“ರಾಕೇಶ್” ಯಾರು?

1986 ಇಸವಿಯಲ್ಲಿ C.V. ರಾಜೇಂದ್ರನ್ ನಿರ್ದೇಶಿಸಿದ “ಪೊಯ್ ಮುಗಂಗಳ್” ಅನ್ನುವ ತಮಿಳು  ಸಿನಿಮಾದಲ್ಲಿ  ಮೊದಲ ಬಾರಿಗೆ ನಾಯಕ ನಟನಾಗಿ ಕನ್ನಡದ ಸೂಪರ್ ಸ್ಟಾರ್ ನಟರೊಬ್ಬರು ನಟಿಸಿದ್ರು! ಅವ್ರು ಯಾರ್ ಗೊತ್ತಾ? ನಮ್ಮ ಕ್ರೇಜಿ ಸ್ಟಾರ್ “V. ರವಿಚಂದ್ರನ್”. ಆ ಸಿನಿಮಾದ ನಿರ್ದೇಶಕರು  ಅವರಿಗೆ “ರಾಕೇಶ್” ಎಂಬ ಹೊಸ ಸ್ಕ್ರೀನ್ ನೇಮ್ ನೀಡ್ತಾರೆ. ಸಿನಿಮಾದ ಟೈಟಲ್ ಕಾರ್ಡ್ ನಲ್ಲಿಯು ಕೂಡ ಆ ಹೆಸರು ಬರುತ್ತೆ, ನಂತರ ದಿನಗಳಲ್ಲಿ ರವಿಚಂದ್ರನ್ ಅವರಿಗೆ  ಹೆಸರು ಬದಲಾಯಿಸೋ ಪ್ರಕ್ರಿಯೆ ಕಿಂಚಿತ್ತೂ ಇಷ್ಟ ಆಗಲ್ಲ. ಅದಕ್ಕೆ ಮುಖ್ಯ ಕಾರಣ, “ರವಿಚಂದ್ರನ್” ಅನ್ನೋ ಹೆಸರನ್ನ ಅವರ ತಂದೆಯವರಾದ ವೀರಾಸ್ವಾಮಿಯವರು ಬಲು ಪ್ರೀತಿಯಿಂದ ಅಮೋದಿಸಿದ್ದು. ಮುಂದಿನ ದಿನಗಳಲ್ಲಿ ಆ ಹೆಸರೇ ಒಂದು IDENTITY ಆಗ್ಬೇಕು ಹಾಗೆ ಕೆಲ್ಸ ಮಾಡ್ಬೇಕು ಅನ್ನೋ ದೊಡ್ಡ ಕನಸ್ಸನ್ನ ಆಗಲೇ ಹೊತ್ತಿದ್ರು ಕ್ರೇಜಿ ಸ್ಟಾರ್.

1984 ರಲ್ಲೇ “V. ರವಿಚಂದ್ರನ್” ಅನ್ನೋ ಹೆಸರು ಬಹಳ ಫೇಮಸ್ ಆಗಿತ್ತು, ವಿಷಯ ಏನಂದ್ರೆ  ರವಿಚಂದ್ರನ್ ಅವರು ಬರಿ ನಟರಾಗಷ್ಟೇ ಅಲ್ಲ ಬದಲಿಗೆ ಓರ್ವ ನಿರ್ಮಾಪಕರಾಗಿಯೂ ಹೆಸರು ಮಾಡಿದ್ರು. 1983-84 ಇಸವಿಯಲ್ಲಿ ಮದ್ರಾಸಿನಲ್ಲಿ ಪ್ರಳಯಾಂತಕ ಸಿನಿಮಾದಲ್ಲಿ ನಟಿಸೋದರ ಜೊತೆಗೆ ಅಮಿತಾಬ್ ಬಚ್ಚನ್ ಗಾಗಿ  ಸಿನಿಮಾ ಕೂಡ ನಿರ್ಮಾಣ ಮಾಡ್ತಿದ್ರು. ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ಚಕ್ರವ್ಯೂಹ ವನ್ನು  ಹಿಂದಿಯಲ್ಲಿ “ಇನ್ಕ್ವಿಲಾಬ್ “ಅಂತ ರಿಮೇಕ್ ಮಾಡಲಾಯ್ತು.ಕೆಲಸದ  ಸಲುವಾಗಿ ಬಾಂಬೆ, ಮದ್ರಾಸ್ ಮತ್ತು ಬೆಂಗ್ಳೂರು ಅಂತ ಪ್ರಯಾಣ ಮಾಡೋ ಅಗತ್ಯವಿತ್ತು. ಕೆಲಸದ ಒತ್ತಡ ಅಧಿಕವಾಗಿದ್ದು, ಸಮಯದ ಅಭಾವ ಇದ್ದ ಕಾರಣ ಪ್ರತಿ ಬಾರಿಯೂ ವಿಮಾನದಲ್ಲೇ ಪ್ರಯಾಣಿಸೋ ಅನಿವಾರ್ಯವಿತ್ತು. ಪ್ರತಿಷ್ಠಿತ ಎರ್ ಲೈನ್ ಆಗಿರುವ “Air India” ಪ್ರತಿ ವರ್ಷ ಯಾರು ಅಧಿಕ ಸಲ ಪ್ರಯಾಣಿಸುತ್ತಾರೋ ಅವರ ಹೆಸರು ಮತ್ತು ಫೋಟೋನ ಅವರ ಮ್ಯಾಗಝಿನ್ನಲ್ಲಿ ಪ್ರಕಟಿಸುವುದು ವಾಡಿಕೆಯಲ್ಲಿತ್ತು. ಹಾಗೆ ಇಡೀ ದಕ್ಷಿಣಭಾರತದ ಚಿತ್ರರಂಗದಿಂದ ಮೊದಲ ಬಾರಿ ಓರ್ವ ಕಲಾವಿದನ  ಹೆಸರು ಫೋಟೋ ಪ್ರಕಟವಾಗಿದ್ದು “V. ರವಿಚಂದ್ರನ್” ಅವರದ್ದೇ ಅನ್ನೋದು ಹೆಮ್ಮೆಯ ವಿಷಯ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply