ರೈತರ ದಿನಾಚರಣೆಯ ಶುಭಾಶಯಗಳು 💐

Dr. Rajkumar

“ನಾಡಿನ ಸಮಸ್ತ ರೈತ ಬಾಂಧವರಿಗೆ ರೈತರ ದಿನಾಚರಣೆಯ ಶುಭಾಶಯಗಳು”,

ರೈತರೇ ದೇಶದ ಬೆನ್ನೆಲುಬು, ರೈತರಿಲ್ಲದೆ ನಾವು ಜೀವನ ಮಾಡಲು ಊಹಿಸೋದಕ್ಕೂ ಸಾಧ್ಯವಾಗೋಲ್ಲ, ರೈತರು ಬೆಳೆದ ಅಕ್ಕಿ, ಗೋಧಿ, ತರಕಾರಿ, ಹಣ್ಣು ಗಳಿಗೆ ನ್ಯಾಯವಾದ ಬೆಲೆ ಸಿಗಲಿ, ಅವರು ಬೆಳೆಸುವ ಸೌತೆಕಾಯಿ, ಸೇಬಿನ ಹಣ್ಣನ್ನು ತಿನ್ನಿ , ಎಳನೀರು ನೈಸಗಿ೯ಕವಾಗಿರುವ ಪಾನೀಯ ಇದನ್ನು ಕುಡಿಯಿರಿ ಅದನ್ನು ಬಿಟ್ಟು ಪೆಪ್ಸಿ, ಕೊಕಾಕೋಲ, ಮಿರಿಂಡ, ಇತ್ಯಾದಿ ಪಾಶ್ಚಿಮಾತ್ಯದಲ್ಲಿ ತಯಾರಿಸಿದ ಪಾನೀಯಗಳನ್ನು ದಯವಿಟ್ಟು ನಿಲ್ಲಿಸಿ, ಒಂದು ಸೇಬಿನ ಒಂದಕ್ಕೆ 15 ರಿಂದ 20 ಇದ್ದರು ಕೊಂಡುಕೊಳ್ಳಿ ಪ್ಯಾಕೆಟ್ ಮಾಡಿದ ಮಾತ್ರಕ್ಕೆ 50 ರಿಂದ 100 ಕೊಟ್ಟು ವಿದೇಶಿ ಸಂಸ್ಕೃತಿಗೆ ಮಾರು ಹೋಗದಿರಿ, ಹೀಗೆ ಹೋದರೆ ರೈತರ ಗೋಳನ್ನು ಕೇಳೋರು ಯಾರಿಹರು. ಹಾಗಂತ ಬೇರೆ ಕಂಪನಿಗಳು ತಮ್ಮ ವ್ಯಾಪಾರಕ್ಕೆ ತೊಂದರೆಯಾಗುವುದು ಎಂದು ಭಾವಿಸುವುದು ತಪ್ಪು, ಅದೇ ರೈತ ಬೆಳೆದ ಪದಾಥ೯ಗಳನ್ನು ಕೊಂಡು ಕಲಬೆರಕೆಯಿಲ್ಲದ ನೈಸಗಿ೯ಕ, ಸ್ವಾಭಾವಿಕ ಪಾನೀಯಗಳನ್ನು ನೀಡಲಿ, ರೈತರಿಗೆ ಸಹಾಯ ಮಾಡಲಿ. ವಷ೯ಕ್ಕೆ ತಾವು ಸಾಲ ಮಾಡಿ ತರಕಾರಿಗಳು ಬೆಳೆದು ನ್ಯಾಯದ ಬೆಲೆ ಸಿಗದೆ ದಾರಿಯಲ್ಲಿ ಚೆಲ್ಲಿ ಸಾಲಭಾಧೆ ತಾಳಲಾರದೆ ಎಷ್ಟೋ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ನಿಮ್ಮ ಕಣ್ಣ ಮುಂದಿದೆ.

farmer’s day

ಒಂದು ಮಾತು ದಯವಿಟ್ಟು ಕೆಲ ಜನಗಳು ಈ ಸಾಲುಗಳನ್ನು ಗಮನಿಸಿ… ನಿಮ್ಮ ಮಗಳಿಗೆ ಇಂಜಿನಿಯರ್, ಡಾಕ್ಟರ್, ಸಕಾ೯ರಿ ಕೆಲಸದಲ್ಲಿರುವರನ್ನೇ ಅಳಿಯ ಆಗಬೇಕು ಎಂದು ಭಾವಿಸುವುದು ತಪ್ಪಲ್ವೇ.. ರೈತರ ಮಕ್ಕಳನ್ನು ಕೆಲವರು ಏಕೆ ತಿರಸ್ಕರಿಸುತ್ತೀರಿ, ಅವರೂ ಕೂಡ ಮನುಷ್ಯರಲ್ಲವೇ, ಅವರಿಗೂ ಜೀವನ ಇದೆಯಲ್ಲವೇ, ಅವರಿಗೂ ಸಮಾಜದಲ್ಲಿ ಉತ್ತಮ ಘನತೆ ಗೌರವ ಇದೆಯಲ್ಲವೇ, ಅವರನ್ನೂ ಗೌರವಿಸಿ, ಅವರ ಕತ್ತಲೆಯ ಬಾಳಿಗೆ ಬೆಳಕಾಗಿ. ಇನ್ನಾದರೂ ಬದಲಾಗಿ ರೈತರ ಜೀವನಕ್ಕೆ ದಾರಿ ದೀಪವಾಗಿ, ಎಷ್ಟೋ ಜನಗಳು ವ್ಯವಸಾಯ ಮಾಡಿ ಅಧ್ಭುತ ಸೃಷ್ಟಿ ಮಾಡಿರೋದನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಸಕಾ೯ರದ ಪಾತ್ರ ತುಂಬಾ ಇದೆ, ರೈತರಿಗೆ ಬೇಕಾಗುವ ಪದಾಥ೯ಗಳನ್ನು ರಿಯಾಯಿತಿ ದರದಲ್ಲಿ ನೀಡಿದರೆ ಮತ್ತು ಸಾಲಮಾಡಿರುವ ಹಣವನ್ನು ಕನಿಷ್ಠ ಪಕ್ಷ ತಡೆದಲ್ಲೀ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಕಡಿಮೆ ಆಗುತ್ತಾರೆ, ಅವರಿಗೆ ಸಂಬಂಧಿಸಿದ ಯೋಜನೆಗಳನ್ನು ಸಕಾ೯ರ ರೂಪಿಸಿದರೆ ಒಳ್ಳೆಯದಲ್ವೆ..

ಭಾರತದ ಆರನೇ ಪ್ರಧಾನ ಮಂತ್ರಿ ಶ್ರೀ. ಚೌದರಿ ಸಿಂಗ್ ರವರ ಜನುಮ ದಿನವನ್ನು ರೈತರ ದಿನಾಚರಣೆ ಎಂದು ಘೋಷಿಸಲಾಗಿದೆ, ಏಕೆಂದರೆ ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅನ್ನದಾತರಿಗೆ ಕೋಟಿ ಕೋಟಿ ನಮನಗಳು 🙏

ಇಷ್ಟು ಹೊತ್ತು ನನಗೆ ತೋಚಿದ ಹಾಗೆ ಬರೆದಿದ್ದೇನೆ, ರೈತರನ್ನು ಗೌರವಿಸಬೇಕಾದದ್ದು ನಮ್ಮೆಲ್ಲರ ಕತ೯ವ್ಯ, ಆದರೆ ಈ ಲೇಖನದಲ್ಲಿ ಕೆಲವು ವಿಚಾರಗಳು ನಿಮ್ಮ ಗಮನಕ್ಕೆ ಬರಲಿ ಎಂಬುದು.

ರೈತರಿಲ್ಲದೆ ನಾವಿಲ್ಲಿ ನೆನಪಿರಲಿ…ಎಲ್ಲರಿಗೂ ಶುಭವಾಗಲಿ 🌹

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply