ಪವರ್ ಸ್ಟಾರ ಪುನೀತ್ ರಾಜ್ಕುಮಾರ್ ಅವರ ಚಿತ್ರ ಬಿಡುಗಡೆಯಾಗ್ತಿದೆ ಅಂದ್ರೆ ಸಾಕು ಅದನ್ನ ನೋಡೋಕೆ ಕುಟುಂಬಸ್ಥರು-ಮನೆ ಮಂದಿಯವರೆಲ್ಲ, ವಿಹಾರಕ್ಕೆ ತೆರಳುವಹಾಗೆ ಬಹಳ ಸಂಭ್ರಮದಿಂದ ಚಿತ್ರಮಂದಿರತ್ತ ಧಾವಿಸುತ್ತಾರೆ. ಸಾಂಸಾರಿಕ ಮಾತ್ತು ಸಾಮಾಜಿಕ ಸಿನಿಮಾಗಳ ಸರದಾರ ಎಂದು ಆಮೋದಿಸಲು ಇವರು ನಟಿಸಿದಂತಹ ಸಿನಿಮಾಗಳಾದ ,”ಅರಸು”, ಪೃಥ್ವಿ, ಅಭಿ, ಮಿಲನ, ರಾಜಕುಮಾರ, ಮೈತ್ರಿ, ರಾಮ್ ಮತ್ತು ಆಕಾಶ್ ಪೂರಕವಾಗಿದ್ದು, ಗಲ್ಲಾ ಪೆಟ್ಟಿಗೆಯಲ್ಲು ದೊಡ್ಡ ಸದ್ದು ಮಾಡಿತ್ತು.
ಪೂರಿ ಜಗನ್ನಾತ್, ಸಮುತಿರಖಣಿ, ಜಯಂತ ಪರಂಜಪೇ, ಜಯಂತ್ ಸೇರಿದಂತೆ ದಕ್ಷಿಣ ಭಾರತದ ಹಲವು ಖ್ಯಾತ ನಿರ್ದೇಶಕರ ಜೊತೆಗೆ ಕೈ ಜೋಡಿಸಿ ಕ್ಲಾಸ್ ಸಿನಿಮಾಗಳ ಛಾಪನ್ನ ಎಲ್ಲರಲ್ಲೂ ರುಜುಮಾಡಿದ್ದಾರೆ..
ಇದೀಗ ಮತ್ತೊರ್ವವ ಸೆಲೆಬ್ರಿಟಿ ನಿರ್ದೇಶಕನ ಜೊತೆಯಲ್ಲಿ ಸಿನಿಮಾ ಮಾಡಲು ಪುನೀತ್ ಸಿದ್ಧರಾಗಿದ್ದಾರೆ…ತಮಿಳಿನ “ಗೌತಮ ವಾಸುದೇವ್ ಮೇನನ್” ಅಪ್ಪು ಅವರನ್ನ ಇತ್ತೀಚಿಗೆ ಭೇಟಿ ಮಾಡಿ ಕಥೆಯ ಎಳೆಯನ್ನ ಹೇಳಿದ್ದಾರೆ, ಖುಷಿಯ ಸಂಗತಿ ಏನೆಂದರೆ ಅಪ್ಪು ಅವರಿಗೂ ಅದು ಬಹಳ ಹಿಡಿಸಿದ್ದು ಮುಂದುವರೆಯಲು ಸಮ್ಮತಿ ನೀಡಿದ್ದಾರೆ..
ಬಹಳ ವರ್ಷಗಳಿಂದ ಈ ಜೋಡಿ ಸಿನಿಮಾ ಮಾಡುವುದಾಗಿ ಚರ್ಚೆಯಾಗ್ತಿತ್ತು ಆದ್ರೆ ಅನೇಕ ಅಡಚಣೆಗಳಿಂದಾಗಿ ಸಿನಿಮಾ ಸೆಟ್ಟೇರಲೇ ಇಲ್ಲ. ಇದೀಗ ಕಾಲ ಕೂಡಿ ಬಂದಂತಿದೆ, ಎಲ್ಲವು ಸರಿಹೋದ್ದಲಿ ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸಿನಿಮಾ ಚಾಲು ಗೊಳ್ಳುವುದು….
ವಾರಣಂ ಆಯಿರ0, ವಿನ್ನೈತಾಂಡಿ ವರುವಾಯ, ವೇತ್ತೆಯಾಡ್ ವೆಳೆಯಾಡ್ ಅಂತಹ ಸುಂದರ ದೃಶ್ಯ ಕಾವ್ಯಗಳನ್ನ ರಚಿಸಿದ ಚಿತ್ರಗಾರ ಗೌತಮ್ ಮೆನನ್ ಅವರು ಪವರ್ ಸ್ಟಾರ್ ಅಂತಹ ಪರಿಪೂರ್ಣ ಕಲಾವಿದನಿಗೆ ಆಕ್ಷನ್- ಕಟ್ ಹೇಳ್ತಿದ್ದಾರೆ ಅಂದ್ರೆ ಖಂಡಿತ ಮತ್ತೊಂದು ಸುಂದರ ಚಿತ್ತಾರ ಹೊರಹೊಮ್ಮಲಿದೆ. ಪುನೀತ್ ಅಭಿಮಾನಗಿಳಿಗಷ್ಟೇ ಅಲ್ಲದೆ ಕನ್ನಡ ಸಿನಿ ಪ್ರಿಯರಿಗೂ ಕೂಡ ಇದು ಸಂತಸದ ವಿಷಯ..