ಲಿವಿಂಗ್ ಲೆಜೆಂಡ್ ಶಿವಣ್ಣ @ 58

( ಮುಂದುವರೆದ ಭಾಗ )

ನಟರಾದವರ ಕತ೯ವ್ಯ ನೈಜತೆ ಕೇಳುತ್ತದೆ ಹಾಗಾಗಿ ಇದರಲ್ಲಿ ಅಭಿಮಾನಿಗಳು ಆಕ್ರೋಶಗೊಂಡು ದುರಾವತ೯ನೆ ಮಾಡೋದು ಸರಿಯಿಲ್ಲ, ಕಥೆ ಹಾಗೆ ಕೇಳುತ್ತೆ ನೀವು ಬೇಜಾರು ಮಾಡಿಕೊಂಡು ಕೋಪ ಮಾಡಿಕೊಳ್ಳುವುದರಲ್ಲಿ ಅಥ೯ವಿಲ್ಲ ” ನನಗೆ ನಟನೆ ಮುಖ್ಯ, ಚಿತ್ರಗಳು ಸೋಲೋದು, ಗೆಲ್ಲೋದು ಸಾಮಾನ್ಯ ಹಾಗಂತ ಎಲ್ಲಾ ಚಿತ್ರಗಳೂ ಗೆಲ್ಲಬೇಕು ಎಂದರೆ ಹೇಗೆ ..? ಗೆಲ್ಲುವುದು ಸೋಲುವುದು ಎಲ್ಲಾನೂ ಇರಬೇಕು .

ಸುಮ್ಮನೆ ಯಾರೂ ನಿದೇ೯ಶಕರನ್ನು ದೂರಬೇಡಿ, ಅವಮಾನಿಸಬೇಡಿ ಚಿತ್ರದ ಪಾತ್ರ ಮಾಡೋದಕ್ಕೆ ಮೊದಲು ಕಿಚ್ಚ ಸುದೀಪ್ ರವರು ಶಿವಣ್ಣ ರಿಗೆ ತಿಳಿಸಿ ಅವರು ಒಪ್ಪಿಗೆ ನೀಡಿದ ಮೇಲೆ ಆ ಪಾತ್ರ ಮಾಡುವೆ ಎಂದರಂತೆ ಶಿವಣ್ಣ ಒಪ್ಪಿದ ಮೇಲೆ ಆ ಚಿತ್ರದ ಪಾತ್ರ ಹಾಗೆ ಮಾಡಲಾಗಿದೆ. ನಾವಿಬ್ಬರೂ ಚೆನ್ನಾಗೇ ಇದ್ದೀವಿ, ಚೆನ್ನಾಗಿ ಇತೀ೯ವಿ, ಇಲ್ಲ ಸಲ್ಲದ ಆರೋಪ ಹೊರಿಸಿ ಫ್ಯಾನ್ ವಾರ್ ಹೆಸರಲ್ಲಿ ತಪ್ಪು ಮಾಡೋದನ್ನು ನಿಲ್ಲಿಸಿ ಅದರಿಂದ ಪ್ರಯೋಜನವಿಲ್ಲ ಮುಂದೆ ಇದೇ ರೀತಿ ಪ್ರಾಜೆಕ್ಟ್ ಗಳು ಬಂದರೆ ಖಂಡಿತ ಮಾಡುವೆ, ನಾವ್ಯಾರೂ ತಲೆ ಬಿಸಿ ಮಾಡಿಕೊಳ್ಳೋದು ಬಿಟ್ಟು ನಮ್ಮಿಬ್ಬರ ಚಿತ್ರಗಳಿಗೆ ಸಪೋರ್ಟ್ ಮಾಡಿ ಸಾಕು.

ಇನ್ನೂ ಶಿವಣ್ಣ ಕೇವಲ ಚಿತ್ರದಲ್ಲಿ ನಟಿಸುವುದಲ್ಲದೆ ಕನ್ನಡಿಗರಿಗೆ ಅನ್ಯಾಯವಾದಾಗ ಅವರಿಗೆ ಸಾಥ್ ನೀಡಿರೋದು ಗಮನಿಸಿರಬಹುದು ಅಪ್ಟಾಜಿ ಜೊತೆ ಗೋಕಾಕ್ ಚಳವಳಿಯ ಹೋರಾಟದಲ್ಲಿ ಭಾಗವಹಿಸಿರೋದು ನೆನಪಿಗೆ ಬರುವುದು, ಪರ ಭಾಷೆ ಚಿತ್ರದ ಡಬ್ಬಿಂಗ್ ಧೋರಣೆ ವಿರುದ್ಧ ಹೋರಾಟ, ಕಾವೇರಿ ನೀರು ವಿವಾದದ ವಿರುಧ್ಧ, ಚಿತ್ರರಂಗದ ಸಮಸ್ಯೆ ಹೀಗೆ ಇನ್ನೂ….

ತಂದೆಯ ಜೊತೆಯಲ್ಲಿ ಬಣ್ಣ ಹಚ್ಚಿ ಚಿತ್ರದಲ್ಲಿ ನಟನೆ ಮಾಡಿರೋದು ನಾವು ಇಲ್ಲಿ ಗಮನಿಸಬೇಕಾದ ವಿಚಾರ “ಶಿವ ಮೆಚ್ಚಿದ ಕಣ್ಣಪ್ಪ (ಅಣ್ಣಾವೃ ಶಿವ ಪಾತ್ರ) ,  ಗಂಧದ ಗುಡಿ ಭಾಗ 2 (ಅರಣ್ಯಾಧಿಕಾರಿ ಪಾತ್ರ) .

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮೊದಲ ಚಿತ್ರ ರೆಕಾರ್ಡ್ ಮಾಡಿ ರೆಕಾಡ್೯ ಕ್ರಿಯೇಟರ್ ಆದರು. ಇವರ ರೆಕಾರ್ಡ್ ಎಷ್ಟಿದೆ ಅನ್ನೋದು ನಿಮಗಾಗಲೆ ತಿಳಿಸಿರುವೆ, ಅಂದಹಾಗೆ ಶಿವಣ್ಣ ರವರ ಬತ್೯ಡೇ ಸ್ಪೆಷಲ್ “ಭಜರಂಗಿ 2″ ಎ ಹಷ೯ ನಿದೇ೯ಶನದ ಚಿತ್ರದ ಟೀಸರ್ ಅಂದು ಬಿಡುಗಡೆಯಾಗಿ ಇಂಡಿಯಾದಲ್ಲೇ ಟ್ರೆಂಡಿಂಗ್ ನಲ್ಲಿ ನಂಬರ್ ಒನ್ ಆಗಿದೆ, ಶಿವಣ್ಣ ರವರ ಕೀತಿ೯ ಈಗ ‘ನ್ಯಾಷನಲ್ ಸ್ಟಾರ್ ” ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ನೋಡಬಹುದು, ಪ್ಯಾನ್ ಇಂಡಿಯ ಸಿನಿಮಾ,  ನಿಜಕ್ಕೂ ಶಿವಣ್ಣ ರವರ ಎಂಟ್ರಿ ಸೀನ್ ಆ ಕಿಲ್ಲಿಂಗ್ ಲುಕ್, ಹೇರ್ ಸ್ಟೈಲ್,  ಅಜು೯ನ್ ಜನ್ಯ ಬಿ ಜಿ ಎಂ, ಜಯಣ್ಣ ಫಿಲ್ಮ್ಸ್  ರವರ ಅದ್ದೂರಿ ನಿಮಾ೯ಣ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ದಾಖಲೆ ಮಾಡೋದರಲ್ಲಿ ನೋ ಡೌಟ್.

ಶಿವಣ್ಣ ರವರು ಎಷ್ಟು ಬಿಝಿ ಅಂದರೆ ಈಕಡೆ ಸಿನಿಮಾ ಮಾಡ್ತಾರೆ, ಅಭಿಮಾನಿಗಳನ್ನು ಮೀಟ್ ಮಾಡ್ತಾರೆ, ಸಮಾಜ ಸೇವೆ ಮಾಡ್ತಾರೆ, ಇತರೆ ಸಮಾರಂಭಗಳಲ್ಲಿ ಭೇಟಿ ಮಾಡಿ ಅಭಿಮಾನಿಗಳಿಗೆ ಡಾನ್ಸ್ ಮತ್ತು ಹಾಡಿನ ಮೂಲಕ ರಂಜಿಸ್ತಾರೆ. ಈಗ ಈ ಕೊರೋನ ಟೈಂನಲ್ಲಿ ಮನೆಯಲ್ಲೇ ಕುಟುಂಬದವರ ಜೊತೆ ಕಾಲ ಕಳೆದು ಜಿಮ್, ಸೈಕ್ಲಿಂಗ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶಿವಣ್ಣ ರವರ ಮುಂಬರುವ ಚಿತ್ರಗಳು ನೋಡೋದಾದರೆ :-

🦆ಸಿಂಹ (ನಿದೇ೯ಶಕರು ಕೆ ಮಾದೇಶ್).

💐ಆಪರೇಷನ್ ಗೋಲ್ಡನ್ ಗ್ಯಾಂಗ್ (ನಿದೇ೯ಶಕರು ದೊರೈ ಭಗವಾನ್) .

🐎ಆರ್ ಡಿ ಎಕ್ಸ್ (ನಿದೇ೯ಶಕರು ರವಿ ಅರಸು ).

🦄ಭೈರತಿ ರಣಗಲ್ಲು (ನಿದೇ೯ಶಕರು ನತ೯ನ್).

🌻ಎಸ್ ಆರ್ ಕೆ (ನಿದೇ೯ಶಕರು ಲಕ್ಕಿ ಗೋಪಾಲ್).

🦜ಪುಣ್ಯವಂತ (ನಿದೇ೯ಶಕರು ವಿ. ನಾಗೇಂದ್ರ ಪ್ರಸಾದ್).

🦚ಮುತ್ತು ನಮ್ಮಪ್ಪ (ನಿದೇ೯ಶಕರು ರವಿ ಶ್ರೀವತ್ಸ).

💎ಬಾದ್ಷಾ (ನಿದೇ೯ಶಕರು ಆರ್ ಚಂದ್ರು).

👑ಮನಮೋಹಕ (ನಿದೇ೯ಶಕರು ಸಿಂಪಲ್ ಸುನೀಲ್).

🦋ಮದುವೆ (ನಿದೇ೯ಶಕರು ಪನ್ನಗಾಭರಣ).

( ಮುಂದುವರೆಯುವುದು )

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply