( ಮುಂದುವರೆದ ಭಾಗ )
ಸೋದರ ವಾತ್ಸಲ್ಯ ನಿಜವಾಗಿಯೂ ಹೇಗಿರುತ್ತೆ ಅನ್ನೋದಕ್ಕೆ ಅಣ್ಣಾವೃ ನಟಿಸಿದ ಚಿತ್ರಗಳು ಸಾಕ್ಷಿ ಅಣ್ಣ ತಂಗಿ, ದೇವರು ಕೊಟ್ಟ ತಂಗಿ, ಗುರಿ, ಸಮಯದ ಗೊಂಬೆ ಹೀಗೆ ಹಲವಾರು ಚಿತ್ರಗಳು.
ಅಣ್ಣಾವ್ರ ನಂತರ ಅದೇ ಸೋದರ ಸಂಬಂಧದ ನೈಜ ಚಿತ್ರಣ ಶಿವಣ್ಣ ರವರ ಚಿತ್ರಗಳಲ್ಲಿ ಕಾಣಬಹುದು.
ಕುಟುಂಬ ಸಮೇತ ನೋಡಬಹುದಾದ ಚಿತ್ರ, ಸೋದರ ಸಂಬಂಧದ ಚಿತ್ರಗಳು ತೆಗೆಯುವಲ್ಲಿ ಹೆಸರಾದ ಶ್ರೀ ಸಾಯಿಪ್ರಕಾಶ್ ಯವರು, ಇವರು ನಿದೇ೯ಶಿಸಿದ ಚಿತ್ರ ತವರಿಗೆ ಬಾ ತಂಗಿ, ಅಣ್ಣ ತಂಗಿ, ದೇವರು ಕೊಟ್ಟ ತಂಗಿ, ತವರಿನ ಸಿರಿ, ಶಿವಣ್ಣ ರವರನ್ನು ತೆರೆಯ ಮೇಲೆ ನೋಡಿ ಅಭಿಮಾನಿಗಳು ತಮಗೆ ತಂಗಿ ಇದ್ದರೂ ಹೀಗೆ ನೋಡಿಕೊಳ್ಳಲಿಲ್ಲವಲ್ಲ ಮತ್ತು ಇನ್ನೂ ಕೆಲವರು ಹೆಣ್ಣು ಮಕ್ಕಳು ನಮಗೆ ಇಂಥ ಅಣ್ಣ ಸಿಗಲಿಲ್ಲವಲ್ಲ ಎಂದು ಕೊರಗಿದವರು , ಮುಂದಿನ ಜನ್ಮದಲ್ಲಿ ಇಂಥ ಅಣ್ಣನೇ ಸಿಗಬೇಕು ಅಂತ ಬೇಡಿಕೊಳ್ಳೋರು , ರಾಧಿಕ ಎಲ್ಲರಿಗೂ ಗೊತ್ತಲ್ವ ಇವರು ಶಿವಣ್ಣ ಜೊತೆ ಮಾಡಿರುವ ಚಿತ್ರಗಳೇ ಹೇಳುತ್ತೆ ನಿಜವಾದ ಅಣ್ಣ ತಂಗಿ ಸಂಬಂಧ ಹೀಗಿರುವುದು. ಈಗಿನ ಮತ್ತು ಮುಂದಿನ ದಿನಗಳಲ್ಲಿ ಸಹ ಶಿವಣ್ಣ ಹೊರತು ಮತ್ತಾರೂ ಈ ಪಾತ್ರಕ್ಕೆ ಸರಿಹೊಂದುವುದಿಲ್ಲ.
💖ನಾ ಕಂಡ ಮಾನ್ಯತ ದೊರೆ ಶಿವಣ್ಣ ಮತ್ತು ಗೀತಕ್ಕ
ಪ್ರತಿಯೊಬ್ಬ ಅಭಿಮಾನಿಗೂ ತಮ್ಮ ಇಷ್ಟವಾದ ನಟರನ್ನು ಕಣ್ಣು ತುಂಬ ನೋಡಿ ಮಾತನಾಡಿಸಿ ಒಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನೋದು, ಹಾಗೆ ನನಗೆ ತುಂಬಾ ಆಸೆಯಿದ್ದದ್ದು ಅಪ್ಪಾಜಿ “ಡಾ ರಾಜ್ ಕುಮಾರ್ ” ನೋಡಬೇಕೆಂಬ ಆಸೆ ಕೊನೆವರೆಗೂ ಕನಸಾಗೇ ಉಳಿಯಿತು, ನನಸಾಗಲಿಲ್ಲ…
ಆದರೆ ಅವರನ್ನು ಭೇಟಿ ಮಾಡಲಾಗದ ನೋವು ಸದಾ ಕಾಡುತ್ತಿರುವಾಗಲೇ ಅವರ ಹಿರಿಯ ಮಗ, ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ರವರನ್ನು ಹೇಗಾದರೂ ಮಾಡಿ ಒಂದು ಸಲ ಹತ್ತಿರದಿಂದ ನೋಡಬೇಕು ಅನ್ನೋ ಬಯಕೆ ಆದರೆ ಇವರನ್ನು “ಕವಚ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನೋಡಿದೆ ಅಷ್ಟೆ ಅವರ ಜೊತೆ ಫೋಟೋ ಆಗಲಿಲ್ಲ, ಎಷ್ಟೇ ದೊಡ್ಡವರಾದ್ರೇನಂತೆ ನಾವು ಬಂದಿದ್ ದಾರಿ ಮರಿಬಾದ೯ಂತೆ ಅನ್ನೋ ಹಾಗೆ ಶಿವಣ್ಣ ಅವರನ್ನು ಭೇಟಿ ಮಾಡಲು ಯಾರೇ ಹೋದರೂ ಅವರಿಗೆ ಬೇಸರವಾಗದಂತೆ ತಾಳ್ಮೆಯಿಂದ ಪ್ರತಿಯೊಬ್ಬರನ್ನು ಭೇಟಿ ಮಾಡಿ ಬಂದವರಿಗೆ ನೋವಾಗದಂತೆ ಒಂದಿಷ್ಟು ಅಹಂಕಾರವಿಲ್ಲದೆ ನಡೆದುಕೊಳ್ಳುತ್ತಿದ್ದರು, ಈ ದಿನ ನಾನು ಎಂದಿಗೂ ಮರೆಯಲಾರೆ.