“ಪ್ರಾಣ” ಇವರು ಅಭಿನಯದ ಮೊದಲ ಸಿನಿಮಾ ಆದ್ರೂ, ರತ್ನಜ ನಿರ್ದೇಶನದ ನೆನಪಿರಲಿ ಖ್ಯಾತಿಯನ್ನು ತಂದುಕೊಟ್ಟ ಸಿನಿಮಾ ..
ಎಲ್ಲರಿಗೂ “ನೆನಪಿರಲಿ ಪ್ರೇಮ್” ಎಂದೇ ಪರಿಚಿತರಾಗಿರುವರು ನಟ ಪ್ರೇಮ್. ಹ್ಯಾಂಡ್ಸಂ,ಮುದ್ದು ಮುಖದ ಪೋರ- ಲವ್ವರ್ ಬಾಯ್ ಪ್ರೇಮ್ಚಿತ್ರರಂಗ ಪ್ರವೇಶಿಸಿ 16 ವರ್ಷಗಳಾಗಿದ್ದು ಇದೀಗ 25 ಸಿನಿಮಾಗಳಲ್ಲಿ ನಟಿಸಿ ಒಂದು ಮೈಲಿಗಲ್ಲು ತಲುಪಿದ್ದಾರೆ, “ಪ್ರೇಮಂ ಪೂಜ್ಯ0” ಇವರ 25ನೆ ಸಿನಿಮಾ.ಈಸಿನಿಮಾದ ಚಿತ್ರೀಕರಣ ಮುಗಿದಿದ್ದು ಸಿನಿಮಾದಲ್ಲಿ ಪ್ರೇಮ್ ಒಂಬತ್ತು ವಿವಿಧ ಗೆಟಪ್ನಲ್ಲಿಕಾಣಲಿದ್ದಾರೆಅನ್ನೋದೇ ಒಂದು ಸ್ಪೆಷಲ್ ಸುದ್ದಿ.
ಪ್ರೇಮ್ ಗೆ ಜೋಡಿಯಾಗಿ ಮಂಗಳೂರಿನ ಬೆಡಗಿ ಬೃಂದಾ ಆಚಾರ್ಯ ಆಯ್ಕೆಯಾಗಿದ್ದಾರೆ. ವೃತ್ತಿಪರ ವೈದ್ಯರಾಗಿರುವಡಾ.ರಾಘವೇಂದ್ರ ಮೊದಲ ಬಾರಿಗೆ ಸಿನಿಮಾವೊಂದನ್ನುನಿರ್ದೇಶಿಸುವ ಹೊಣೆ ಹೊತ್ತಿರುವುದರ ಜೊತೆಗೆ ಅವರೇ ಸಂಗೀತವನ್ನುಸಂಯೋಜಿಸಿದ್ದಾರೆ.ಚಿತ್ರಕ್ಕೆಡಾ.ರಾಜ್ಕುಮಾರ್ಜಾನಕಿರಾಮ್ ಮತ್ತು ಡಾ.ರಕ್ಷಿತ್ಕೆದಂಬಾಡಿನಿರ್ಮಾಪಕರಾಗಿದ್ದಾರೆ. ಇದು ಒಂದು ಲೊವ್,ಆಕ್ಷನ್ ಮತ್ತು ಫ್ಯಾಮಿಲಿ ಡ್ರಾಮಾಹಿನ್ನಲೆಯ ಸದಭಿರುಚಿಯ ಚಿತ್ರ ಎಂದು ಚಿತ್ರತಂಡ ತಿಳಿಸಿದೆ.
ಎಲ್ಲಾ ಡಾಕ್ಟರ್ಗಳು ಸೇರಿ ತಯಾರಿಸುತ್ತಿರುವ ಈ ಸಿನಿಮಾದಲ್ಲಿ ಪ್ರೇಮ್ ಎಷ್ಟು ವಿಭಿನ್ನವಾಗಿಕಾಣ್ತಾರೆ, ಅಭಿನಯಿಸಿರುತ್ತಾರೆ ಜೊತೆಗೆ ಚಿತ್ರದ ಮೇಕಿಂಗ್ಹೇಗಿರುತ್ತದೆ ಎಂದು ಕಾದು ನೋಡ ಬೇಕು.