ಮೊದಲ ಬಾರಿಗೆ ಕನ್ನಡ ರಂಗಭೂಮಿ ನಾಟಕದಲ್ಲಿ ವಿದ್ಯುತ್ ದೀಪ ಬೆಳಗಿಸಿದ ರಂಗಕರ್ಮಿ ಗುಬ್ಬಿ ವೀರಣ್ಣ

( ಮುಂದುವರೆದಭಾಗ )

೧೯೨೫ ರಲ್ಲಿ ೧೪ ವರ್ಷಗಳಗಿನ ಬಾಲಕರಿಗೆ ನಾಟಕ ತರಬೇತಿ ನೀಡಲು ಬಾಲಕ ವಿವರ್ಧಿನಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ೧೯೨೬ ರಲ್ಲಿ ಕನ್ನಡ ರಂಗಭೂಮಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಾಟಕದಲ್ಲಿ ವಿದ್ಯುತ್ ದೀಪ ಬೆಳಗಿಸಿದ ಕೀರ್ತಿ ಇವರದ್ದಾಗಿದೆ. ಅದೇ ವರ್ಷ ೧೯೨೬ ರಲ್ಲಿ ಖ್ಯಾತ ಲೇಖಕ ದೇವುಡು ನರಸಿಂಹ ಶಾಸ್ತ್ರಿಯವರ ಜೊತೆ ಜಂಟಿಯಾಗಿ ಹರಿಮಯ,ಹೀಸ್ ಲವ್ ಅಫೇರ್ ಮತ್ತು ಕಳ್ಳರ ಕೂಟ ಎಂಬ ಮೂರು ಮೂಕಿ ಚಿತ್ರಗಳನ್ನು ನಿರ್ಮಿಸಿದ್ದರು.

ಎಂಟು ವರ್ಷಗಳ ಬಳಿಕ ೧೯೩೪ ಡಿಸೆಂಬರ್ ೩೧ ರಂದು ಬೆಂಗಳೂರಿನಲ್ಲಿ ಕುರುಕ್ಷೇತ್ರ ಎಂಬ ಅದ್ಭುತ ನಾಟಕವನ್ನು ಪ್ರದರ್ಶಿಸಿದರು. ವೈಭವದ ಪ್ರತೀಕವಾದ ಈ ನಾಟಕದಲ್ಲಿ ಜೀವಂತ ಆನೆ, ಕುದುರೆಗಳನ್ನು ಬಳಸಿದ್ದು ಆಗಿನ ಕಾಲದಲ್ಲಿ ಈ ನಾಟಕ ಬಹಳ ಜನಪ್ರಿಯವಾಗಿತ್ತು. ೧೯೩೫ ರಲ್ಲಿ  ವೀರಣ್ಣನವರು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಸಾಗರ್ ಟಾಕೀಸ್ ಎಂಬ ಚಿತ್ರಮಂದಿರವನ್ನು ಪ್ರಾರಂಭಿಸಿದ್ದರು.

ಈ ರೀತಿ ನಿರಂತರವಾಗಿ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತ ಬಂದಿದ್ದ ಇವರಿಗೆ  ೧೯೪೨ ರಲ್ಲಿ ನಡೆದ ಮೈಸೂರು ದಸರಾ ಉತ್ಸವದಲ್ಲಿ ಮಹಾರಾಜರಾದ ಜಯ ಚಾಮರಾಜ ಒಡೆಯರ್ ನಾಟಕ ರತ್ನ ಎಂಬ ಬಿರುದು ನೀಡಿ ಗೌರವಿಸಿದ್ದರು. ೧೯೪೩ ರಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ ಗುಬ್ಬಿ ಥೇಟರ್ ಎಂಬ ರಂಗ ಮಂದಿರವನ್ನು ಪ್ರಾರಂಭಿಸಿದ ಇವರು ತಮ್ಮ ಜೀವಿತಾವಧಿಯವರೆಗೂ ಕಲೆಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ೧೯೫೫ ರಲ್ಲಿ ಕೇಂದ್ರ ಸರ್ಕಾರದಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ೧೯೭೩ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ರೀತಿಯಾಗಿ ಕನ್ನಡ ರಂಗಭೂಮಿಗೆ  ಮತ್ತು ಚಿತ್ರ ರಂಗಕ್ಕೆ ಅವಿಸ್ಮರಣೀಯ ಕಾಣಿಕೆಯನ್ನು ನೀಡಿದ್ದ ಗುಬ್ಬಿ ವೀರಣ್ಣನವರು   ಅಕ್ಟೋಬರ್ ೧೮,೧೯೭೨ ರಂದು ತಮ್ಮ ೮೨ ನೇ ವಯಸ್ಸಿನಲ್ಲಿ ವಯೋಸಹಜ ತೆಯಿಂದ ಮರಣ ಹೊಂದಿದರು. 

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply