ಲಿವಿಂಗ್ ಲೆಜೆಂಡ್ ಶಿವಣ್ಣ @ 58

( ಮುಂದುವರೆದ ಭಾಗ )

58 ಆದರೂ 28 ರ ಚಿರಯುವಕ ಆಗಿ ಸದಾ ಸ್ಪೋಟಿ೯ವ್ ನಂತೆ ಕಾಣಲು ನಿರಂತರವಾಗಿ ಯೋಗ, ವ್ಯಾಯಾಮ ಮತ್ತು ಜಿಮ್ ಮಾಡುವುದರಿಂದ, ಎಲ್ಲರಿಗೂ 40 -50 ವಯಸ್ಸಾದರೆ ಸಾಕಪ್ಪಾ ಸಾಕು ಏನು ಮಾಡೋದೇ ಬೇಡ ಅನ್ನೋ ಜನರಲ್ಲಿ ಸಿಕ್ಸ್ ಪ್ಯಾಕ್ ಮಾಡಿ ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿದ ಎವರ್ ಗ್ರೀನ್ ಸೂಪರ್ ಸ್ಟಾರ್ ಶಿವಣ್ಣ.

ಇವರ ಹವ್ಯಾಸಗಳು ಸಿನಿಮಾ ನೋಡುವುದು, ಸಂಚಾರ ಮಾಡುವುದು, ಸಂಗೀತ ಕೇಳುವುದು ಮತ್ತು ಕ್ರಿಕೆಟ್ ಆಡುವುದು, ಇಲ್ಲಿ ಕ್ರಿಕೆಟ್ ಅನ್ನೋ ವಿಷಯ ಬಂದಿವೆ ಶಿವಣ್ಣ ಇಷ್ಟ ಪಟ್ಟು ಕ್ರಿಕೆಟ್ ಆಡ್ತಾರೆ, ರಾಜ್ ಕಪ್, ಸಿ. ಸಿ.ಎಲ್ ನಲ್ಲಿ ಆಡಿದ್ದಾರೆ, ಉತ್ತಮ ಬೌಲರ್ ಕೂಡ ಯಾವುದೇ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಾರೆ.

ಇನ್ನೂ ಇವರ ಹೇರ್ ಸ್ಟೈಲ್ ಬಗ್ಗೆ ಕೆಲವು ಹೇಳಬಹುದು ನೀವು ಗಮನಿಸಿ ಸತ್ಯ ಇನ್ ಲವ್, ಜೋಗಿ, ಜೋಗಯ್ಯ, ಜನುಮದ ಜೋಡಿ ಮುಂತಾದ ಚಿತ್ರಗಳಲ್ಲಿ ಅವರ ಹೇರ್ ಸ್ಟೈಲ್ ಚಿತ್ರಗಳಿಗೆ ಪಾತ್ರಗಳು ಒಪ್ಪುವಂತೆ ಇರುತ್ತವೆ ಕಾರಣ ನಟನೆಯಲ್ಲಿರುವ ಶ್ರಧ್ಧೆ ಹಾಗೂ ನಿದೇ೯ಶಕರಿಗೆ ಪಾತ್ರಕ್ಕೆ ತಕ್ಕ ಹಾಗೆ ನಟನೆ. ಚಾಲೆಂಜಿಂಗ್ ಸ್ಟಾರ್ ದಶ೯ನ್ ,ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಾಕಿಂಗ್ ಸ್ಟಾರ್ ಯಶ್, ವಶಿಷ್ಟ ಸಿಂಹ, ಧನಂಜಯ್, ದುನಿಯಾ ವಿಜಯ್ ಮತ್ತಿತರ ಕಲಾವಿದರು ಇವರನ್ನು ಅಣ್ಣನ ಸಮಾನವಾಗಿ ನೋಡುತ್ತಾರೆ, ಇವರ ಹತ್ತಿರ ಸಲಹೆ ಪಡೆಯುತ್ತಾರೆ, ಪುನೀತ್ ರಾಜಕುಮಾರ್ ರಿಗೆ ಶಿವಣ್ಣ ರವರ ಡ್ಯಾನ್ಸ್ ಜೊತೆ ಯಾವುದೇ ಕೆಲಸಕ್ಕೂ ರೆಡಿ ಇರೋದು, ಇವರನ್ನು ಇನ್ಸ್ಪಿರೇಷನ್ ಮತ್ತು ರೋಲ್ ಮಾಡೆಲ್ ಎನ್ನುತ್ತಾರೆ.

ಶಿವಣ್ಣ ಮತ್ತು ರವಿಚಂದ್ರನ್ ಇಬ್ಬರು ಚಿಕ್ಕಂದಿನಿಂದಲೇ ಒಳ್ಳೆ ದೋಸ್ತ್ ಬಾಂಧವ್ಯ ಬೆಳೆಸಿಕೊಂಡು ಬಂದವರು, ತಂದೆ ಎನ್. ವೀರಾಸ್ವಾಮಿ ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕರು, ಅಣ್ಣಾವ್ರ ಚಿತ್ರಗಳು ಇವರ ಸಂಸ್ಥೆಯಿಂದ ನಿಮಾ೯ಣವಾಗಿ ದಾಖಲೆ ಬರೆದಿವೆ,  ಕುಲಗೌರವ, ನಾ ನಿನ್ನ ಮರೆಯಲಾರೆ ಇತ್ಯಾದಿ.

ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಅಣ್ಣಾವ್ರ ಜೊತೆ ನಟಿ ಜೂಲಿ ಲಕ್ಷ್ಮಿ ರವರು ನಟಿಸಿದ್ದಾರೆ, ಆಗಿನ ಕಾಲದಲ್ಲಿ ಶಿವಣ್ಣ ಮತ್ತು ರವಿಚಂದ್ರನ್ ಇಬ್ಬರು ಚಿತ್ರೀಕರಣ ನೋಡೋಕೆ ಹೋಗುತ್ತಿದ್ದರಂತೆ, ಚಿತ್ರೀಕರಣ ಅಂದರೆ ಏನು ಹೇಗೆ ನಡೆಯುತ್ತದೆ ಅನ್ನೋ ಕುತೂಹಲ ಮತ್ತು ನೋಡೋಕೆ ತುಂಬಾ ಖುಷಿ ಕೊಡುತ್ತವೆ.

ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಒಂದು ಹಾಡಿನ ಚಿತ್ರೀಕರಣ “ನನ್ನಾಸೆಯ ಹೂವೆ ಬೆಳದಿಂಗಳ ಚೆಲುವೆ ” ಹಾಡು ಚಿತ್ರೀಕರಣ ನಡಿಬೇಕು ಆದರೆ ಅವರನ್ನು ಒಳಗಡೆ ಬಿಡುತ್ತಿರಲಿಲ್ಲ ಅರೆ… ಇದೇನಪ್ಪ ನಟರ ಮಕ್ಕಳನ್ನು ಒಳಗೆ ಬಿಡ್ತಿಲ್ವಾ.. ಯಾಕೆ ಅನ್ನೋ ಕುತೂಹಲ ನಿಮಗೆ.. ಹೇಳ್ತೀನಿ ಕೇಳಿ ಆ ಹಾಡಿನ ಚಿತ್ರೀಕರಣದಲ್ಲಿ ಲಕ್ಷ್ಮಿ ರವರು ತೊಟ್ಟ ಉಡುಗೆ ಬಹಳ ಚಿಕ್ಕದಿದೆ ಹಾಡಿಗಾಗಿ ಮತ್ತು ಕಥೆಯ ಪಾತ್ರಕ್ಕಾಗಿ ಈ ವೇಷವನ್ನು ಮಕ್ಕಳಾದ ಇವರಿಬ್ಬರು ನೋಡಬಾರದು ಏಕೆಂದರೆ ಅವರಿನ್ನೂ ಚಿಕ್ಕವರು ಅನ್ನೋ ಕಾರಣಕ್ಕೆ, ಚಿಕ್ಕ ಮಕ್ಕಳಿದ್ದರೂ ಆ ಹಾಡಿನ ಚಿತ್ರೀಕರಣ ನೋಡಲೇಬೇಕೆಂಬ ಬಯಕೆನ ಅವರಿಬ್ಬರೂ ಹಾಗೋ ಹೀಗೋ ನೆಪ ಮಾಡಿಕೊಂಡು ನೋಡಿದರು ಈ ಸಂದರ್ಭವನ್ನು ತಮ್ಮ ಸಂದಶ೯ನದಲ್ಲಿ ಹೇಳಿಕೊಂಡಿದ್ದಾರೆ, ಇವರ ಸ್ನೇಹ ಸಂಕೇತವಾಗಿ “ಕೋದಂಡರಾಮ” ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ, ಈಗಲೂ ಇವರ ಸ್ನೇಹ ಹಾಗೇ ಇದೆ, ಇನ್ನೂ ಉಪೇಂದ್ರ ರವರಂಥ ನಿದೇ೯ಶಕರ ಜೊತೆ “ಪ್ರೀತ್ಸೆ, ಲವಕುಶ ” ಚಿತ್ರದಲ್ಲಿ ನಟಿಸಿದ್ದಾರೆ, ಹಾಗೆ ಕಿಚ್ಚ ಸುದೀಪ್ ರವರ ಜೊತೆ “ದಿ ವಿಲನ್ ” ಚಿತ್ರದಲ್ಲಿ ನಟಿಸಿದ್ದಾರೆ, ಆದರೆ ಈ ಚಿತ್ರದ ಕೊನೆಯ ದೃಶ್ಯದಲ್ಲಿ ಶಿವಣ್ಣ ರವರಿಗೆ ಸುದೀಪ್ ಹೊಡೆಯುವುದನ್ನು ಅಭಿಮಾನಿಗಳು ನಿದೇ೯ಶಕರಾದ ಪ್ರೇಮ್ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರೂ ಶಿವಣ್ಣ ಹೇಳೋ ಮಾತು ಹಾಗೂ ದೊಡ್ಡತನ “ಯಾವುದೇ ಚಿತ್ರಕಥೆ ಪೂಣ೯ವಾಗಲು ಪಾತ್ರಗಳು ಮುಖ್ಯ, ಕಥೆ ಕೇಳುವ ಹಾಗ ನಟಿಸಬೇಕಾದ್ದು ನಟರಾದವರ ಕತ೯ವ್ಯ ನೈಜತೆ ಕೇಳುತ್ತದೆ ಹಾಗಾಗಿ ಇದರಲ್ಲಿ ಅಭಿಮಾನಿಗಳು ಆಕ್ರೋಶಗೊಂಡು ದುರಾವತ೯ನೆ ಮಾಡೋದು ಸರಿಯಿಲ್ಲ, ಕಥೆ ಹಾಗೆ ಕೇಳುತ್ತೆ ನೀವು ಬೇಜಾರು ಮಾಡಿಕೊಂಡು ಕೋಪ ಮಾಡಿಕೊಳ್ಳುವುದರಲ್ಲಿ ಅಥ೯ವಿಲ್ಲ ” ನನಗೆ ನಟನೆ ಮುಖ್ಯ, ಚಿತ್ರಗಳು ಸೋಲೋದು, ಗೆಲ್ಲೋದು ಸಾಮಾನ್ಯ ಹಾಗಂತ ಎಲ್ಲಾ ಚಿತ್ರಗಳೂ ಗೆಲ್ಲಬೇಕು ಎಂದರೆ ಹೇಗೆ ..? ಗೆಲ್ಲುವುದು ಸೋಲುವುದು ಎಲ್ಲಾನೂ ಇರಬೇಕು .

( ಮುಂದುವರೆಯುವುದು )

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply