ಇಂದು ಬೆಳಿಗ್ಗೆ 9:30 ಸಮಯಕ್ಕೆ ,ಶುಭ ಮೂಹೂರ್ತದಲ್ಲಿ “ನಿಖಿಲ್ ಕುಮಾರಾಸ್ವಾಮಿ” ಅವರು ರೇವತಿಯವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಮನಗರದ ಬಳಿ ಇರುವ ಕ್ಯಾತನಹಳ್ಳಿಯ ತೋಟದ ಮನೆಯಲ್ಲಿ ಸಾಂಪ್ರದಾಯಕವಾಗಿ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಲಾಯಿತು.
ವಿವಾಹಕ್ಕೆ ಎರಡೂ ಕುಟುಂಬದ ಹೀರಿಯರು, ಬಂಧುಗಳು ಮತ್ತು ತೀರಾ ಹತ್ತಿರದವರನ್ನ ಬಿಟ್ಟರೆ ಬೇರಾರಿಗೂ ಪ್ರವೇಶವಿರಲಿಲ್ಲ. ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ನಿಶ್ಚಿತಾರ್ಥದ ಸಮಯದಲ್ಲಿ ಕುಮಾರಸ್ವಾಮಿಯವರು ಆಸೆಯೊಂದನ್ನ ಹಂಚಿಕೊಂಡಿದ್ದರು, ತಮ್ಮ ಮಗನ ಮದುವೆ ಪ್ರಯುಕ್ತ ,ಹಾಸನ,ಚನ್ನಪಟ್ಟಣ,ರಾಮನಗರ ಜಿಲ್ಲೆಯ ಜನರಿಗೆ (ಮತ ಭಾಂಧವರಿಗೆ) ಔತಣ ಕೂಟವನ್ನ ಹಮ್ಮಿಕೊಳ್ಳುವ ಬಗ್ಗೆ.ಪ್ರಸ್ತುತ ಎದುರಾಗಿರುವ ಸಮಸ್ಯೆಯಿಂದಾಗಿ ಅದು ನೆರವೇರಲಿಲ್ಲ. ಎಲ್ಲವೂ ಸರಿ ಹೋದ ಕೂಡಲೇ ಅಭಿಮಾನಿಗಳು ಹಾಗೂ ಸ್ನೇಹಿತರಿಗಾಗಿ ಔತಣ ಕೂಟದ ವೇದಿಕೆ ಸಜ್ಜಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.