ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು

ಯೋಗಿ ನೀನಾಗಿ ಹೋಗಣ್ಣ ಬೇಗನೆ ಬಾರಣ್ಣಾ ಯೋಗಿ ನೀನಾಗಿ ಹೋಗಣ್ಣ

ಯಾವಾಗಲೂ ಯಂಗ್ ಆಂಡ್ ಎನೆಜಿ೯ಟಿಕ್ ಆಗಿ ಕಾಣಿಸಲು ಈಗ ಜಿಮ್ ವಕೌ೯ಟ್ ಮಾಡೋದು ಸಾಮಾನ್ಯ ಆದರೆ ಮೊದಲಿಂದಲೂ ದೇಹದ ತೂಕ ಏರುಪಾರಾಗದೆ ಒಂದೇ ಪ್ರಮಾಣದಲ್ಲಿ ನೋಡಿಕೊಳ್ಳೋಕೆ ಇರೋ ಸಾಧನ ಅಂದ್ರೆ ಅದು ಯೋಗ, ಎಲ್ಲರಿಗೂ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು 🌹🦋💙.

ಕೆಲ ನಟ ನಟಿಯರು ಕೆಲವು ಚಿತ್ರಗಳಲ್ಲಿ ಅಭಿನಯಿಸಿದ ದಪ್ಪಗಾಗೋದು ಸಾಮಾನ್ಯ ನಂತರ ಸಣ್ಣಗಾಗಬೇಕಂತ ಆ ಸಜ೯ರಿ, ಆಪರೇಷನ್ ಅಂತ ಎಲ್ಲಾ ಮಾಡಿಸಿ ದುಡ್ಡು ಕಳೆದುಕೊಳ್ತಾರೆ ಹೊರತು ತಾವು ಅಂದುಕೊಂಡತೆ ಆಗದಾಗ ಕೊರಗುತ್ತಾರೆ, ಆ ರೀತಿ ಖಚು೯ ಮಾಡದೆ ದಿನನಿತ್ಯ ವ್ಯಾಯಾಮ ಯೋಗ ಮಾಡುತ್ತ ತಮ್ಮ ವಯಸ್ಸಿಗೆ ತಕ್ಕ ಹಾಗೆ ಸೌಂದರ್ಯ ಮತ್ತು ದೇಹ ಕಾಪಾಡೋದು ಒಂದು ಕಲೆ.

ಕನ್ನಡ ಚಿತ್ರರಂಗದಲ್ಲಿ ಕರುನಾಡು ಇರೋವರೆಗೂ ಒಂದು ಹೆಸರು ಇರೋದು ನಿಮಗೆಲ್ಲ ಗೊತ್ತಿರುತ್ತೆ ಅವರೆ ಕರುನಾಡ ಕಣ್ಮಣಿ, ಕಲಾ ತಪಸ್ವಿ, ಕನ್ನಡ ಕಂಠೀರವ ಮರೆಯಲಾಗದ ಮಾಣಿಕ್ಯ ಡಾ ರಾಜ್ ಕುಮಾರ್ ರವರು.

ನಟರಾಗಿ ಚಿತ್ರಗಳಲ್ಲಿ ಅಭಿನಯಿಸಿ ಮನೆಮಾತಾದ ಇವರು ಸದಾ ಹುರುಪಿನಿಂದ ಚಿರಯುವಕರಂತೆ ಕಾಣಲು ಪ್ರಮುಖ ಪಾತ್ರ “ಯೋಗ“. 40 ವಷ೯ವಾದ ನಂತರ ಎಲ್ಲರಿಗೂ ಕಾಡುವ ಸಮಸ್ಯೆ ಮಂಡಿ ನೋವು ಇದನ್ನು ಕಡಿಮೆ ಮಾಡಲು ಸಲಹೆ ನೀಡಿದ್ದು ಯೋಗ .

ಕಾಮನಬಿಲ್ಲು” ಚಿತ್ರದ ಅಣ್ಣಾವ್ರ ಪರಿಚಯ ದೃಶ್ಯಗಳನ್ನು ಗಮನಿಸಿ ನಿಮಗೇ ತಿಳಿಯುತ್ತದೆ ಅವರು ಎಷ್ಟು ಶ್ರಧ್ಧೆ ವಹಿಸಿ ವಿವಿಧ ರೀತಿಯ ಯೋಗಾಸನಗಳನ್ನು ಮಾಡಿರೋದು, ಈ ಚಿತ್ರದ ನಿದೇ೯ಶಕರಾದ “ದತ್ತರಾಜ್” ರವರು ಹೇಳೋದು ಅಣ್ಣಾವೃ ಯೋಗ ಮಾಡುವ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ, ಸಾಮಾನ್ಯ ವೇಳೆಯಲ್ಲ ಕೊರೆಯುವ ಛಳಿಯಲ್ಲಿ ಅದೂ ದೇಹದಲ್ಲಿ ಒಂದು ಬಟ್ಟೆ ಬಿಟ್ಟು ಬೇರೆನಿರದೆ ಯೋಗದಲ್ಲಿ ನಿರತರಾಗಿರೋದು, ವಿವಿಧ ಆಸನಗಳು ನೋಡಲು ನಮಗೆ ಆಶ್ಚರ್ಯ ಅವರೊಬ್ಬ ಯೋಗ ರಾಜ ಅಂತ ಹೇಳಿರೋದು.

1960 ರಲ್ಲಿ ಒಬ್ಬರು ವ್ಯಕ್ತಿ ಅಣ್ಣಾವ್ರನ್ನ ಭೇಟಿ ಮಾಡಿ ಅವರ ದೇಹ ಮುಟ್ಟಿದಾಗ ಅವರಿಗನ್ನಿಸಿದ್ದು ಇವರು ಯೋಗರಾಜ, ನಟರಾಗಿ ಮಾತ್ರವಲ್ಲದೆ ತಮ್ಮ ದೇಹವನ್ನು ಇಷ್ಟು ಗಟ್ಟಿಮುಟ್ಟಾಗಿ ಇಟ್ಟುಕೊಂಡಿದ್ದಾರೆ ಅನ್ನೋಕೆ ನಿಜಕ್ಕೂ ಯೋಗ ಮತ್ತು ಏಕಾಗ್ರತೆ ಇರೋದರಿಂದ ಸಾಧ್ಯವೆಂದು.

ನಂತರ 20 ವಷ೯ಗಳ ನಂತರ ಅವರನ್ನು ಭೇಟಿ ಮಾಡಲು ಮನೆಗೆ ಹೋದಾಗ ಅಣ್ಣಾವ್ರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಚಿತ್ರೀಕರಣಕ್ಕೆ ಹೋಗಿದ್ದಾರೆ ಅಂತ ಪಾವ೯ತಮ್ಮ ರವರು ಹೇಳಿದ ಮೇಲೆ ಆ ಗುರುಜಿ ಕೇವಲ ನಾನು ಅವರ ಅಭಿಮಾನಿಯಲ್ಲ ಅವರ ಒಳಿತನ್ನು ಬಯಸುವವನು ಹುಬ್ಬಳ್ಳಿ ಸಿಧ್ಧಾರೂಢ ಮಠ ದಿಂದ ಬಂದಿರುವೆ ಯೋಗದ ವಿಚಾರವಾಗಿ ಅವರಿಗೆ ತಿಳಿಸುವ ಸಲುವಾಗಿ ಎಂದು ಹೇಳಿ ಈ ವಿಷಯ ಅಣ್ಣಾವ್ರಿಗೆ ತಲುಪಿ ಕೊನೆಗೆ ಅವರು ಅಣ್ಣಾವ್ರನ್ನ ಭೇಟಿ ಮಾಡಿದರು.

ಇವರ ಹೆಸರು “ಹೊನ್ನಪ್ಪ ಫಕೀರಪ್ಪ ನಾಯ್ಕರ್ ” ಇವರನ್ನು ಅಣ್ಣಾವೃ ಯೋಗ ಗುರು ಎಂದು ಒಪ್ಪಿಕೊಳ್ಳೋಕೆ ಕಾರಣ ಅವರಿಗಿದ್ದ ಯೋಗದ ಬಗ್ಗೆ ಅವರಿಗಿದ್ದ ಕಾಳಜಿ.
ಅಣ್ಣಾವೂ ಅವರ ಜೊತೆ ಯೋಗ ಮಾಡಲು ಒಪ್ಪಿಕೊಂಡರು ನಂತರ ಯೋಗ ಶುರು ಮಾಡ್ತಿದ್ದು ಬೆಳಗಿನ ಜಾವ 2 ಘಂಟೆಗೆ ಮತ್ತು ಮುಗಿಸುತ್ತಿದ್ದು 8 ಘಂಟೆಗೆ ಸರಿ ಸುಮಾರು 6 ಘಂಟೆ ನಿರಂತರ ಅಭ್ಯಾಸ ಮಾಡುತ್ತಿದ್ದರು ಆದರೂ ಅವರಿಗೆ ಸಮಾಧಾನವಾಗದೆ ಯೋಗದ ಎಲ್ಲಾ ಪ್ರಕಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಗಮನಿಸಿ ಹೊನ್ನಪ್ಪ ರವರು ಎಲ್ಲಾ ರೀತಿಯ ಆಸನಗಳನ್ನು ಹೇಳಿಕೊಡುತ್ತಾರೆ.

ವ್ಯಾಯಾಮ ಬಿಟ್ಟು ನಿತ್ಯ ಯೋಗ ಮಾಡೋದನ್ನು ನಿಲ್ಲಿಸಲಿಲ್ಲ.ಇದರಿಂದ ಕೇವಲ ದೇಹ ಗಟ್ಟಿಯಾಗುವುದಲ್ಲದೆ ಮಾನಸಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಮಾಡುವ ಮೂಲಕ ಮನಸ್ಸನ್ನು ನಿಗ್ರಹ ಮಾಡುವ ಗುರಿಯಾಯಿತು.

ನಾನು ಅವರಿಂದ ಕಲಿತದು ಬಹಳಷ್ಟಿದೆ 28 ವಷ೯ ಯೋಗ ಹೇಳಿಕೊಟ್ಟ ಗುರು ಎಂದು ಭಾವಿಸುವುದು ಅವರ ದೊಡ್ಡ ಗುಣ.

ಅಣ್ಣಾವ್ರ ಜೊತೆ ಪಾವ೯ತಮ್ಮ ರವರು ಕೂಡ ಯೋಗ ಮಾಡುತ್ತಿದ್ದರು, ನಿಮಗೆಲ್ಲ ತಿಳಿದಿರಲಿ ಅಣ್ಣಾವ್ರನ್ನ ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ಕೂಡ ಯೋಗ ಬಿಡದೇ ಪ್ರತಿದಿನವೂ ಮಾಡುತ್ತಿದ್ದರು. ಇದೇ ಅಭ್ಯಾಸವನ್ನು ಅವರ ಮಕ್ಕಳಾದ “ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ “ರವರು ಮಾಡುತ್ತಿದ್ದಾರೆ.

ಯೋಗ ಮಾಡುವುದರಿಂದ ಕೆಟ್ಟ ಕೆಟ್ಟ ಆಲೋಚನೆಗಳು ದೂರವಾಗಿ ಮನಸ್ಸು ನಮ್ಮ ಹತೋಟಿಗೆ ಬಂದು ನಾವು ಹೇಳಿದಂತೆ ಕೇಳಲು ಸಾಧ್ಯವಾಗುವುದು.

ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ, ಇಂದಿನ ಈ ಸಣ್ಣ ಲೇಖನ ಬರೆಯಲು ಅನುವು ಮಾಡಿಕೊಟ್ಟ ನಮ್ಮ ಮಿತ್ರರಾದ ಚಿತ್ರೋದ್ಯಮ.ಕಾಂ ರವರಿಗೆ ಧನ್ಯವಾದಗಳು.

ಮತ್ತೆ ಇನ್ನೊಂದು ಲೇಖನದಲ್ಲಿ ನಿಮ್ಮನ್ನು ಭೇಟಿ ಮಾಡುವ..

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

One thought on “ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು

  1. ಆತ್ಮೀಯ ಅಕ್ಕರೆಯ ಸಹೋದರru ರಾಜ್ ವಂಶ ಅಪ್ಪಾಜಿ ದೇವರು ಅಭಿಮಾನಿ ದೇವರು ಶ್ರೀನಿವಾಸ್ ಅವರಿಗೆ ಧನ್ಯವಾದಗಳು ನಮಸ್ಕಾರ ಇಂದು ವಿಶ್ವ ಯೋಗ ದಿನದ ವಿಶೇಷ ಸಂಚಿಕೆ ಮಾಹಿತಿ ಲೇಖನ ಅತ್ಯುತ್ತಮ ಅದ್ಭುತ ಅಮೂಲ್ಯ ಬರಹ ಸರ್ ಯೋಗ ರತ್ನ ಕಲಾ ಕೌಸ್ತುಭ ಯೋಗ ಸರ್ವ ಭೌಮ ಅಪ್ಪಾಜಿ ದೇವರು ಗುರುಗಳು ಸಿದ್ದ ರೂಢ ಮಠ ಭಕ್ತ ಮಹಾಶಯರು ನಾಯಕರ್ ಗುರುಗಳು ಅವರ ಮಾರ್ಗದರ್ಶನ ದಾರಿದೀಪ ದಂತೆ ಅಪ್ಪಾಜಿ ದೇವರು ಯೋಗ ತರಬೇತಿ ಪ್ರಾರಂಭ ಮಾಡಿ ಕೊನೆಗೆ ಅವರ ಸಿನಿಮಾ ಕಾಮನಬಿಲ್ಲು ಸಿನಿಮಾ ಮೂಲಕ ಜಗತ್ ಪ್ರಸಿದ್ದಿ ಹೊಂದಿದರು ಅಂತೆ ಕೊನೆಗೆ ಯೋಗ ಸಿದ್ದಿ ಇಚ್ಚಾ ಮರಣ ಹೊಂದಿ ಪವಾಡ ಸೃಷ್ಟಿಸುತ್ತಿರುವ ಅಪ್ಪಾಜಿ ದೇವರು ಅವರ ಯೋಗ ಭಂಗಿ ಫೋಟೋ ಲೇಖನ ಅದ್ಭುತ ಸರ್ ಇಂತಹ ಅದ್ಭುತ ಯೋಗ ದಿನದ ಹೆಮ್ಮೆಯ ಉಡುಗೊರೆ ಕೊಟ್ಟ ನಿಮಗೆ ವಿಶ್ವ ಡಾಕ್ಟರ್ ರಾಜಕುಮಾರ್ ಅಭಿಮಾನಿ ದೇವರು ಕಡೆಯಿಂದ ಧನ್ಯವಾದಗಳು ನಮಸ್ಕಾರ ತಮ್ಮ ಬರಹ ಶಕ್ತಿ ಅಪ್ಪಾಜಿ ದೇವರು ಸದಾ ನಿಮಗೆ ಅಪ್ಪಾಜಿ ದೇವರು ಆಶೀರ್ವಾದ ಅನುಗ್ರಹ ಶ್ರೀರಕ್ಷೆ ಇರಲಿ ಸರ್ ಜೈಭೀಮ್ ಜೈ ರಾಜಣ್ಣ

Leave a Reply