( ಮುಂದುವರೆದ ಭಾಗ )
34 ವರುಷಕ್ಕೂ ಹೆಚ್ಚು ಚಿತ್ರರಂಗದಲ್ಲಿ ಅಭಿನಯಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ, 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ನಿಮಾ೯ಪಕರಿಗೆ, ನಿದೇ೯ಶಕರಿಗೆ ಪ್ರಿಯವಾದ ನಟರಾಗಿದ್ದಾರೆ.
ಬಾಲ್ಯದಲ್ಲಿ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಂಡಿದ್ದಾರೆ.
ಶ್ರೇಷ್ಠ ನಿದೇ೯ಶಕರಾದ ಕೆ. ಬಾಲಚಂದರ್ ರವರ ಸಲಹೆ ಮೇರೆಗೆ ಬಳಿ ಆಕ್ಟಿಂಗ್ ತರಬೇತಿಯನ್ನು ಚೆನ್ನೈನಲ್ಲಿ ಕಲಿತರು, ನಂತರ ಕುಚುಪುಡಿ ನೃತ್ಯವನ್ನು ವೆಂಪಟಿ ಚಿನ್ನಿ ಸತ್ಯಂ ರವರ ಬಳಿ ಕಾಲೇಜು ದಿನಗಳಲ್ಲಿ ಕಲಿತರು.
ಬ್ಯಾಚುಲರ್ ಆಫ್ ಸೈನ್ಸ್ (ಕೆಮಿಸ್ಟ್ರಿ) ನಂತರ ಸಿಂಗೀತಂ ಶ್ರೀನಿವಾಸ್ ನಿದೇ೯ಶನದ “ಆನಂದ್ ” 1986 ರಲ್ಲಿ ಪ್ರಪ್ರಥಮ ಬಾರಿಗೆ ನಾಯಕ ನಟರಾಗಿ ಚಿತ್ರರಂಗಕ್ಕೆ ಪರಿಚಯಿಸಿದರು, ಈ ಚಿತ್ರದ ನಟನೆಗೆ ಸಿನಿಮಾ ಎಕ್ಸ್‌ಪ್ರೆಸ್ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ್ದಾರೆ, ಆನಂದ್, ರಥ ಸಪ್ತಮಿ (1986) ಮತ್ತು ಮನ ಮೆಚ್ಚಿದ ಹುಡುಗಿ (1987) ರಲ್ಲಿ ನಟಿಸಿ ಅಭಿಮಾನಿಗಳಿಂದ ಹಾಗೂ ಮಾಧ್ಯಮದವರಿಂದ ಪಡೆದ ಪ್ರಶಸ್ತಿ “ಹ್ಯಾಟ್ರಿಕ್ ಹೀರೋ “.
ನಂತರ ಇವರ ಚಿತ್ರಗಳ ಹೆಸರುಗಳು ಹೇಳ್ತಿದ್ರೆ ಸಮಯ ಸಾಲದು ಆದರೂ ಕೆಲವು ಚಿತ್ರಗಳನ್ನು ಹೇಳಬೇಕು ಅನ್ಸುತ್ತೆ. ಶಿವ ಮೆಚ್ಚಿದ ಕಣ್ಣಪ್ಪ, ಸಂಯುಕ್ತ, ಇನ್ಸ್ಪೆಕ್ಟರ್ ವಿಕ್ರಂ, ರಣರಂಗ, ಆಸೆಗೊಬ್ಬ ಮೀಸೆಗೊಬ್ಬ, ಮೃತ್ಯುಂಜಯ, ಮೋಡದ ಮರೆಯಲ್ಲಿ, ಮಿಡಿದ ಶೃತಿ, ಪುರುಷೋತ್ತಮ, ಚಿರಬಾಂಧವ್ಯ, ಗಂಧದ ಗುಡಿ -2, ಮುತ್ತಣ್ಣ, ಗಂಡುಗಲಿ, ಸವ್ಯಸಾಚಿ, ಓಂ, ಸಮರ, ದೊರೆ, ಗಾಜನೂರ ಗಂಡು, ಶಿವಸೈನ್ಯ, ಅಣ್ಣಾವ್ರ ಮಕ್ಕಳು, ನಮ್ಮೂರ ಮಂದಾರ ಹೂವೆ, ಆದಿತ್ಯ, ಜನುಮದ ಜೋಡಿ, ಸಿಂಹದ ಮರಿ, ಜೋಡಿ ಹಕ್ಕಿ, ಕುರುಬನ ರಾಣಿ, ಭೂಮಿ ತಾಯಿಯ ಚೊಚ್ಚಲ ಮಗ, ಗಡಿಬಿಡಿ ಕೃಷ್ಣ, ಚಂದ್ರೋದಯ, ಎ ಕೆ 47, ವಿಶ್ವ, ಹೃದಯ ಹೃದಯ, ಪ್ರೀತ್ಸೆ, ದೇವರ ಮಗ, ಗಲಾಟೆ ಅಳಿಯಂದ್ರು, ಅಸುರ, ಭಾವ ಭಾಮೈದ, ಯುವರಾಜ, ಜೋಡಿ, ತವರಿಗೆ ಬಾ ತಂಗಿ, ಡಾನ್, ಶ್ರೀರಾಮ್, ನಂಜುಂಡಿ, ಚಿಗುರಿದ ಕನಸು, ರಿಷಿ, ರಾಕ್ಷಸ, ವಾಲ್ಮೀಕಿ, ಜೋಗಿ, ಜೋಗಯ್ಯ, ಅಣ್ಣ ತಂಗಿ, ಅಶೋಕನ, ತವರಿನ ಸಿರಿ, ಸಂತ, ಸತ್ಯ ಇನ್ ಲವ್, ಸುಗ್ರೀವ, ತಮಸ್ಸು, ಚೆಲುವೆಯೇ ನಿನ್ನೆ ನೋಡಲು, ಮೈಲಿರಿ, ಶಿವ, ಭಜರಂಗಿ, ಆಯ೯ನ್, ಬೆಳ್ಳಿ, ವಜ್ರಕಾಯ, ಕಿಲ್ಲಿಂಗ್ ವೀರಪ್ಪನ್, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ , ಮಾಸ್ ಲೀಡರ್, ಮಫ್ತಿ, ಟಗರು, ದಿ ವಿಲನ್, ಕವಚ, ಆಯುಶ್ಮಾನ್ ಭವ , ದ್ರೋಣ ಹೀಗೆ…
ಸಿಂಗೀತಂ ಶ್ರೀನಿವಾಸ್, ಎಂ ಎಸ್ ರಾಜಶೇಖರ್, ವಿಜಯ್ , ದಿನೇಶ್ ಬಾಬು, ವಿ ಸೋಮಶೇಖರ್, ಚಿ. ದತ್ತರಾಜ್, ಭಾಗ೯ವ, ಸಾಯಿಪ್ರಕಾಶ್, ಉಪೇಂದ್ರ, ಆನಂದ್ ಪಿ ರಾಜು, ಶಿವಮಣಿ, ಸುನೀಲ್ ಕುಮಾರ್ ದೇಸಾಯಿ, ಎಸ್ ಮಹೇಂದರ್, ಓಂ ಪ್ರಕಾಶ್ ರಾವ್, ಡಿ ರಾಜೇಂದ್ರ ಬಾಬು, ಪಿ ಹೆಚ್ ವಿಶ್ವನಾಥ್, ಟಿ ಎಸ್ ನಾಗಾಭರಣ , ಕಿಶೋರ್ ಸಜಾ೯, ಪಿ ಎನ್ ಸತ್ಯ, ಪ್ರಕಾಶ್, ಪ್ರೇಮ್, ಎಸ್ ನಾರಾಯಣ್, ರಘುರಾಮ್, ಆರ್ ಚಂದ್ರು, ದುನಿಯಾ ಸೂರಿ, ಆರ್ ಹಷ೯, ಯೋಗರಾಜ್ ಭಟ್ , ಪಿ ವಾಸು, ಪ್ರಮೋದ್ ಚಕ್ರವರ್ತಿ, ನತ೯ನ್, ರವಿವಮ೯ ಮುಂತಾದ ನಿದೇ೯ಶಕರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
( ಮುಂದುವರೆಯುವುದು )