ಸದ್ಯ ಸ್ಯಾಂಡಲ್ವುಡ್ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ರಕ್ಷಿತ್ ಶೆಟ್ಟಿಯವರ 777ಚಾರ್ಲಿ ಚಿತ್ರವಾಗಿದೆ. ಸ್ವಯಂ ಮುಖ್ಯಮಂತ್ರಿಗಳಿಂದ ಪ್ರಶಂಸೆಗೊಂಡು ತೆರಿಗೆ ವಿನಾಯಿತಿಯನ್ನು ಪಡೆದಿರುವ ಚಿತ್ರವಾಗಿದೆ.
ಈಗ ಅದೇ ಚಿತ್ರಕ್ಕೆ ಕಾಲಿವುಡ್ಡಿನ ಪ್ರಖ್ಯಾತ ನಟರಾದ ರಜನಿಕಾಂತ್ರವರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆಯನ್ನು ನೀಡಿದ್ದಾರೆಂದು ರಕ್ಷಿತ್ ಶೆಟ್ಟೆಯವರು ಹೇಳಿದ್ದಾರೆ, ರಜನಿಕಾಂತ್ ರವರು ಚಿತ್ರವನ್ನು ವೀಕ್ಷಿಸಿ ತಮಗೆ ಕರೆಮಾಡಿ ಚಿತ್ರವು ಅದ್ಭುತವಾಗಿ ಮೂಡಿಬಂದಿದೆ.
ರಕ್ಷಿತ್ ಶೆಟ್ಟಿಯವರ ಅಭಿನಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಒಟ್ಟಿನಲ್ಲಿ 777 ಚಾರ್ಲಿ ಚಿತ್ರವೂ ಎಲ್ಲರಿಂದ ಮೆಚ್ಚುಗೆಯನ್ನು ಗಳಿಸಿ ಅಮೋಘ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ, ಎಂಬುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ.