಣ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲಿನ ಸಿನಿಮಾವಾಗಿದ್ದು ಖಂಡಿತ ಹೊಸ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಲಿದೆ.
ಇತ್ತ ಪ್ರಜ್ವಲ್ ದೇವರಾಜ್ ಅವರು ಕೂಡ ಒಂದು ಹೊಸ ಮೈಲಿಗಲ್ಲು ಮುಟ್ಟಿದ್ದು , 25ನೆ ಸಿನಿಮಾದ ಬಗ್ಗೆ ಮಾಹಿತಿ ನೀಡಿ ಒಂದು ಸಣ್ಣ ಚಿತ್ರಪಟವನ್ನ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಫೋಟೊ ನೋಡ್ತಾ ಇದ್ದರೆ ನಮಗೆ ಅನ್ನಿಸೋದು ಇದು ಪಕ್ಕಾ ಕಳ್ಳಾ ಪೊಲೀಸ್ ಸಿನಿಮಾ ಅಂತ. “ಅಂಬಿ ನಿಂಗೆ ವಯ್ಯಸಾಯ್ತೋ” ಸಿನಿಮಾದ ನಿರ್ದೇಶಕರಾದ ಗುರುದತ್ ಗಾಣಿಗ ಈ ಸಿನಿಮಾಗೆ ಸಾರಥಿಯಾಗಿ ಲಗಾಂ ಹಿಡಿದಿರುವರು, ಪಕ್ಕಾ ಮಾಸ್ ಸಿನಿಮಾಗಳಿಗೆ ಡೈಲಾಗ್ ಬರೆದು ಖ್ಯಾತಿ ಹೋಂದಿರುವ ಸಂಭಾಷಣೆಗಾರ “ಮಾಸ್ತಿ”ಯವರು ಬರವಣಿಗೆ ಈ ಸಿನಿಮಾದಲ್ಲಿ ಕಾಣಬಹುದು. ಅನೂಪ್ ಸೀಳಿನ್ ರ ಸುಮಧುರ ಸಂಗೀತವಿದ್ದು ಪ್ರಜ್ವಲ್ ಗೆ ಜೋಡಿಯಾಗಿ ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ ಬೆರಗು ಮೂಡಿಸಲಿದ್ದು ಇವನ್ನೆಲ್ಲಾ ಸೆರೆ ಹಿಡುಯಲು ಉದಯೋನ್ಮುಖ ಪ್ರತಿಭೆ “ಕ್ಯಾಮೆರಾಮೆನ್ ಅಭಿಮನ್ಯು ಸದಾನಂದ್” ಶ್ರಮಿಸಲಿದ್ದಾರೆ.