ಕಿಚ್ಚಾ ಸುದೀಪ್ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ “ವಿಕ್ರಾಂತ ರೋಣ” ಆಗಸ್ಟ್ 19ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನ ಚಿತ್ರತಂಡ ಇಂದು ತಿಳಿಸಿದ್ದಾರೆ.
ಸಿನಿಮಾ 8 ಭಾಷೆಗಳಲ್ಲಿ ಬರಲಿದ್ದು, ಫ್ಯಾಂಟಸಿ ಸಸ್ಪೆನ್ಸ್ ಆಧಾರಿತವಾಗಿದೆ, ಮತ್ತೊಂದು ವಿಶೇಷವೆಂದರೆ ಈ ಸಿನಿಮಾ 3D ಯಲ್ಲಿ ಚಿತ್ರೀಕರಣಗೊಂಡಿದೆ. ಕಿಚ್ಚಾ ಸುದೀಪ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಲಿದ್ದಾರೆ, ಅತಿ ಶೀಘ್ರದಲೇ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಹೊರಬರಲಿದ್ದು, ಸಿನಿಮಾದ ಸ್ಪೆಷಲ್ ಹಾಡೊಂದರಲ್ಲಿ ಬಾಲಿವುಡ್ನ ಸ್ಟಾರ್ ನಟಿ ಜಾಕ್ಲಿನ್ ಫೆರ್ನಾಂಡಿಸ್ ಹೆಜ್ಜೆ ಹಾಕಿದ್ದಾರೆ.ಫಂಟಾಮ್ ಅನ್ನೋ ಶೀರ್ಷಿಕೆ “ವಿಕ್ರಾಂತ ರೋಣಾ” ಆಗಿ ಬದಲಾಯಿಸಲ್ಪಟ್ಟಿದೆ, ಕಿಚ್ಚಾ ಸುದೀಪ್ ಅಭಿಮಾನಿಗಳಿಗಷ್ಟೇ ಅಲ್ಲಾ ಒಟ್ಟು ಚಿತ್ರರಂಗಕ್ಕೆ ಖುಷಿ ಹಾಗೂ ದೊಡ್ಡ ಅಚ್ಚರಿ ಮೂಡಿಸುವಲ್ಲಿ ವಿಕ್ರಾಂತ ರೋಣ ತಯಾರಾಗಿದ್ದಾನೆ.