ಲೂಡೋ

ಲೈಫನ್ನು ಲೂಡೋ ಆಟಕ್ಕೆ ಹೋಲಿಸಿ ಪಾಪ-ಪುಣ್ಯದ ಬಗ್ಗೆ ಹೊಸ ವ್ಯಾಖ್ಯಾನವನ್ನು ನೀಡಲು ನಿರ್ದೇಶಕರು ನಾಲ್ಕು ವಿಭಿನ್ನ ಕಥೆಗಳನ್ನು ಐದನೇ ಕಥೆಯೊಂದಿಗೆ ಸಮನ್ವಯಗೊಳಿಸಿ ಡಾರ್ಕ್ ಹ್ಯೂಮರ್-ನೊಂದಿಗೆ ಪ್ರಸ್ತುತಪಡಿಸಿದ್ದಾರೆ.


1) ಇಂಟರ್’ನೆಟ್ಟಲ್ಲಿ ಲೀಕ್ ಆಗಿರುವ ತಮ್ಮ ಹಳೆಯ ಖಾಸಗಿ ವೀಡೀಯೋದ ಜಾಡನ್ನು ಅರಸಿ ಹೊರಟಿರುವ ಮಾಜಿ ಪ್ರೇಮಿಗಳಾದ ‘ಆಕಾಶ್’ ಮತ್ತು ‘ಶೃತಿ’ (ಆದಿತ್ಯ ರಾಯ್ ಕಪೂರ್ – ಸಾನ್ಯಾ ಮಲ್ಹೋತ್ರ) ಲೈಫನ್ನೋ ಲೂಡೋ ಆಟದ ಹಳದಿ ಕಾಯಿಗಳು.
2) ಜೈಲಿನಿಂದ ಬಿಡುಗಡೆ ಆಗಿ ಬಂದಿರುವ ಮಾಜಿ ಗೂಂಡಾ ‘ಬಿಟ್ಟು’ (ಅಭಿಷೇಕ್ ಬಚ್ಚನ್) ಕೆಂಪು ಕಾಯಿ.
3) ಬಾಲ್ಯದ ಗೆಳತಿ ‘ಪಿಂಕಿ’ (ಫಾತಿಮಾ ಸನಾ ಶೇಖ್) ಬೇರೆಯವನನ್ನು ಮದುವೆಯಾಗಿ ಅವಳಿಗೆ ಮಗುವಾಗಿದ್ದರೂ ಮನಸ್ಸಿನಲ್ಲಿಯೇ ಅವಳನ್ನು ಪ್ರೀತಿಸುತ್ತಿರುವ ‘ಆಲು’ (ರಾಜ್ ಕುಮಾರ್ ರಾವ್). ಇವರಿಬ್ಬರೂ ಹಸಿರು ಕಾಯಿಗಳು.
4) ಮಾಲ್ ಒಂದರಲ್ಲಿ ಸೇಲ್ಸ್’ಮ್ಯಾನ್ ಆಗಿರುವ ‘ರಾಹುಲ್ ಅವಸ್ತಿ‌’ (ರೋಹಿತ್‌ ಸುರೇಶ್ ಸರಾಫ್) ಹಾಗೂ ನರ್ಸ್ ‘ಶ್ರೀಜಾ ಥಾಮಸ್’ (ಪರ್ಲ್ ಮಾನಿ) ಈ ಆಟದ ನೀಲಿ ಕಾಯಿಗಳು.

ಬಟರ್’ಫ್ಲೈ ಇಫೆಕ್ಟ್’ನಂತೆ ಸಾಗುವ ಈ ಮೇಲಣ‌ ನಾಲ್ಕು ವಿಭಿನ್ನ ಕಥೆಗಳನ್ನು ಜೋಡಿಸುವ ಕೊಂಡಿ ಡಾನ್ ‘ಸತ್ತು’ (ಪಂಕಜ್ ತ್ರಿಪಾಠಿ).

ತಮಿಳಿನ ‘ಸೂಪರ್ ಡೀಲಕ್ಸ್’ ಸಿನೆಮಾವನ್ನು ಮಾದರಿಯಾಗಿಟ್ಟುಕೊಂಡು ತಯಾರಿಸಿದ ಸಿನೆಮಾದಂತಿದ್ದರೂ ಇದು ತನ್ನದೇ ಆದ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡಿದೆ.‌ ಎಲ್ಲ ಕಲಾವಿದರು ಅಭಿನಯದಲ್ಲಿ ಡಿಸ್ಟಿಂಕ್ಷನ್ ಪಡೆದುಕೊಳ್ಳುತ್ತಾರೆ. ನಟನೆಯಲ್ಲಿ ಇಡೀ ಸಿನೆಮಾವನ್ನು ತಿಂದು ಹಾಕುವ ಪಂಕಜ್ ತ್ರಿಪಾಠಿ. ವಿಭಿನ್ನ ಪಾತ್ರದ ಆಯ್ಕೆಯಲ್ಲಿ ಮತ್ತೊಮ್ಮೆ ಇಷ್ಟವಾಗುವ ರಾಜ್ ಕುಮಾರ್ ರಾವ್ ಮಿಥುನ್ ಚಕ್ರವರ್ತಿಯ ಅಭಿಮಾನಿಯಾಗಿ ನಮ್ಮನ್ನೂ ಕುಣಿಸುತ್ತಾರೆ. ಎರಡೂವರೆ ತಾಸಿನ ಸಿನೆಮಾ ಇಂಟರ್’ವಲ್ಲನ್ನೂ ನೆನಪಿಸದೆ ನೋಡಿಸಿಕೊಂಡು ಹೋಗುತ್ತೆ.‌


ಲೈಫನ್ನೋ ಲೂಡೋ ಆಟದ ಈ ಕಾಯಿಗಳಲ್ಲಿ ಕೊನೆಗೆ ಗೆಲ್ಲೋದು ಯಾರು ಎನ್ನುವುದು ಸಿನೆಮಾ ಮುಗಿದರೂ ಕಾಡಿದರೆ ಸಿನೆಮಾ ಗೆದ್ದಂತೆ. ಒಮ್ಮೆ ನೋಡಿ.
ನಮಸ್ಕಾರ.

Author: Santhosh

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply