R.J ಮತ್ತು ನಟ ವಿನಾಯಕ್ ಜೋಶಿ ತಮ್ಮ ಗೆಳತಿ “ವರ್ಷ ಬೆಳವಾಡಿ”ಯನ್ನ ಬಾಳ ಸಂಗಾತಿಯನ್ನಾಗಿಮಾಡುಕೊಳ್ಳಲ್ಲಿದ್ದಾರೆ. ವರ್ಷ ಓರ್ವ ಕ್ರೀಡಾ ಪಟು, ರಾಷ್ಟ್ರ ಮಟ್ಟದ ಬಾದ್ಮಿಟ್ಟನ್ಆಟಗಾರ್ತಿ. ಬಾಲ್ಯದಿಂದಲೇ ಪ್ರಚಯವಿದ್ದರು, ಕಳೆದ 5-6 ವರ್ಷಗಳಿಂದ ಇಬ್ಬರ ನಡುವೆ ಒಡನಾಟ ಹೆಚ್ಚಾಗಿ, ಪ್ರೀತಿ ಮೂಡಿ ಮಾದುವೆಯಾಗಲು ಪರಸ್ಪರ ತೀರ್ಮಾನಿಸಿದ್ದಾರೆ.

ನಮ್ಮೊರ ಮಂದಾರ ಹೂವೆ, ಲಾಲಿ ಸಿನಮಗಳಲ್ಲಿ ಬಾಲನಟನಾಗಿ ನಟಿಸಿ ಚಿತ್ರರಂಗಕ್ಕೆ ಪ್ರವೇಶಿಸಿದರು, ನಂತರ ದಿನಗಳಲ್ಲಿ ಅಪ್ಪು, ಕಿಚ್ಚ, ಜಾಗ್ವಾರ, ನಿನ್ನಿಂದಲೇಯಲ್ಲಿ ಹೀರೋಗಳ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡರು ನಟನೆಯ ಜೊತೆಗೆ ರೇಡಿಯೋ ಜಾಕಿಯಾಗಿ 10 ವರ್ಷಗಳ ಕಾಲ “ರೇಡಿಯೋ ಸಿಟಿಯಲ್ಲಿ” ಕೆಲಸ ಮಾಡಿದರು, ಬಿಗ್ಬಾಸ್ಸೀಸನ್ 1 ಸ್ಪರ್ದಿಯಾಗಿ ಭಾಗವಹಿಸಿದ್ದರು. ಫಿಟ್ನೆಸ್ಗುರುವಿನಾಯಕ್ ಜೋಶಿ 120 kg ತೂಕ ಇದ್ದವರು 75 kg ಗೆ ಇಳಿಸಿಕೊಂಡಿದ್ದರು.
ಸಧ್ಯಕ್ಕೆ ಮದುವೆ ತಾರೀಕು ಇನ್ನು ನಿಶ್ಚಯಿಸಿಲ್ಲ, ಮುಂದಿನ ದಿನಗಳಲ್ಲಿ ಎಲ್ಲವನ್ನ ತಿಳಿಸುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.