ತಾರಾಗಣ:- ಧನಂಜಯ್, ಉಮಾಶ್ರೀ, ಶ್ರುತಿ, ರೇಬಾ ಜಾನ್, ಪ್ರಮೋದ್ ಮಂಜು ಳ್, ಅಚ್ಯುತ್, ರವಿಶಂಕರ್ ಮತ್ತು ಅನು ಪ್ರಭಾಕರ್.
ನಿರ್ದೇಶನ:- ರೋಹಿತ್ ಪಡಕಿ.
ಸಂಗೀತ ನಿರ್ದೇಶನ:- ಅಜನೀಶ್ ಲೋಕನಾಥ್.
ನಿರ್ಮಾಣ:- ಕೆ.ಆರ್.ಜಿ. ಸಂಸ್ಥೆ.
” ಸಿನಿಮಾನ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಬಹುದು”
ಒಂದು ಕಥೆ ಹೇಳೋದಕ್ಕೆ ಪ್ರಾರಂಭಿಸಿದ್ರೆ, ಅದು ಕೇಳುಗರ ಕಿವಿ ಮುಟ್ಟಿದ್ರೆ ಸಾಲದು ಅದು ಅವರ ಮನಸನ್ನ ತಟ್ಟಿ ಅಲ್ಲಡಗಿರುವ ಆಳದ ಭಾವನೆಗಳಿಗೆ ಜೇವ ತುಂಬಿಸಿದಾಗಲೇ ಕಥೆಯು ಸಾರ್ಥಕವಾಗೋದು, ಈ ಒಂದು ಮಾತಿಗೆ ಉತ್ತಮ ಉದಾಹರಣೆಯಾಗಿ “ರತ್ನನ್ ಪ್ರಪಂಚ” ಪ್ರಜ್ವಲಿಸುತ್ತೆ.
ಇಬ್ಬರ ನಡುವಿನ ಅವಿನಾಭಾವ ಸಂಬಂಧವು ದೂರದ ಪ್ರಯಾಣ ಸಾಗಿಸೋಕೆ ಪರಸ್ಪರ ಪ್ರೀತಿ ವಾತ್ಸಲ್ಯ ಭರಿತ, ಸ್ವಾರ್ಥ ರಹಿತ ಭಾವವೇ ದೊಡ್ಡ ಕಕ್ಷೆಯಾಗಿ ಕೆಲಸ ಮಾಡುತ್ತದೆ. ರತ್ನನ್ ಪ್ರಪಂಚದಲ್ಲ ಒಂದು ಅದ್ಭುತವಾದ ಪಯಣವಿದ್ದು ಅದರಲ್ಲಿ ಅಸಂಖ್ಯ ತಿರುವುಗಳು, ಏರಿಳಿತದ ಜೊತೆಗೆ ಹಲವು ಸಾದ ಸೀದಿ ರಸ್ತೆಯಲ್ಲಿ ನಾವು ಸಾಗುವೆ ಅನುಭವ ಹಾಗೆ ಸಾಗುವ ವೇಳೆಯಲ್ಲಿ ಕಥೆಗಿಂತ ಹೆಚ್ಚಾಗಿ ತಲೆಯಲ್ಲಿ ಉಳಿಯುವುದೇ ಭಾವಭರಿತ ಸರಣಿ ಹೃದಯ ಸ್ಪರ್ಶಿಸುವ ಸಂಧರ್ಭಗಳು- ತರ್ಕಬದ್ಧವಾದ ಸನ್ನಿವೇಶಗಳು. ಸಿನಿಮಾದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬರು ಒಬ್ಬರ ಮೇಲೆ ಮತ್ತೊಬ್ಬರು ಪೈಪೋಟಿಗೆ ಬಿದ್ದರುವಂತೆ ಕಾಣಿಸುತ್ತಾರೆ, ಮುಗ್ಧ ರತ್ನಾಕರನಾಗಿ ಧಾನ0ಜಯ್, ಪಟ ಪಟಾ ಅಂತ ವಟಗುಟ್ಟುವ ರತ್ನಾಕರನ ತಾಯಿ ಸರೋಜ( ಉಮಾಶ್ರೀ), ಘನತೆ- ಕರುಣೆಯ ಪ್ರತಿಬಿಂಬೀಸುವ ಎಲ್ಲವ್ವಳಾಗಿ ಶೃತಿ, ನಂಬಿಕೆ- ವಿಶ್ವಾಸ ಮೈಗೂಡಿಸಿಕೊಂಡ ತಬ್ಬುಸಮ್ ಪಾತ್ರದಲ್ಲಿ ಅನುಪ್ರಭಾಕರ್ ಹಾಗು ಉಡಾಳ್ ಬಾಬುವಾಗಿ ಪ್ರಮೋದ್ ಮಂಜು ತಮ್ಮ ಮನೋಜ್ನ್ಯ ಅಭಿನಯದಿಂದ ಒಮ್ಮೆ ತುಟಿಯ ಮೇಲೆ ನಗು ಮೂಡಿಸುತ್ತ ಮತ್ತೊಮ್ಮೆ ಕಣ್ಣಂಚನ್ನು ಒದ್ದೆಯಾಗಿಸುತ್ತಾರೆ ಇವರಲ್ಲಿ ಯಾರು ಬೆಸ್ಟ್ ಅಂತ ಹೇಳೋದಕ್ಕೆ ಸಾಧ್ಯವಾಗದ ಮಟ್ಟಿಗೆ ತಮ್ಮದೆಯಾದ ಅಗಾಧವಾದ ಪರಿಣಾಮ ಮೂಡಿಸುತ್ತಾರೆ ಹಾಗಾಗಿ ಸಿನಿಮಾಗೆ ಅದುವೇ ದೊಡ್ಡ ಶಕ್ತಿ. ನಿರ್ದೇಶಕ ರೋಹಿತ್ ಪದಕಿ “ದಯವಿಟ್ಟು ಗಮನಿಸಿ” ಸಿನಿಮಾದ ಬಳಿಕ ಮತ್ತೊಂದು ಸದಭಿರುಚಿಯ, ರಸಭರಿತ ಸಿನಿಮಾ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಅವರ ಶ್ರದ್ದೆ, ಶ್ರಮ, ಕಲಾ ಪೋಷಣೆ ಪ್ರತಿ ಫ್ರೆಮಿನಲ್ಲೂ ಸಿನಿಮಾದುದ್ದಗಲಕ್ಕು ರಾರಾಜಿಸುತ್ತಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಮ್ಮ ಹಾಡುಗಳು ಮತ್ತು ಹಿನ್ನಲೆ ಸಂಗೀತದಿಂದ ಸಿನಿಮಾದ ಬೆರಗನ್ನು ಹೆಚ್ಚಿಸಿದ್ದಾರೆ ಎಂದ್ರೆ ತಪ್ಪಾಗಲಾರ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಠ ಸಿರಿ ಯಲ್ಲಿ ಮೂಡಿ ಬಂದಿರುವ “ಗಿಚ್ಚ ಗಿಲಿ ಗೀಲಿ” ಎಲ್ಲರ ಮೆಚ್ಚುಗೆ ಪಡೆದಿದೆ. ಛಾಯಾಗ್ರಕ ಶ್ರೀಶ ಕುಡುವಳ್ಳಿ ಮತ್ತು ಎಡಿಟರ್ ದೀಪು ಕುಮಾರ ಅವರ ಚುರುಕಾದ ಕಾರ್ಯವೈಖರಿಯಿಂದ ಸಿನಿಮಾ ತಂತ್ರಿಕವಾಗಿಯೂ ಕೂಡ ಉನ್ನತವಾಗಿದೆ. ಒಟ್ಟಾರೆಯಾಗಿ ಒಂದು ಉತ್ತಮ ಸಾಂಸಾರಿಕ, ಸಾಮಾಜಿಕ ಕಥಾವಳಿ ಉಳ್ಳ ಸಿನಿಮಾ ನೋಡಿ ಬಹಳಷ್ಟು ದಿನಗಳೇಯಾಗುತ್ತಿ ಆ ಅಂತರವನ್ನ ” ರತ್ನನ್ ಪ್ರಪಂಚ” ಭರ್ತಿ ಮಾಡಿತು…
ಚಿತ್ರೋದ್ಯಮ ರೆಟಿಂಗ್:- 9/10.