ಇವರ ವಾಯ್ಸೆ ತುಂಬಾ ಡಿಫರೆಂಟ್ ಕಂಡ್ರೀ.. ಮಾದಕ ಹಾಡಿಗೂ ಸೈ ಭಕ್ತಿ ಗೀತೆಗಳಿಗೂ ಸೈ ಟಪ್ಪಾಂಗುಚಿ ಹಾಗಿಗೂ ಸೈ ಕ್ಯಾಬರೆ ಹಾಡಿಗೂ ಸೈ ಜಾನಪದ ಗೀತೆಗೂ ಸೈ ಇವರು ಹಾಡಿರೋ ಅಷ್ಟು ಹಾಡುಗಳು ಎಲ್ಲರೂ ಗುನುಗುವ ಹಾಗಿರುತ್ತೆ, ಕುಣಿಬೇಕು ಅನ್ಸುತ್ತೆ ಯಾರ್ ಬಗ್ಗೆ ಹೇಳ್ತಿದೀನಿ ಗೆಸ್ ಮಾಡಿ.. ಸರಿ ಬಿಡಿ ನಾನೇ ಹೇಳ್ತೀನಿ ಅವರ್ಯಾರೂ ಅಲ್ಲ ಗಾಯನಲ್ಲಿ ಹೆಸರು ಮಾಡಿದ ಎಲ್ ಆರ್ ಈಶ್ವರಿ (ಮೇರಿ ರಾಜೇಶ್ವರಿ) ಗಾಯನ ಶುರು ಮಾಡಿದಾಗ ಇವರ ಹೆಸರು ಬದಲಾವಣೆ ಮಾಡಿಕೊಂಡರು, ಇಂದು ಅವರಿಗೆ ಜನುಮ ದಿನ ಹ್ಯಾಪಿ ಬರ್ತ್‌ಡೇ ಅಂತ ಹೇಳಿ ಎಲ್ರೂ…
ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ತುಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಾಡಿ ಮನೆಮಾತಾಗಿದ್ದಾರೆ, ಇವರು ಮೂಲತಃ ತಮಿಳುನಾಡಿನ ರೋಮನ್ ಕ್ಯಾಥೊಲಿಕ್ ಕ್ರಿಶ್ಚಿಯನ್ನರು ತಂದೆ ಅಂತೋನಿ ದೇವರಾಜ್ ತಾಯಿ ಮೇರಿ ನಿಮ೯ಲಾ, ಹೆಸರಾಂತ ದಿಗ್ಗಜ ಸಂಗೀತ ನಿದೇ೯ಶಕರಾದ ಎಂ ಎಸ್ ವಿಶ್ವನಾಥನ್, ಟಿ ಕೆ ರಾಮಮೂರ್ತಿ, ಕೆ ವಿ ಮಹಾದೇವನ್, ಶಂಕರ್ ಗಣೇಶ್, ಜಿ ಕೆ ವೆಂಕಟೇಶ್ ಮತ್ತು ಕುನ್ನಕುಡಿ ವೈದ್ಯನಾಥನ್ ರವರ ಚಿತ್ರದಲ್ಲಿ ಹಾಡಿದ್ದಾರೆ, ತಾಯಿ ಕೋರಸ್ ಸಿಂಗರ್ ಮಗಳಿಗೂ ಗಾಯನದ ಕ್ಷೇತ್ರ ಬೇಗ ಕರೆದಿತು ಮೊದಲು ಹಾಡಿದ್ದು ಪಾಸ ಮಲರ್ ಚಿತ್ರದ ವಾರಾಯ್ ಎನ್ ತೋಳಿ ವಾರಾಯ್.
ಕನ್ನಡದಲ್ಲಿ ಇವರು ಹಾಡಿದ ಸೂಪರ್ ಹಿಟ್ ದೂರದಿಂದ ಬಂದಂತ ಸುಂದರಂಗ ಜಾಣ, ರಸಿಕ ರಸಿಕ, ಜೋಕೆ ನಾನು ಬಳ್ಳಿಯ ಮಿಂಚು, ಸಿಡ್ಕ್ಯಾಕೊ ಸಿಡ್ಕಯಾಕೊ ನನ ಜಾಣ, ಬಾಜಿಕಟ್ಟಿ ನೋಡು ಬಾರೋ ಮೀಸೆ ಮಾವ.
ಘಂಟಸಾಲ, ಟಿ ಎಮ್ ಎಸ್, ಪಿ ಬಿ ಶ್ರೀನಿವಾಸ್, ಎಸ್ ಪಿ ಬಾಲಸುಬ್ರಹ್ಮಣ್ಯಂ, ಕೆ ಜೆ ಯೇಸುದಾಸ್, ಮಲೇಶಿಯಾ ವಾಸುದೇವನ್ ಜಯಚಂದ್ರನ್ ಮುಂತಾದವರ ಜೊತೆ ಯುಗಳ ಗೀತೆ ಹಾಡಿದ್ದಾರೆ.
ಪಿ ಸುಶೀಲ, ಎಸ್ ಜಾನಕಿ, ವಾಣಿ ಜಯರಾಂ ಜೊತೆಯೂ ಕೂಡ..
ದೇವರ ಹಾಡುಗಳು ತುಂಬಾ ಕೇಳಿತೀ೯ವಿ ಚೆಲ್ಲಾತ, ಕಪೂ೯ರ ನಾಯಗಿ, ಕ್ರಿಸ್ತ ಗೀತೆಗಳು ..
ಬಹಳ ವಷ೯ಗಳ ನಂತರ ವಿಕ್ಟರಿ ಚಿತ್ರಕ್ಕೆ ಯಕ್ಕಾ ನಿನ್ ಮಗಳು ಹಾಡಿಗೆ ಧ್ವನಿ ನೀಡಿ ಎಲ್ಲರೂ ಕುಣಿಯೋ ಥರ ಮಾಡಿರೋದು ಮತ್ತು ಇನ್ನೂ ಹಲವಾರು ಗೀತೆಗಳನ್ನು ಹಾಡುವ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿರೋದು ಅಭಿಮಾನಿಗಳಿಗೆ ಖುಷಿ ತರುವ ವಿಚಾರ.
ತಿಲ್ಲಾಲಂಗಡಿ ಮತ್ತೆ ಮೂಕುತ್ತಿ ಅಮ್ಮನ್ ಚಿತ್ರಗಳಲ್ಲಿ ಕಾಣಿಸಿಕೊಂಡಿರೋದು ಗಮನಾರ್ಹ.
ಇವರ ಸಂಗೀತ ಸೇವೆಯನ್ನು ಗುರುತಿಸಿ ತಮಿಳು ನಾಡು ಸಕಾ೯ರ ಕಲೈಮಾಮಿಣಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕ್ರಿಸ್ತ ರಾದರೂ ತಮ್ಮ ವಿಶಿಷ್ಟವಾದ ಕಂಠದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಮಾದಕ ಗಾಯಕಿ ಮತ್ತೆ ಹಲವಾರು ಚಿತ್ರಗಳಲ್ಲಿ ಹಾಡಿ ಎಲ್ಲರನ್ನೂ ಇನ್ನೂ ಹೆಚ್ಚು ಡ್ಯಾನ್ಸ್ ಮಾಡಿಸಲಿ ಹಾಗೂ ದೇವರು ಅವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸೋಣ ಏನಂತೀರಿ…