ಮೊದಲ ಪ್ರಯತ್ನದಲ್ಲೇ ಗೆದ್ದ ಕಿರುಚಿತ್ರ ಪ್ರಣಂ

ಕಿರುಚಿತ್ರ  : ಪ್ರಣಂ(ಕನ್ನಡ)
ತಾರಾಗಣ: ರವಿರಾಜ್, ಜೆ.ಎಸ್.ಸ್ವಾತಿ
ನಿರ್ದೇಶನ: ರವಿರಾಜ್
             ಸ್ನೇಹದ ಮಹತ್ವವನ್ನು ಬಿಂಬಿಸುವ ಚಿತ್ರ
     ಚಿತ್ರ ರಂಗದ ಯಾವುದೇ ಹಿನ್ನಲೆಯಿಲ್ಲದ ಸ್ಥಳೀಯ ಕಲಾವಿದರ ತಂಡವು ಸ್ನೇಹ ಮತ್ತು ಪ್ರೀತಿಗೆ ಸಂಬಂಧಿಸಿದ  ಕಿರುಚಿತ್ರವನ್ನು ತಯಾರಿಸಿದ್ದು ಇದರಲ್ಲಿ ಸ್ನೇಹದ ಬಗ್ಗೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದು
ಮೇಕಿಂಗ್ ನಲ್ಲಿ ಕೂಡ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಸ್ನೇಹ ಮುಖ್ಯವೋ, ಪ್ರೀತಿ ಮುಖ್ಯವೋ ಎಂಬ ಆಧಾರದ ಮೇಲೆ ಸಾಗುವ ಕಥೆಯಾಗಿದ್ದು ಈ ಚಿತ್ರದಲ್ಲಿ ನಾಯಕ ಮತ್ತು ಅವನ ಸ್ನೇಹಿತರು ನಟಿಸಿದ ಸನ್ನಿವೇಶಗಳು ಸಂತೋಷವನ್ನುಂಟು ಮಾಡಿದರೆ ಭಗ್ನ ಪ್ರೇಮಿಯ ಪಾತ್ರದಲ್ಲಿ ನಾಯಕನ ನಟನೆಯು ಮನಮುಟ್ಟುವಂತೆ ಮಾಡಿದೆ. ಉಳಿದ  ಪಾತ್ರಗಳಿಗೂ ಅಷ್ಟೇ ಮಹತ್ವವನ್ನು ನೀಡಿದ್ದು ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಕ್ಕೆ ಸೂಕ್ತವಾದ ನ್ಯಾಯವನ್ನು ಸಲ್ಲಿಸಿದ್ದಾರೆ.

ಇದನ್ನು ಬರೆಯಲು ಮುಖ್ಯ ಕಾರಣ ಈ ತಂಡವು ಯಾರ ಬಳಿಯೂ ಸಹಾಯವನ್ನು ಅಪೇಕ್ಷಿಸದೇ ಹಲವಾರು ಕಷ್ಟಗಳು, ಭಿನ್ನಾಭಿಪ್ರಾಯಗಳು ಎದುರಾದರೂ ಧೃತಿಗೆಡದೆ ಎದುರಿಸಿ ತುಂಬಾ ಇಷ್ಟ ಪಟ್ಟು ಮಾಡಿದ ಪರಿಣಾಮ ಕೊಪ್ಪಳ ಕನಸು ಪತ್ರಿಕೆಯು ನಡೆಸಿದ ತನ್ನ 3 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಕೊಪ್ಪಳ ಕನಸು ಸಿನೇ ಅವಾರ್ಡ್ ನಲ್ಲಿ ಉತ್ತಮ ಕಥೆಯೆಂದು ಪ್ರಶಸ್ತಿಯನ್ನು ಪಡೆದಿದೆ. ಅದರಲ್ಲೂ ಈ ಕಿರುಚಿತ್ರವು ಯೂಟ್ಯೂಬ್ ಚಾನಲ್ ನಲ್ಲಿ ತೆರೆ ಕಂಡ ಮೊದಲ ದಿನವೇ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಕಂಡ ಹಿರಿಮೆಗೆ ಪಾತ್ರವಾಗಿದ್ದು ಯಾವುದೇ ಕೆಲಸವನ್ನಾಗಲಿ ಇಷ್ಟ ಪಟ್ಟು ಮಾಡಿದರೆ ಯಶಸ್ಸು ಶತಃಸಿದ್ಧ ಎಂಬುದಕ್ಕೆ ಈ ಪ್ರಣಂ ಚಿತ್ರ ತಂಡವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.


       ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಕಂಡಿರುವ ತಂಡವು ಇನ್ನಷ್ಟು ಉತ್ತಮ ಚಿತ್ರಗಳನ್ನು ಮಾಡಿ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತರಲೆಂದು ಚಿತ್ರ ಪ್ರೇಮಿಗಳ ಪರವಾಗಿ ನಮ್ಮ ಚಿತ್ರೋದ್ಯಮ. ಕಾಂ.ತಂಡವು ಹಾರೈಸುತ್ತದೆ.


https://youtu.be/OHDw5ZfSfGs

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply