ಲಿವಿಂಗ್ ಲೆಜೆಂಡ್ ಶಿವಣ್ಣ @ 58

ಯಾವ ಕಲಾವಿದರೇ ಆಗಲಿ ತಾವು ಮಾಡುವ ಸೇವೆಗೆ ಮತ್ತು ನಟನೆಗೆ ಪುಷ್ಟಿ ಕೊಡುವುದು ಪ್ರಶಸ್ತಿಗಳು.

ಇವರ ಚಿತ್ರರಂಗದ ನಟನೆಗೆ ಮತ್ತು ಕಲಾ ಸೇವೆಗೆ ಪ್ರಶಸ್ತಿಗಳು ಬಂದಿವೆ.

ಸಿನಿ ಎಕ್ಸ್‌ಪ್ರೆಸ್, ಸಿರಿಗನ್ನಡ ಮತ್ತು ಈ ಟಿವಿ ಪ್ರಶಸ್ತಿ ಪುರಸ್ಕೃತರು, ಸಾಮಾಜಿಕ ಕಾಯ೯ಗಳಿಗೆ ತಮ್ಮ ಹೆಸರು ಇಟ್ಟಿರುವುದು, ಅವರ ಜನುಮ ದಿನದ ಅಂಗವಾಗಿ “ಶಿವರಾಜ್ ಕುಮಾರ್ ಸುವರ್ಣ ಮಹೋತ್ಸವ ಅಭಿನಂದನ ಸಮಿತಿ ” ಹೆಸರಿನಲ್ಲಿ ಸಾಮಾಜಿಕ ಕೆಲಸಗಳಿಗೆ ನಡೆಸುತ್ತಿರುವುದು.

🌹ಸಾಮಾಜಿಕ ಕಾಯ೯ಗಳನ್ನು ಗುರುತಿಸಿ ಸೈಮಾ ಸಂಸ್ಥೆಯಿಂದ ಪ್ರಶಸ್ತಿಯನ್ನು ನೀಡಿದ್ದಾರೆ(2012).

🦆ವಿಜಯನಗರ ಶ್ರೀ ಕೃಷ್ಣ ದೇವರಾಯ ಯೂನಿವರ್ಸಿಟಿ, ಬಳ್ಳಾರಿ ಯವರು ಗೌರವಾನ್ವಿತ ಡಾಕ್ಟರೇಟ್ ಪದವಿ ನೀಡಿದ್ದಾರೆ (2014).

ಕನಾ೯ಟಕ ರಾಜ್ಯ ಸರ್ಕಾರ ಪ್ರಶಸ್ತಿಗಳು ನೋಡೋದಾದರೆ

🌻ಓಂ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ 1995-96 ರಲ್ಲಿ ಪಡೆದಿರುವರು.

🌴ಹೃದಯ ಹೃದಯ ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ 1999-2000 ರಲ್ಲಿ ನೀಡಿಕೆ.

🌺ಚಿಗುರಿದ ಕನಸು ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ 2003-2004 ರಲ್ಲಿ ಪಡೆದಿದ್ದಾರೆ.

🌲ಜೋಗಿ ಚಿತ್ರದ ಅಧ್ಬುತ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ್ದಾರೆ

ಫಿಲಂ ಫೇರ್ 04 ಪ್ರಶಸ್ತಿ ಅವುಗಳಲ್ಲಿ…

🍀ಓಂ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ (1995).

🍁ನಮ್ಮೂರ ಮಂದಾರ ಹೂವೆ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ(1996).

🌿ಎ ಕೆ 47 ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ (1999).

🦋ತಮಸ್ಸು ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ (2010).

ಸೈಮಾ ಪ್ರಶಸ್ತಿಗಳು ಹರಸಿ ಬಂದಿವೆ ಕೆಲವು…

🐅ಶಿವ ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ (2013).

🐎ಭಜರಂಗಿ ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ (2014).

🦄ಶಿವಲಿಂಗ ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ (2017).

ನಾಗರಾಜು ಶಿವ ಪುಟ್ಟಸ್ವಾಮಿ (ಶಿವರಾಜ್ ಕುಮಾರ್) ನಟರು, ನಿಮಾ೯ಪಕರು, ಹಿನ್ನೆಲೆ ಗಾಯಕರು ಮತ್ತು ಟಿವಿ ನಿರೂಪಕರು ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕಲಾವೈಶಲ್ಯತೆ ಮೆರೆದಿದ್ದಾರೆ, ಇವರ ತಂದೆ ಇಡೀ ಕನ್ನಡಿಗರಿಗೆ ಗೊತ್ತು ಧೃವತಾರೆ ಡಾ ರಾಜ್ ಕುಮಾರ್ ಮತ್ತು ತಾಯಿ ಪಾವ೯ತಮ್ಮ ರಾಜ್ ಕುಮಾರ್, ಇವರು ಒಂಭತ್ತು ವಷ೯ದ ನಂತರ ಮುತ್ತೆತ್ತರಾಯರ ಆಶೀವಾ೯ದದಿಂದ ಹುಟ್ಟಿದ ಗಾಜನೂರ ಗಂಡು. ದೊಡ್ಮನೆ ಕುಟುಂಬದ ಹಿರಿಮಗ. ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ರವರ ಅಣ್ಣ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply