ಹಿಂದಿನ ಸಂಚಿಕೆಯಲ್ಲಿ “ಕನಾ೯ಟಕದ ಕೋಗಿಲೆ ” ಎಂದು ಹೆಸರುವಾಸಿಯಾದ ಗಾಯಕಿ “ಅನುರಾಧ ಭಟ್ ” ರವರ ಬಗ್ಗೆ ಬರೆದಿದ್ದೇ ಹಾಗೆ ಇಂದು ಅವರ ತಂಗಿ “ಅನುಪಮ ಭಟ್ ” ಕುರಿತು ಕೆಲ ವಿಚಾರಗಳು.
ಉದಯ ವಾಹಿನಿಯ ಜನಪ್ರಿಯ ಕಾಯ೯ಕ್ರಮ “ಕಾಮಿಡಿ ಟೈಂ “ ನಲ್ಲಿ ನಿರೂಪಕಿಯಾಗಿ ,ವಿ. ಜೆ ಯಾಗಿ ಮುದ್ದು ಮುದ್ದಾಗಿ ಗೊಂಬೆ ರೀತಿ ಇರುವ ಅನುಪಮ ಭಟ್ ರವರು ಮಾತನಾಡುವುದನ್ನು ನೋಡೋದೇ ಒಂದು ಥರಾ ಖುಷಿ ಆಗುತ್ತೆ.
ತಮ್ಮ ಮಾತಿನಿಂದ ಮನೆಮಾತಾಗಿ, ಹೆಸರುವಾಸಿ ಗಾಯಕಿ ಮತ್ತು ತಮ್ಮ ಅಕ್ಕ “ಅನುರಾಧ ಭಟ್ “ರವರ ಮುದ್ದಿನ ತಂಗಿಯಾಗಿ, “ಡಾನ್ಸಿಂಗ್ ಸ್ಟಾರ್ “ರನ್ನರ್ ಅಪ್ ಆಗಿ, ಬಿಗ್ ಬಾಸ್ ಖ್ಯಾತಿಯ ಟಾಪ್ 5 ಸ್ಪಧಿ೯ಯಾಗಿ ಜನರ ಮನಸ್ಸನ್ನು ಗೆದ್ದ ಅನುಪಮ ಭಟ್ .
ಉದಯ ಟಿವಿಯಲ್ಲಿ “ಕಿಚನ್ ತಾರೆ “ ಶೋ ನಡೆಸಿಕೊಡುತ್ತಿದ್ದರು,
ಜೀ ಕನ್ನಡ ವಾಹಿನಿಯ “ಲವಲವಿಕೆ” ಧಾರಾವಾಹಿಯಲ್ಲಿ ಚೆಂದದ ಹುಡುಗಿ ಸದಾ ನಗು ನಗುತಾ ತಂದೆಗೆ ತಕ್ಕ ಮಗಳಾಗಿ ಇರುವ ಪಾತ್ರ, ತಂದೆ ಬಿಟ್ಟರೆ ಬೇರೆ ಯಾರೂ ಇಲ್ಲ ಪ್ರಪಂಚದಲ್ಲಿ ಎಂದು ಬಿಂಬಿಸುವುದು, ತುಂಬು ಕುಟುಂಬವೆಂದರೆ ಇಷ್ಟವಾಗದು, ಒಬ್ಬ ಹುಡುಗನ ಜೊತೆ ಪ್ರೇಮ ಶುರುವಾಗಿ ಆ ಹುಡುಗನಿಗೂ ತುಂಬು ಕುಟುಂಬ ದಲ್ಲಿರುವುದು ಇಷ್ಪವಿರಲ್ಲ ಇಬ್ಬರ ಆಲೋಚನೆಗಳು ಸರಿಹೊಂದುವುದು, ಪ್ರೀತಿಸುವ ಪಾತ್ರದಲ್ಲಿ ನಟಿಸಿ ತಮ್ಮ ಛಾಪನ್ನು ಮೂಡಿಸಿ, 260 ಎಪಿಸೋಡ್ ಗಳು ಪ್ರಸಾರವಾಗಿ ಧಾರಾವಾಹಿ ಪ್ರಿಯರು ಇಷ್ಟ ಪಡುವ ಹಾಗೆ ಅಭಿನಯ ನೀಡಿರೋದು ಗಮನಾರ್ಹ.
“ಡಾನ್ಸ್ ಕನಾ೯ಟಕ ಡಾನ್ಸ್ ಫ್ಯಾಮಿಲಿ ವಾರ್” ನಲ್ಲೂ ಮಿಂಚಿ ಕುಣಿದು ಜನರ ಮನಸ್ಸಿಗೆ ಲಗ್ಗೆ ಹಾಕಿದರು.
ಇದಲ್ಲದೇ ಹಲವಾರು ಆಡಿಯೋ ಲಾಂಚ್ ಕಾಯ೯ಕ್ರಮಗಳಿಗೆ ಅತ್ಯುತ್ತಮ ನಿರೂಪಕಿಯಾಗಿ ಕೂಡ ನಡೆಸಿಕೊಟ್ಟಿದ್ದಾರೆ.
ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು ಸವ೯ಸ್ವ, ಇಬ್ಬರೂ ಅವರಿಗೆ ಎರಡು ಕಣ್ಣುಗಳು, ಇಂಥ ಹೆಣ್ಣು ಮಕ್ಕಳನ್ನು ಪಡೆಯಲು ಅವರು ಪುಣ್ಯ ಮಾಡಿರಬೇಕು. ಒಬ್ಬೊಬ್ಬರೂ ಒಂದೊಂದು ಕ್ಷೇತ್ರದಲ್ಲಿ ತಮ್ಮ ವಿಶಿಷ್ಟವಾದ ಛಾಪನ್ನು ಮೂಡಿಸಿ ಹೆಮ್ಮೆಯ ಮಕ್ಕಳು ಅನ್ನಿಸಿಕೊಂಡಿರುವರು.
ಅಕ್ಕ ಜನಪ್ರಿಯ ಗಾಯಕರು, ತಂಗಿ ನಿರೂಪಕಿ ಜೊತೆ ನಟಿ ಇವರ ಈ ಕಿರುತೆರೆಯ ಪಯಣ ಹೀಗೆ ಮುಂದುವರಿಯಲಿ