ಶಿವರಾಜಕುಮಾರ್ ರವರು ಬೈರಾಗಿಯ ನಂತರ ಒಂದು ವಿಭಿನ್ನ ಚಿತ್ರಕಥೆ ಒಳಗೊಂಡಿರುವ ‘ಸತ್ಯಮಂಗಳ’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. 125 ಸಿನಿಮಾಗಳಿಗಿಂತ ಸ್ವಲ್ಪ ವಿಭಿನ್ನವಾಗಿರುತ್ತದೆ ಎಂದು ನಿರ್ದೇಶಕ ಲೋಹೀತ್ ರವರು ಹೇಳಿದ್ದಾರೆ. ಈ ಚಿತ್ರಕ್ಕಾಗಿ ವಿಭಿನ್ನ ವಾಗಿ ಸ್ಕ್ರಿಪ್ಟ್ ಬರೆದಿದ್ದರೆ. ಶಿವಣ್ಣನ ಚಿತ್ರ ಮಾಡಬೇಕೆಂದು ನನ್ನ ಕನಸಾಗಿತ್ತು ಅದು ಈಗ ನೆರವೇರುತ್ತಿದೆ.
ಎಷ್ಟೋ ನಿರ್ದೇಶಕರು ಶಿವಣ್ಣನ ಚಿತ್ರ ಮಾಡಬೇಕೆಂದು ಕಾದು ಕುಳಿತಿರುತ್ತಾರೆ, ನನಗೆ ಬಹು ಬೇಗ ಆ ಭಾಗ್ಯ ಒದಗಿ ಬಂದಿದೆ ಎಂದು ಹೇಳಿದರು. ಈ ಮೊದಲು ಲೋಹೀತ್ ರವರು ಮಮ್ಮಿ ಎಂಬ ಚಿತ್ರವನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಂತರ ಸತ್ಯಮಂಗಲ ಚಿತ್ರದ ಶೂಟಿಂಗ್ ಆರಂಭವಾಗುತ್ತದೆ. ಈ ಚಿತ್ರದ ಸ್ಕ್ರಿಪ್ಟ್ ಸಂಪೂರ್ಣವಾಗಿದೆ. ಕೇವಲ ಚಿತ್ರದ ಚಿತ್ರೀಕರಣ ಪ್ರಾರಂಭವಾಗಬೇಗಿದೆ.
ಬೈರಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಕೃಷ್ಣ ಸಾರ್ಥಕ್ ರವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಲೈ ಮಹದೇಶ್ವರ ಕಾಡಿನ ಸುತ್ತ ಮುತ್ತ ಚಿತ್ರೀಕರಣ ನಡೆಯುತ್ತದೆ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ. ಆದಷ್ಟು ಬೇಗ ಶಿವಣ್ಣನವರು ವಿಭಿನ್ನ ಪಾತ್ರದ ಮೂಲಕ ಸಿನಿರಸಿಕರನ್ನ ರಂಜಿಸಲಿ.