ಕಲಾವಿದರ ಸಾಲು ಸಾಲು ಕೊಡುಗೆಯನ್ನಿತ್ತ ಅಣ್ಣಾವ್ರ ಕುಟುಂಬದಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಲು ಸಿದ್ಧವಾಗಿದೆ. ರಾಜಕುಮಾರವರ ಪುತ್ರಿ ಪೂರ್ಣಿಮಾ ಮತ್ತು ರಾಜಕುಮಾರವರ ಅಳಿಯ ರಾಮಕುಮಾರ್ ರವರ ಪುತ್ರ ಧೀರೇನ್ ರಾಮಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ತಮ್ಮ ಹೊಸ ಚಿತ್ರ ‘ಶಿವ 143 ‘ ಚಿತ್ರದ ಮೂಲಕ ತಮ್ಮ ಚಿತ್ರ ಜೀವನ ಪಯಣವನ್ನು ಪ್ರಾರಂಭಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನಿಲ್ ಕುಮಾರ್ ರವರ ನಿರ್ದೇಶನವಿದೆ. ನಾಯಕಿಯಾಗಿ ಮಾನ್ವಿತಾ ಕಾಮತ್ ರವರು ನಟಿಸಿದ್ದಾರೆ. ಜಯಣ್ಣ ಮತ್ತು ಭೋಗೇಂದ್ರ ಬ್ಯಾನರ್ ನಲ್ಲಿ ಈ ಚಿತ್ರವೂ ತಯಾರಾಗುತ್ತಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ನೋಡಿದ ಶಿವಣ್ಣ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದು, ರಾಜ್ ಕುಟುಂಬದ 3 ನೇ ಕುಡಿಯನ್ನು ಹರಸಿ ಎಂದು ಟ್ವೀಟ್ ಮಾಡಿದ್ದಾರೆ.
ಒಟ್ಟಿನಲ್ಲಿ ರಾಜಕುಮಾರ್ ಕುಟುಂಬದ ಇನ್ನೊಂದು ಕುಟುಂಬದ ಕುಡಿ ಚಿತ್ರರಂಗಕ್ಕೆ ಅಡಿಯಿಟ್ಟಿದ್ದು, ಚಿತ್ರರಸಿಕರಿಗೆ ಹಬ್ಬವನ್ನುಂಟು ಮಾಡಿದೆ. ಈ ಸಂದರ್ಭದಲ್ಲಿ ಧೀರೇನ್ ರಾಮಕುಮಾರ್ ರವರಿಗೆ ಚಿತ್ರರಂಗದ ಪಯಣಕ್ಕೆ ಚಿತ್ರೋದ್ಯಮ.ಕಾಂ ಶುಭವನ್ನು ಕೋರುತ್ತದೆ.