ನೂರಾರು ಸಿನಿಮಾ ಕಲಾವಿದರು ಈ ಕೊರೊನಾದ ತುರ್ತು ಪರಿಸ್ತಿತಿಯಲ್ಲಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ..
ಬಾಲಿವುಡ್ ನ ಬ್ಯಾಡಿ ಅಂತಲೇ ಕರೆಯಲ್ಪಡುವ ನಟ “ಸೋನು ಸೂದ್” ಇಡೀ ದೇಶವೇ ಮೆಚ್ಚುವ ಕೆಲಸ ಮಾಡಿದ್ದಾರೆ. ದೇಶದ ನಾನಾ ಭಾಗದಿಂದ ಮಹಾನಗರಿಗಳಿಗೆ, ವಲಸೆ ಬಂದಿರುವ ಬಡ ಕಾರ್ಮಿಕರನ್ನು ಅವರ ಸ್ವಂತ ಊರಿಗೆ, ವಿಳಾಸಕ್ಕೆ ಉಚಿತವಾಗಿ ಬಸ್ ಮತ್ತು ಟ್ರೈನ್ ಮುಖಾಂತರ ಕ್ಷೇಮವಾಗಿ ಕಳುಹಿಸಿದ್ದಾರೆ, ಜೊತೆಗೆ ಪ್ರಯಾಣದ ವೇಳೆ ಅಗತ್ಯವಿರುವ ಅವಶ್ಯ ವಸ್ತುಗಳು ಹಾಗೂ ಊಟದ ಕಿಟ್ ಕೂಡ ಒದಗಿಸಿದ್ದಾರೆ.
ಎಲ್ಲಾ ವೆಚ್ಚವನ್ನು ತಾವೇ ಭರಿಸಿದ್ದಾರೆ “ಸೋನು ಸೂದ್”.ಬಾಂಬೆ, ಡೆಲ್ಲಿ ಮತ್ತು ಪುಣೆಯಿಂದ ದೇಶದ ಬೇರೆ ಬೇರೆ ರಾಜ್ಯಗಳಿಗೆ( ಬಿಹಾರ್, ಮಧ್ಯ ಪ್ರದೇಶ, ಛತ್ತೀಸ್ಘರ್,ಉತ್ತರ ಪ್ರದೇಶ,ಅಸ್ಸಾಂ) ಜನರನ್ನ ಸಾಗಿಸುವುದಕ್ಕೆ ಕಾರಣಕರ್ತರಾಗಿದ್ದಾರೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಖುದ್ಧು ಅವರೇ ನಿಂತು ಸದ್ದಿಲದೇ ಮಾಡಿದ್ದಾರೆ.
ಕೋಟ್ಯಾ0ತರ ರೂಪಾಯಿ ಖರ್ಚು ಮಾಡಿ ಹಲವರ ಬದುಕಲ್ಲಿ ಆನಂದಕ್ಕೆ,ಜೀವನದಲ್ಲಿ ವಶ್ವಾಸಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ.. ಕನ್ನಡದಲ್ಲಿ ” ವಿಷ್ಣುವರ್ಧನ” ಮತ್ತು ತೆಲುಗಿನ ” ಅರುಂಧತಿ”,ದಬಾಂಗ್ ಸೇರಿದಂತೆ ಇನ್ನು ಅನೇಕ ಸಿನಿಮಾದಲ್ಲಿ ಇವರನ್ನು ನಾವು ಪ್ರಮುಖ ವಿಲ್ಲನ್ ಪಾತ್ರದಲ್ಲಿ ಕಂಡದ್ದೀವಿ.