ರಾಬರ್ಟ್ ನ ಯಾತ್ರೆ 11ಕ್ಕೆ ಶುರು!!

Dಬಾಸ್ದರ್ಶನ್ ಅಭಿನಯದ ಬಹು ನಿರೀಕ್ಷಿತ  ಸಿನಿಮಾವಾದ “ರಾಬರ್ಟ್”  ಬಿಡುಗಡೆಯ ತಾರೀಕು ನಿಗದಿಯಾಗಿದೆ. ಇದೆ ಮಾರ್ಚ್ 11, ಶಿವರಾತ್ರಿಯ ಪುಣ್ಯ ದಿನದಂದು ರಾಜ್ಯಾದ್ಯಂತ ರಾಬರ್ಟ್ ನ  ಪಯಣ ಪ್ರಾರಂಭಗೊಳ್ಳಲಿದೆ. ಸಾಮಾನ್ಯವಾಗಿ ಸಿನಿಮಾದ ರಿಲೀಸ್ ದಿನಾಂಕವನ್ನು ಸಿನಿಮಾದ ತಂಡದವರು ತಮ್ಮ ಟ್ರೇಲರ್ ಅಥವಾ ಪ್ರಚಾರದ ಸೂದ್ಫಿಘೋಷ್ಠಿಯಲ್ಲಿ ತಿಳಿಸುವುದು ವಾದಿಕೆಯಾಗಿ, ಆದ್ರೆ ಈ ಸಾರ್ತಿ ಆ ರುವಾರಿಯನ್ನ  ನಮ್ಮ  “ಸಾರಥಿ ದರ್ಶನ್ ತೂಗುದೀಪ” ರವರು  ನಿಭಯೋಸಿದ್ದಾರೆ. ಅವರೆ ಖುದ್ದು ಫೇಸ್ ಬುಕ್ಖಾತೆಯಿಂದ ಭಾನುವಾರ ಬೆಳಗ್ಗೆ 11ಕ್ಕೆ ಲೈವ್ ಬರುವುದಾಗಿ ಈ ಹಿಂದೆ ತಿಳಿಸಿದ್ದರು, ಹೇಳಿದಂತೆ ಲೈವ್ ಬಂದು ಅಭಿಮಾನಿಗಳ ನಡುವು ಕೆಲವು ಕಾಲ ಕುಶಲೋಪರೀ ನಡೆಸಿ ನಂತರ, ಮಾರ್ಚ್ 11ಕ್ಕೆ ಥೀಯೇಟರ್ಗಳಲ್ಲಿ ನಿಮ್ಮ ಮುಂದೆ ರಾಬರ್ಟ್ ಆಗಿ ಬರ್ತಿದ್ದೀನಿ ಅಂದ್ರು. ಅಭಿಮಾನಿಗಳು ದರ್ಶನ್ರನ್ನ “ಡಿ-ಬಾಸ್” ಅಂತ ಪ್ರೀತಿಯಿಂದ ಕರೀತಾರೆ, ಅದೇ ಅಭಿಮಾಣಿಗಳನ್ನ ಅಷ್ಟೇ  ಅಭಿಮಾನದಿಂದ  ದರ್ಶನ್ ರವರು ನನ್ನ ಪಾಲಿನ ” ಸೆಲಿಬ್ರಿಟಿಗಳು” ಎನ್ನುತ್ತಾರೆ. ಅಂತ ಪ್ರೀತಿಯ ಸೆಲಿಬ್ರಿಟಿಗಳಿಗಾಗಿ ತಯಾರಿಸಿರುವ ಸಿನಿಮಾ ಇದು, ಇದನ್ನ ಖಂಡಿತವಾಗಿ ಯು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುತ್ತೀವಿಯೇ ಹೊರೆತು ಯಾವುದೇ OTT  ಅಥವಾ T.V ಚಾನೆಲ್ಗಳಿಗೆ ನೀಡುವುದಿಲ್ಲ ಎನ್ನುವುದಾ ಸ್ಪಶ್ಟಪಡಿಸಿದರು.

D-ಬಾಸ್ ನೀಡಿದ ಈ ಸುದ್ದಿಯ ಕೇಳಿ ಅವರ ಅಭಿಮಾನಿಗಳ ಆನಂದ-ಹರ್ಷೋದ್ಗಾರ ಹೆಚ್ಚಿತ್ತು, ಕೊಂಡಾಟ ಶುರುವಾಯ್ತು,ಸೋಶಿಯಲ್ಮೀಡಿಯಾಗಳ ತುಂಬ “ರಾಬರ್ಟ್” ನ ಗುರುತು ರುಜುವಾಯಿತು.

ನಿರ್ಮಾಣಕ್ಕಾಗಿ ಹಣ ಹೂಡುವು ವಿಷಯದಲ್ಲಿ ಯಾವುದಕ್ಕುಹಿಂಜರಿಯದೆಉಮಾಪತಿ ಶ್ರೀನಿವಾಸ್  ತಮ್ಮ ಜವಾಬ್ದಾರಿಯನ್ನಪಾಲಿಸಿದ್ದಾರೆ. ತಂತ್ರಜ್ಞರು ಹಾಗೂ ಇಡೀ  ಸಿನಿಮಾ ತಂಡ ಚಿತ್ರದ ಗುಣಮಟ್ಟತೆಯನ್ನ ಕಾಪಾಡಲು ಶ್ರಮಿಸಿದ್ದು, ನಿರ್ದೇಶಕ ತರುಣ್ಸುಧೀರ್ ಅದಕ್ಕೆ ರೂವಾರಿಯಾಗಿದ್ದರೆ. ಪ್ರಕ್ಷಕನಿಗೆ ಸದಭಿರುಚಿಯ ಮನೋರಂಜನೆಗೆ ಯಾವುದೇ ಮೊಸವಿಲ್ಲಾ!!.

ಮತ್ತೊಂದು ವಿಶೇಷವೆಂದರೆ  ದರ್ಶನ್ಅವ್ರು ಖುದ್ದು ಸಿನಿಮಾನ ವೀಕ್ಷಿಸಿ, ಚಿತ್ರ ಮೂಡಿಬಂದಿರುವ ಪರಿಯ ಕಂಡು ಫುಲ್ಖುಷಿಯಾಗಿದ್ದಾರೆ. ತರುಣ್ಸುಧೀರ್ಕೆಲಸವನ್ನ ಶ್ಲಾಘಿಸಿದ್ದಾರೆ.


ಆನೆ ನಡೆದಿದ್ದೆ ದಾರಿ ಅಂತ ಚಾಲೆಂಜಿಂಗ್ ಸ್ಟಾರ್ ಆಗಾಗ ಹೇಳ್ತೀರ್ತಾರೆ.  ಸಮಯ ತಿಳಿಸಿ, ಗೆಲುವೆನ್ನೋಅಂಬಾರಿಯ ಹೊತ್ತು ಐರಾವತ  ಮರವಣಿಗೆ ಪ್ರಾರಂಭಿಸಲಿದೆ, ಥಿಯೇಟರ್ ನ ಗೇಟ್ಗಳು  ಮತ್ತು ಅಭಿಮಾನಾದಮನುಸ್ಸುಗಳು ತೆರೆದಿದ್ದು ಆ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.


ಹಾಗೆಯೇ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಬಿಡುಗಡೆಯ ದಿನಾಂಕವು ಹೊರ ಬಂದಿದೆ..” ಏಪ್ರಿಲ್15″ ರಿಂದ ದೇಶದಾದ್ಯಂತ ಪೊಗರಿನ ಆರ್ಭಟ ಶುರುವಾಗಲಿದೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply