ರಾಜ್ಯ ಪ್ರಶಸ್ತಿ ವಿಜೇತ ಹೃದಯವಂತ ರಾಘವೇಂದ್ರ ರಾಜ್ ಕುಮಾರ್ ರವರು ನಟಿಸಿದ ಬಹುನಿರೀಕ್ಷೆಯ “ರಾಜತಂತ್ರ” ಚಿತ್ರದ ಟೀಸರ್ ಅನ್ನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಬಿಡುಗಡೆ ಮಾಡಿದರು, ಸಮಾರಂಭಕ್ಕೆ ಯುವ ರಾಜ್ ಕುಮಾರ್, ಶ್ರೀದೇವಿ ಯುವ ರಾಜ್ ಕುಮಾರ್ ಮತ್ತು ಚಿತ್ರ ತಂಡ ಉಪಸ್ಥಿತಿ, ಚಿತ್ರದ ವಿಶೇಷತೆ ರಾಘಣ್ಣ ರವರ ಮೇಜರ್ ಪಾತ್ರ ಬಹಳ ವಿಭಿನ್ನವಾಗಿದೆ ಪರಶುರಾಮ್ ಚಿತ್ರದ ಅಣ್ಣಾವೃ ನೆನಪಿಗೆ ಬತಾ೯ರೆ, ಟೀಸರ್ ದೊಡ್ಮನೆ ಅಭಿಮಾನಿಗಳಿಗೆ ಹಬ್ಬ, ಇಡೀ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್, ಚಿತ್ರ ಬರುವ ಜನವರಿ 2021 ರಂದು ಬಿಡುಗಡೆ ಮಾಡುವ ತಯಾರಿ. ರಾಘಣ್ಣ ರವರ ವಿಭಿನ್ನ ಪಾತ್ರ ಅಭಿಮಾನಿಗಳಿಗೆ ಹಿಡಿಸುವಲ್ಲಿ ನೋ ಡೌಟ್.
ತಾಯಿ ಭುವನೇಶ್ವರಿಯ ಆಶೀರ್ವಾದ, ಅಣ್ಣಾವ್ರ ಆಶೀರ್ವಾದ ದೊರೆತು ಈ ಚಿತ್ರ ಕನ್ನಡ ಸಿನಿರಂಗದ ಸಾರ್ವಕಾಲಿಕ ದಾಖಲೆಯಾಗುವಂತಹ ಹಿಟ್ ಚಿತ್ರವಾಗಲಿ ಎಂದು ನಮ್ಮ ಮನದಾಳದ ಹಾರೈಕೆಗಳು.
ಶ್ರೀನಿವಾಸ್ ಎ
ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು.
ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ.
ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏
ವರದಿ-ಡಾ.ಪ್ರಭು ಗಂಜಿಹಾಳ.ಮೊ-9448775346. ‘ಓಟು ಮಾರಾಟಕ್ಕಿದೆ, ಕಿರುಚಿತ್ರದ ಪೋಸ್ಟರ್ ಬಿಡುಗಡೆಬೆಂಗಳೂರ : ಕಿನ್ನಾಳ ಟಾಕೀಸ್ ಲಾಂಛನದಡಿ ನಿರ್ಮಾಣ ಆಗಿರುವ ‘ಓಟು ಮಾರಾಟಕ್ಕಿದೆ’ ಕಿರುಚಿತ್ರದ ಮೊದಲ ಪೋಸ್ಟರ್ ಅನ್ನು ಕನ್ನಡದ…