ರಾಘಣ್ಣನ ಕೈಲಿ “ಚಿತ್ರೋದ್ಯಮದ ಚಿತ್ತಾರಗಳು”

Rajatantra

ರಾಘವೇಂದ್ರ ರಾಜ್ ಕುಮಾರ್ ಅವರ ಆಶೀರ್ವಾದವೇ ಸಿಕ್ಕಾದ ಮೇಲೆ ಇನ್ನೇನು ಬೇಕು ಅಲ್ಲವೇ? ಅದೇನೋ ಆಸ್ಕರ್ ಅಂತಾರಲ್ವ? ಅದು ಸಿಕ್ಕಷ್ಟೇ ಸಂತೋಷವಾಯ್ತು.
ಚಾಮುಂಡೇಶ್ವರಿ ಸ್ಟುಡಿಯೋ ದಲ್ಲಿ ಇಂದು ನಡೆದ ಬಹುನಿರೀಕ್ಷೆಯ ಚಿತ್ರ “ರಾಜತಂತ್ರ” ಟೀಸರ್ ಬಿಡುಗಡೆಯ ಸಮಾರಂಭದಲ್ಲಿ ನಮ್ಮ ಚಿತ್ರೋದ್ಯಮ.ಕಾಮ್ ತಂಡಕ್ಕೆ ರಾಘಣ್ಣನ ಆಶೀರ್ವಾದ ಸಿಕ್ತು. ರಾಘಣ್ಣನ ಬಗ್ಗೆ ಇಡೀ ಕರ್ನಾಟಕಕ್ಕೇ ಗೊತ್ತು. ಅದೇನೋ ಇಂಗ್ಲಿಷ್ ಅಲ್ಲಿ ಗ್ರೌಂಡ್ ಟು ಅರ್ಥ್ ಅಂತಾರಲ್ವ? ಅದನ್ನು ಕನ್ನಡಕ್ಕೆ ಅನುವಾದ ಮಾಡಿದರೆ ಬಹುಶಃ ಅದು ರಾಘಣ್ಣ ಎಂದಾಗುತ್ತದೇನೋ? ಸ್ವಾರ್ಥ, ದ್ವೇಷ, ಮತ್ಸರ, ಅಸೂಯೆ, ಅಹಂ ಎಂಬ ಪದಗಳ ಅರ್ಥವೂ ಸಹ ತಿಳಿಯದ ಮಗುವಿನ ಮನಸ್ಸು ರಾಘಣ್ಣನದು. ಅವರ ಕೈಲಿ ನಮ್ಮ “ಚಿತ್ರೋದ್ಯಮದ ಚಿತ್ತಾರಗಳು” ಪುಸ್ತಕವನ್ನು ಕೊಟ್ಟು ಅವರ ಆಶೀರ್ವಾದ ಪಡೆದುಕೊಂಡೆವು. ನಿಮ್ಮ ಇಡೀ ತಂಡಕ್ಕೆ ಒಳ್ಳೆದಾಗಲಿ. ನಿಮ್ಮ ವೆಬ್ಸೈಟ್ www.chitrodyama.com ಕರ್ನಾಟಕದ ಮನೆ ಮನೆ ತಲುಪಲಿ ಎಂಬ ಅವರ ಆಶೀರ್ವಾದವಂತೂ ನಮ್ಮ ತಂಡಕ್ಕೆ ಆಸ್ಕರ್ ಸಿಕ್ಕಷ್ಟೇ ಖುಷಿಯಾಯ್ತು.

ರಾಘಣ್ಣವರ ಧರ್ಮಪತ್ನಿ ಶ್ರೀಮತಿ ಮಂಗಳ ರಾಘವೇಂದ್ರ ರಾಜ್ ಕುಮಾರ್ ಅವರಿಗೂ ಕೂಡ ನಮ್ಮ ತಂಡದಿಂದ ಶತಕೋಟಿ ನಮನಗಳು. ನಿರ್ಮಾಪಕ ಶ್ರೀ ಪಿ ಆರ್ ವಿ ಸ್ವಾಮಿ, ಸಂಗೀತ ನಿರ್ದೇಶಕ ಶ್ರೀ ಸುರೇಶ್ , ಯುವರಾಜ್ ಕುಮಾರ್ ಮತ್ತು ಅವರ ಶ್ರೀಮತಿ ಶ್ರೀದೇವಿಯವರು ಮತ್ತು ಇಡೀ ರಾಜರತ್ನ ತಂಡಕ್ಕೆ ನಮ್ಮ ತಂಡದ ನಮನಗಳು. ತಾಯಿ ಭುವನೇಶ್ವರಿಯ ಆಶೀರ್ವಾದ, ಅಣ್ಣಾವ್ರ ಆಶೀರ್ವಾದ ದೊರೆತು ಈ ಚಿತ್ರ ಕನ್ನಡ ಸಿನಿರಂಗದ ಸಾರ್ವಕಾಲಿಕ ದಾಖಲೆಯಾಗುವಂತಹ ಹಿಟ್ ಚಿತ್ರವಾಗಲಿ ಎಂದು ನಮ್ಮ ಮನದಾಳದ ಹಾರೈಕೆಗಳು.

ಚಿತ್ರೋದ್ಯಮ.ಕಾಮ್. ನ ಅಂಕಣಕಾರರಾದ ಘನಶ್ಯಾಮ್,ಸಂದೀಪ್ ಜೋಶಿ, ಸೌಮ್ಯ,ರವಿಕುಮಾರ್, ಶ್ರೀಯುತ ಯತಿರಾಜ್ ವೀರಾಂಬುಧಿ, ನಾಗೇಶ್ ಕುಮಾರ್ ಸಿ.ಎಸ್, ಅಕ್ಷಯ ರಾವ್ ಎಲ್ಲರಿಗೂ ವಿಶೇಷ ಧನ್ಯವಾದಗಳು. ಅಣ್ಣಾವ್ರ ಅತಿ ದೊಡ್ಡ ಅಭಿಮಾನಿಯಾದ ಶ್ರೀನಿವಾಸ್ ಗಂತೂ ಇನ್ನೂ ಒಂದು ಎಕ್ಸ್ಟ್ರಾ ಸ್ಪೆಷಲ್ ಥ್ಯಾಂಕ್ಸ್.

-ಟಿಎನ್ನೆಸ್

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply