ಲಿವಿಂಗ್ ಲೆಜೆಂಡ್ ಶಿವಣ್ಣ @ 58

( ಮುಂದುವರೆದ ಭಾಗ )

ಶಿವಣ್ಣ ರವರನ್ನು ಎಲ್ಲರೂ ಇಷ್ಟ ಪಡುತ್ತಾರೆ ಕಾರಣ ನಾನು ನನ್ನದು ಅನ್ನೊ ಅಹಂ ಇಲ್ಲದೆ ಎಲ್ಲರೂ ನಮ್ಮವರು ಎಂಬ ಮನೋಭಾವ, ಕೆಲವು ಫೈಟಿಂಗ್ ಸೀನ್, ಡಾನ್ಸ್ ಸೀನ್ ಮುಗಿದ ತಕ್ಷಣ ಮತ್ತೆ ಮುಂದಿನ ಸೀನ್ ಗಾಗಿ ತಯಾರಿ ಮಾಡ್ಕೊತಾರೆ, ಪಾದರಸದಂತೆ ಕೆಲಸ ಮಾಡುತ್ತಾರೆ, ಕೆಲ ಕಲಾವಿದರ ಹಾಗೆ ನನ್ನ ಕೈಲಿ ಮಾಡೋಕಾಗಲ್ಲ, ತುಂಬಾ ಸುಸ್ತಾಗಿದೆ, ರೆಸ್ಟ್ ತಗೊಳ್ತೀನಿ ಅಂತ ಹೇಳಿದ ಪ್ರಸಂಗ ಕಡಿಮೆ, ಸದಾ ಲವಲವಿಕೆಯಿಂದ ಇರುತ್ತಾರೆ, ಇವರನ್ನು ಭಾರತೀಯ ಚಿತ್ರರಂಗದಲ್ಲಿರುವ ದಿಗ್ಗಜ ಕಲಾವಿದರಾದ ಅಮಿತಾಬ್ ಬಚ್ಚನ್, ರಜಿನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ನಾಗಾಜು೯ನ, ಪ್ರಭು ಶಿವಾಜಿ ಗಣೇಶನ್, ಶಾರುಖ್ ಖಾನ್..

ಇವರು ಕಲ್ಯಾಣ್ ಜುವೆಲರ್ಸ್ ಚಿನ್ನದ ಶೋರೂಂನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ, ಪ್ರತಿಯೊಂದು ರಾಜ್ಯಕ್ಕೆ ಒಬ್ಬೊಬ್ಬ ಚಿತ್ರ ನಟ ಬ್ರಾಂಡ್ ಅಂಬಾಸಿಡರ್ ಆದರೆ ನಮ್ಮ ಕನಾ೯ಟಕದ ರಾಯಭಾರಿ ಇವರು.

ಶಿವಣ್ಣ ರಿಗೆ ದೇವರ ಮೇಲೆ ಬಹಳ ಭಕ್ತಿ ಮತ್ತು ನಂಬಿಕೆ, ಅಣ್ಣಾವೃ ಇದ್ದಾಗಿನಿಂದ ಪ್ರತಿ ವರ್ಷವೂ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಿದ್ದರು, ಹಿರಿಯ ಕಲಾವಿದರೆಲ್ಲರೂ ಸೇರಿ, ಅಣ್ಣಾವ್ರ ನಂತರ ಪ್ರತಿ ವರ್ಷ ಚಾಚೂತಪ್ಪದೆ ಶಬರಿಮಲೆಗೆ ಹೋಗಿಬರುತ್ತಾರೆ, ಪುನೀತ್ ರಾಜಕುಮಾರ್, ಹಿರಿಯ ನಟರು ಶಿವರಾಮ್, ನಿದೇ೯ಶಕ ರಘುರಾಮ್, ಸಂಬಂಧಿಕರು ಲಕ್ಷ್ಮಣ್, ರಾಮ್ ಕುಮಾರ್ , ಲವ್ಲಿ ಸ್ಟಾರ್ ಪ್ರೇಮ್ ಇನ್ನೂ ಹಲವಾರು ಮಿತ್ರರೆಲ್ಲಾ ಹೋಗಿ ಅಯ್ಯಪ್ಪ ಸ್ವಾಮಿಯ ದಶ೯ನ ಮಾಡುತ್ತಾರೆ,
“ಶಕ್ತಿಧಾಮ ” ಅಬಲೆ ಹೆಣ್ಣು ಮಕ್ಕಳಿಗೆ ಆಶ್ರಯ ನೀಡುವ ಆಲಯ, ಪಾವ೯ತಮ್ಮ ರಾಜ್ ಕುಮಾರ್ ರವರು ಕಟ್ಟಿಸಿ ಹಲವಾರು ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವರು, ಅವರ ನಂತರ ಆಶ್ರಮದ ಜವಾಬ್ದಾರಿ ಇವರು ಮತ್ತು ಗೀತಕ್ಕ ನೋಡಿಕೊಳ್ಳುತ್ತಿದ್ದಾರೆ.

ಶಿವಣ್ಣ ರವರು ನಟನೆಯಲ್ಲದೆ ಕಿರುತೆರೆಯ ರಿಯಾಲಿಟಿ ಶೋ ಆದ “ನಂ 1 ಯಾರಿ ವಿತ್ ಶಿವಣ್ಣ ” ಕಾಯ೯ಕ್ರಮ ನಡೆಸಿಕೊಟ್ಟಿದ್ದಾರೆ, “ನಾನಿರುವುದೆ ನಿಮಗಾಗಿ ” ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದೆ, ಈ ಶೋ ಮುಖ್ಯ ಉದ್ದೇಶ ನೋವಿನಲ್ಲಿರುವ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ವೇದಿಕೆ,ಚಿಂತಿಸಬೇಡಿ ನಿಮ್ಮ ಜೊತೆ ನಾವಿದ್ದೇವೆ ಧೈರ್ಯ ಹೇಳೋ ಪ್ರಯತ್ನದ ಶೋ, ದೊಡ್ಡ ಮನುಷ್ಯರಿಂದ ಸಹಾಯ ಮಾಡಿಸುವುದು, ಈ ಕಾರ್ಯಕ್ರಮವು ತುಂಬಾ ಜನಪ್ರಿಯತೆ ಗಳಿಸಿದೆ.

ಮುಂದುವರಿಯುವುದು

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply