ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು ಕುಟುಂಬಸ್ಥರು ಸೇರಿದಂತೆ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ. ವೈಯುಕ್ತಿಕವಾಗಿ ಇವರ ಅತಿದೊಡ್ಡ ಅಭಿಮಾನಿಯಾಗಿರುವ ನನಗೆ ಈ ನಾಲ್ಕು ಸಾಲುಗಳನ್ನಷ್ಟೇ ಬರೆಯಲು ಆಗುತ್ತಿರುವುದು. ಇದರ ಮೇಲೆ ಬರೆಯುವ ಸಮಾಧಾನ ಮನಸ್ಸಿಗೆ ದೊರೆಯುತ್ತಿಲ್ಲ. ಗೂಗಲ್ ನಲ್ಲಿ puneeth rajkumar ಎಂದು ಹುಡುಕಿದರೆ ಸಿಗುವ ನೂರಕ್ಕೆ ನೂರು ಫೋಟೊಗಳು ಅವರ ನಗುಮುಖದ ಫೋಟೊಗಳೇ ಎಂದರೆ ಆ ವ್ಯಕ್ತಿತ್ವದ ದರ್ಶನವಾಗುತ್ತದೆ.
ಹೋಗಿ ಬನ್ನಿ ಬಾಸ್. ಮತ್ತೆ ಈ ಕನ್ನಡದ ನೆಲದಲ್ಲಿ ನೀವು ಹುಟ್ಟೇ ಹುಟ್ತೀರ. ನಮ್ಮನ್ನು ಬಿಟ್ಟು ನೀವು ತುಂಬಾ ದಿನ ಇರಲ್ಲ. ಮತ್ತೆ ಈ ಮಣ್ಣಿನಲ್ಲಿ ಹುಟ್ಟೇ ಹುಟ್ತೀರ. ಬೇಗ ಬನ್ನಿ. ಕೋಟ್ಯಂತರ ಜನ ನಿಮಗಾಗಿ ಕಾಯ್ತಾ ಇರ್ತೀವಿ. ಲವ್ ಯು ಫಾರೆವರ್ ಅಪ್ಪು ಬಾಸ್. ಯವಾಗ್ಲೂ ನಗ್ತಾ ನಗ್ತಾ ಇದ್ದ ಆ ನಗುಮುಖವೇ ನಮ್ಮ ಕಣ್ಣ ಮುಂದಿರಲಿ.
ಲವ್ ಯು ಅಪ್ಪು