ತಾರಾಗಣ:- ಪುನೀತ್ ರಾಜ್ಕುಮಾರ್, ಸೈಯೇಷ ಸೈಗಲ್, ಪ್ರಕಾಶ್ ರಾಜ್, ದಿಗಂತ್, ಸೊನುಗೌಡ, ಧನಂಜಯ, ಸಾಯಿ ಕುಮಾರ್, ರವಿಶಂಕರ್ ಗೌಡಾ.
ನಿರ್ದೇಶನ:- ಸಂತೋಷ ಆನಾಂದ್ ರಾಮ್.
ಸಂಗೀತ:- ತಮನ್
“ಕ್ಲಾಸ್ ವಿಷಯವನ್ನ ಹೈ ಕ್ಲಾಸಾಗಿ ಪ್ರಸ್ತುತ ಪಡಿಸಿದ್ದಾರೆ”.
ಪವರ್ ಫುಲ್ ಕಥೆ, ಪವರ್ಫುಲ್ ಅಭಿನಯ, ಡೈಲಾಗ್ ಮತ್ತು ಸನ್ನಿವೇಶಗಳ ಮಿಶ್ರಣವೇ “ಯುವರತ್ನ”.
“ನಹೀ ಜ್ಞಾನೇನ ಸದೃಶಂ ಪವಿತ್ರಂ” ಅಂದ್ರೆ ಜ್ನ್ಯಾನಕ್ಕಿಂತ ಮಿಗಿಲಾದದ್ದು- ಪವಿತ್ರವಾದ್ದದು ಯಾವುದು ಇಲ್ಲಾ, ಅಂತಹ ಜ್ನ್ಯಾನ, ವಿದ್ಯೆ, ಕಲೆಪ್ರತಿಯೊಬ್ಬರಲ್ಲೂ ನಾನಾ ಸ್ವರೂಪದಲ್ಲಿ ಅಡಗಿರುತ್ತದೆ, ಅದನ್ನ ಗುರುತಿಸುವಲ್ಲಿ, ಕಂಡುಹಿಡಿಯುವಲ್ಲಿ ಇಂದಿನ ಶಿಕ್ಷಣಾ ವವ್ಯಸ್ಥೆ ವಿಫಲವಾದ ಕಾರಣ ಹಲವು ಚೇತನಗಳು, ಕಾಲೇಜಿನಲ್ಲಿ ಓದುತ್ತಿರುವ ಯುವ ಪ್ರತಿಭೆಗಳು ನಮ್ಮ ಕಣ್ಣಿಗೆ ಅನಾರ್ಥವಾಗಿ ಕಾಣುವರು, ಅಂತವರ ಬದುಕಲ್ಲಿ ಹೊಸ ಭರವಸೆ, ನಂಬಿಕೆ ಚೈತನ್ಯ ತರಲು ನಾಯಕನು ಪಡುವ ಹರ ಸಾಹಸ ಆ ಪ್ರಯತ್ನದಲ್ಲಿ ಎದುರಾಗುವ ತೊಂದರೆ, ರಾಜಕೀಯ ಒತ್ತಡ ಇವೆಲ್ಲವನ್ನ ಮೆಟ್ಟಿ ಹೇಗೆ ನಾಯಕ ನಿಲ್ಲುತ್ತಾನೆ, ಗೆಲ್ಲುತ್ತಾನೆ ಅನ್ನೋದರ ಸುತ್ತ ಸಿನಿಮಾ ಅವಲಂಬಿತವಾಗಿದೆ. ಸಿನಿಮಾದ ಮೊದಲ ಅರ್ಧಭಾಗ ಅಭಿಮಾನಿಗಳಿಗೆ ಔತಣ ನಂತರದ ಭಾಗದಲ್ಲಿ ಕಥೆ, ಕಥಾವಸ್ತುವಿನ ವಿಶ್ಲೇಷಣ. ಬಹಳಷ್ಟು ವಿಷಯ ಹೇಳಿದ್ದಾರೆ ಅದನ್ನ ದೊಡ್ಡ ಪರದೆಯಮೇಲೆ ಕುಟುಂಬ ಸಮೇತರಾಗಿ ನೋಡಿ ಆನಂದಿಸೋದೆ ಸೂಕ್ತ.
ಸಾಗರದ ಅಲೆಗಳ ಎದುರು ಆಕ್ಷನ್ ದೃಶ್ಯದ ಮೂಲಕ ಪರದೆ ಮೇಲೆ ಪ್ರತ್ಯಕ್ಷವಾಗುವ ಪವಾರ್ಸ್ಟ್ ಪುನೀತ್ ರಾಜ್ಕುಮಾರ್ ಪ್ರಾರಂಭದಿಂದ ಕಡೆಯವರೆಗೂ ಹುಮ್ಮಸ್ಸು ಭರಿತವಾಗಿದ್ದು ಇಂದಿಗೂ ಚಿರಯುವಕನಂತೆ ಕಾಣುತ್ತಾರೆ. ಅಪ್ಪು ಡ್ಯಾನ್ಸ್, ಫೈಟ್ಸ್ ಸನ್ನಿವೇಶಗಲ್ಲಿ ಹೊಸ ಹುರುಪುನ್ನ ತಂದಿದ್ದಾರೆ, ಕುಣಿದು ಕುಪ್ಪಳಿಸಿದ್ದಾರೆ, ಡೈಲಾಗ್ಸ್ ಹೇಳುವಾಗ ಅಷ್ಟೇ ಪ್ರಭುದ್ಧರಾಗಿ ಕಾಣ್ತಾರೆ,ಒಟ್ನಲ್ಲಿ ಪವರ್ ಸ್ಟಾರ್ ಫುಲ್ ಪ್ಯಾಕೇಜ್ ಮಜಾ ನೀಡೋತಂದು ನಿಜ. ಸಿನಿಮಾದ ಉದ್ದಗಲಕ್ಕೂ ಒಂದು ಕ್ಲಾಸ್ ಇದೆ, ಪ್ರತಿ ಡೈಲಾಗಿನಲ್ಲೂ ಘನತೆ ಪ್ರತಿಬಿಂಬಿಸಿದೆ, ಸಾಮಾಜಿಕ ಕಳಕಳಿ ಸಾರಿದೇ
ಸಿನಿಮಾದಲ್ಲಿ ಪ್ರಕಾಶ್ ರಾಜ್, ದಿಗಂತ್, ಡಾಲಿ ಧನಂಜಯ್, ಅವಿನಾಶ್ ಸೇರಿದಂತೆ ದೊಡ್ಡ ತಾರಗಣವೇ ಇದ್ದು ಸೇರಿಗೆ ಸಾವಸೇರು ಎನ್ನುವಂತೆ ಅವರ ಪಾತ್ರಗಳಿಗೆ ಜೀವ ತುಂಬಿಸಿದ್ದಾರೆ. ಸಂತೋಷ್ ಆನಂದ್ ರಾಮ್ ಅವರಲ್ಲಿ ಓರ್ವ ಸಮರ್ಥ ನಿರ್ದೇಶಕನ ಜೊತೆಗೆ ಸಂಭಾಷಣೆಗಾರ ಬರಹಗಾರನು ಅಡಗಿದ್ದಾನೆ ಅನ್ನೋದಕ್ಕೆ ಸಿನಿಮಾದ ಪ್ರತಿ ಫ್ರೇಮ್ ಸಾಕ್ಷಿಯಾಗಿದೆ. ಕ್ಯಾಮೆರಾ ಮನ್ ವೆಂಕಟೇಶ್ ಅಂಗುರಾಜ್ ಮತ್ತು ಕಲಾ ನಿರ್ದೇಶಕ ಶಿವಕುಮಾರ ಇಬ್ಬರು ಸೇರಿ ಸಿನಿಮಾದ ರಂಗು ಏರಿಸಿದ್ದಾರೆ. ಸಿನಿಮಾದ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಎಲ್ಲಿಯೂ ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ.
“ನಾವು ಏನು ಕೊಟ್ಟು ಹೋಕ್ತಿವಿ ಅನ್ನೋದಕ್ಕಿಂತ ಏನು ಬಿಟ್ಟು ಹೋಗಿರ್ತೀವಿ ಅನ್ನೋದು ಮುಖ್ಯ” ಸಾಂಸಾರಿಕ ಸಿನಿಮಾಗಳ ರಾಯಭಾರಿ ಪುನಿತ್ ರಾಜ್ಕುಮಾರ್ ಮತ್ತು ಸಂತೋಷ್ ಸೇರಿ ಮತ್ತೊಂದು ಅದ್ಭುತವಾದ ಚಿತ್ರ ನೀಡಿ ಮೇಲಿನ ಮಾತನ್ನ ನಿರೂಪಿಸಿದ್ದಾರೆ.
ಚಿತ್ರೋದ್ಯಮ ರೇಟಿಂಗ್:- 8.5/10.