ಯಾರೇ ಯಾರೇ

ಯಾರೇ ಯಾರೇ

ನಿರ್ದೇಶಕ ಪ್ರೇಮ್ ಏನೇ
ಸಿನಿಮಾ ಮಾಡಿದ್ರು ಅದ್ರಲ್ಲಿ ಒಂದು ಕುತೂಹಲಕಾರಿ ಅಂಷ ಇದ್ದೇ ಇರುತ್ತೆ..ಸಿನಿಮಾದಲ್ಲಿ ಹೊಸದಾಗಿ ಏನೋ ಹೇಳಿರ್ತಾರೆ ಅನ್ನೋ ನಂಬಿಕೆ ಇಟ್ಕೊಂಡು,ಮೊದಲ ದಿನವೇ ಜನ ತಂಡೋಪತಂಡವಾಗಿ ಥಿಯೇಟರ್ ನತ್ತ ಧಾವಿಸುತ್ತಾರೆ

. ಅವರ ಸಿನಿಮಾಗಳ ಯಶಸ್ಸಿನ ಹಿಂದಿರುವ ಮತ್ತೊಂದು ದೊಡ್ಡ ಶಕ್ತಿ ಅಂದ್ರೆ “ಹಾಡುಗಳು”. ಸರಳವಾಗಿ ಎಲ್ಲರ ಬಾಯಲ್ಲು ಹೊರಳುವ ಆಡು ಭಾಷೆಯಲ್ಲೇ ಹೆಚ್ಚಿನ ಹಾಡಿಗಳು ರಚನೆಗೊಂಡಿರುತ್ತದೆ. ಮನ ನಾಟುವ ಕಲಕುವ ರಾಗ ಸಂಯೋಜನೆ ಕೂಡ ಇರುತ್ತದೆ. ಮೊದಲ ಸಿನಿಮಾವಾದ ಕರಿಯದಿಂದ ದಿ ವಿಲ್ಲನ್ ವರೆಗೂ ಈ ವಿಷಯ ನಿರೋಪವಾಗಿದೆ.

ರಕ್ಷಿತಾ ಅವರ ಸೋದರ “ರಾಣಾ” ಮೊದಲ ಬಾರಿಗೆ ನಾಯಕನಾಗಿ ನಟಿಸ್ತಿದ್ದಾರೆ ” ಏಕ್ ಲವ್ ಯಾ”, ಕನ್ನಡ ಸೇರಿ 4 ಭಾಷೆಗಳಲ್ಲಿ ಬಿಡುಗಡೆಯಾಗ್ತಿರೋ ಈ ಸಿನಿಮಾಗೆ ಪ್ರೇಮ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯಾ ಅವರ ಸಂಗೀತವಿದ್ದು ಫೆಬ್ 14 ಪ್ರೇಮಿಗಳ ದಿನವೇ ಮೊದಲ ಹಾಡನ್ನು ರಿಲೀಸ್ ಮಾಡಿದ್ದಾರೆ.. ಹಾಡಿಗೆ ಏಕ್ ಲವ್ ಯಾ ಅಂಥಮ್ ಅನ್ನೋ ಶೀರ್ಷಿಕೆ ನೀಡಿದ್ದಾರೆ.

“ಯಾರೇ ಯಾರೇ” ಅಂತ ಶುರುವಾಗುವ ಕನ್ನಡ ಹಾಡನ್ನ ಅರ್ಮಾನ್ ಮಾಲಿಕ್ ಧ್ವನಿಯಲ್ಲಿ ಮೂಡದಿ, ತಮಿಳಿನಲ್ಲಿ ಇದೆ ಹಾಡನ್ನ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಪದೇ ಪದೇ ಕೇಳಬೇಕೆನಿಸುವ, ಮತ್ತೆ ಮತ್ತೆ ಗುನುಗುವಂತ ಮ್ಯಾಜಿಕಲ್ ಟ್ಯೂನನ್ನ ರಚಿಸಿದ್ದಾರೆ ಅರ್ಜುನ್ ಜನ್ಯ. ಪ್ರೇಮ್ ಅವರ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಅವರೆ ಸಾಹಿತ್ಯ ಮತ್ತೆ ಸಂಭಾಷಣೆ ಬರೆಯೋದು,ಆದ್ರೆ ಈ ಸಲ ವಿಜಯ್ ಈಶ್ವರನ್ ಅನ್ನುವ ಯುವ ಪ್ರತಿಭೆಗೆ ಆ ಅವಕಾಶ ನೀಡಿದ್ದಾರೆ ಜಿತೆಗೆ ಅವರು ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೇ .

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply