ನಿರ್ದೇಶನ – ಆಕಾಶ್ ಶ್ರೀವತ್ಸ ತಾರಂಗಣ- ರಮೇಶ್ ಅರವಿಂದ್,ರಾಧಿಕಾ ನಾರಾಯಣ್,ಅವಿನಾಶ್ ಮತ್ತು ರಘು ರಾಮನಕೊಪ್ಪ
ಒಂದು ಸದಭಿರುಚಿಯ ಸಿನಿಮಾಗೆ ಇರಬೇಕಾದ ಎಲ್ಲ ವಿಷಯವು ಇದೇ “ಶಿವಾಜಿ ಸೋರಾತ್ಕಲ್”ನಲ್ಲಿ.ಮನ ಮುಟ್ಟುವ ಸೂಕ್ಷ್ಮ ವಿಷಯಗಳು, ರಮೇಶ್ ಸೇರಿದಂತೆ ಎಲ್ಲ ಸಹ ಕಲಾವಿದರ ಉನ್ನತ ಅಭಿನಯ, ಪ್ರತಿಭಾನ್ವಿತ ತಾಂತ್ರಿಕ ತಂಡ ಎಲ್ಲೇವು ಒಗ್ಗೂಡಿ ಒಂದು ಡಿಸೆಂಟ್ ಸಿನಿಮಾ ವೀಕ್ಷಿಸಿದ ಆತ್ಮ ತೃಪ್ತಿ ಚಿತ್ರಮಂದಿರದಿಂದ ಆಚೆ ಬಂದಾಗ ಉಳಿಯುವುದು. ಶರ ವೇಗದಲ್ಲಿ ಕಥೆ ಹೇಳಲು ಪ್ರಾರಂಭ ಮಾಡ್ತಾರ ನಿರ್ದೇಶಕರು ಆ ವೇಗ ಎಲ್ಲಿಯೂ ಕಡಿಮೆಯಾಗಿದೆ ಕಾಪಾಡಲು ರಮೇಶ್ ದೊಡ್ಡ ಪಾತ್ರವನ್ನೇ ವಹಿಸಿದ್ದಾರೆ..
ಮಡಿಕೇರಿ ಬಳಿಯ ರಣಗಿರಿಯಲ್ಲಿರುವ(ಕಾಲ್ಪನಿಕ ಸ್ಥಳ) ರೆಸಾರ್ಟ್ ಒಂದರಲ್ಲಿ ಹೋಂ ಮಿನಿಸ್ತರ ಮಗನು ಸಂಶಯಾಸ್ಪದವಾಗಿ ರಾತ್ರೋ- ರಾತ್ರಿ ಸಾವನ್ನಪ್ಪುತ್ತಾನೆ.ಇದು ಕೊಲೇನ ಅಥವಾ .. ಸಹಜ ಸಾವು?? ಅದನ್ನು ಪತ್ತೆಮಾಡಲು ಕ್ರೈಂ ಬ್ರಾಂಚ್ A.C.P “ಶಿವಾಜಿ ಸುರತ್ಕಲ್”(ರಮೇಶ್ ಅರವಿಂದ್) ಆ ರೆಸಾರ್ಟ್ಗೆ ಬರುತ್ತಾರೆ. ಸಂಶೋಧನೇ ತೀವ್ರವಾಗಿ ಸಾಗುತ್ತೆ,ರೆಸಾರ್ಟ್ನ ಮಾಲಿಕನಿಂದ ಹಿಡಿದು ಅಲ್ಲಿ ತಂಗಿದ್ದ ಎಲ್ಲ ಗೆಸ್ಟ್ ಗಳನ್ನ ವಿಚಾರಣೆ ಮಾಡುತ್ತ ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಾರೆ ಶಿವಾಜಿ.. ಪ್ರತಿ ಸುಳಿವು ಒಂದು ಕಥೆ ಹೇಳುತ್ತದೆ, ಎಲ್ಲವನ್ನೂ ಕೂಲಂಕಷವಾಗೀ ಗಮನಿಸುತ್ತಾರೆ .. ಇನ್ವೆಸ್ಟಿಗೇಷನ್ ಒಂದೆಡೆ ಭರದಿಂದ ಸಾಗುತ್ತಿದೆ ಇದರ ನಡುವೆ ಶಿವಾಜಿ ಖಾಸಗಿ ಜೀವನದ ಕಥೆ,ಅವರ್ ಶ್ರೀಮತಿ (ರಾಧಿಕಾ ಚೇತನ್) ಜೊತೆಯಲ್ಲಿ ಕಳೆದ ಆನಂದದ ಕ್ಷಣಗಳನ್ನು ಮೇಲುಕಿಸಿಕೊಳ್ಳುತ್ತಾರೆ, ಅದು ಚಿತ್ರಕ್ಕೆ ಮತ್ತಷ್ಟು ರಂಗನ್ನು ತುಂಬುತ್ತದೆ. ಕ್ಷಣ ಕ್ಷಣಕ್ಕೂ ಕುತೂುಹಲ ಹೆಚ್ಚುತ್ತೆ. ಯಾವುದೋಯಾವುದೋ ಒಂದು ಸುಳಿಯಲ್ಲಿ ಸಿಕ್ಕಿ ಗು ಶಿವಾಜಿ ಅದರಿಂದ ಹೇಗೆ ಹೊರಗೆ ಬರ್ತಾರೆ!! ಒಂದೇ ದಿನದಲ್ಲಿ ಕೇಸ್ನ ಮುಗುಸ್ತಾರೆ ಶಿವಾಜಿ !!!.. ಆ ನಿಗೂಢ ರಾತ್ರಿಯಂದು ಏನು ನಡೀತು? ಹಾಗಾದ್ರೆ ಕೊಲೆಗಾರ ಯಾರು?
ಹೋಂ ಮಿನಿಸ್ಟರ್ ಶಿವಾಜಿಗೆ ಎನ್ ಹೇಳ್ತಾರೆ?
ಎಲ್ಲದಕ್ಕೂ ಸಿನಮಾನ ನೋಡಿಯೇ ಉತ್ತರ ಪಡೆಯಬೇಕು…