ವಿಶ್ವ ಸಂಗೀತ ದಿನ

ಖುಷಿಯಾಗಲಿ, ದುಖವಾಗಲಿ ನಮ್ಮ ಜೊತೆ ಇರುವುದು ಸಂಗೀತ ಮಾತ್ರ, ಎಲ್ಲಾ ಸಂಗೀತ ಪ್ರೇಮಿಗಳಿಗೆ ವಿಶ್ವ ಸಂಗೀತ ದಿನದ ಶುಭಾಶಯಗಳು.

ಸಂಗೀತ ನಮ್ಮ ಬುದ್ಧಿಗೆ ಔಷಧಿ ಇದ್ದ ಹಾಗೆ.
ಸೋತ ಹೃದಯಕೆ ಸಮಾಧಾನ, ನೊಂದ ಮನಕೆ lyrics ಸಾಂತ್ವನ.
ಸಂಗೀತವನ್ನು ದೇವರ ಭಾಷೆ ಎಂದು ಕರೆಯುತ್ತಾರೆ, ಎಲ್ಲಾ ವಯೋಮಾನದವರನ್ನು ಬಂಧಿಸುವ ಶಕ್ತಿ ಸಂಗೀತಕ್ಕಿದೆ.
ಮನಸ್ಸು ಬೇಜಾರಲ್ಲಿದ್ದಾಗ ಹಿತ ನೀಡೋದು ಸಂಗೀತ.
ಸಂಗೀತಕ್ಕೆ ಭಾಷೆಯೇ ಇಲ್ಲ, ಎಲ್ಲಾ ಹೃದಯವನ್ನು ತಲುಪುವ ಏಕೈಕ ಭಾಷೆಯೇ.. ಸಂಗೀತ.
ಗಾಳಿಯಲ್ಲಿ ಸಂಗೀತವಿದೆ, ಸಂಗೀತ ಎಲ್ಲೆಡೆಯೂ ಇದೆ, ನಿಮಗೆ ಎಷ್ಟು ಬೇಕೋ ಅಷ್ಟು ತೆಗೆದುಕೊಂಡರೆ ಸಾಕು.
ಕೆಲವೊಮ್ಮೆ ಸಂಗೀತ ನಮ್ಮ ಹೃದಯಕ್ಕೂ ಹಾಗೂ ನಮ್ಮ ಆತ್ಮಕ್ಕೂ ಮೆಡಿಷನ್ ಕೂಡ.
ಮನಸ್ಸಿನ ನೋವುಗಳಿಗೆ ಸಂಗೀತವೇ ಮದ್ದು.
ಸಂಗೀತ ನಮ್ಮ ಬದುಕಿನ ಭಾಗ, ಶೃತಿ ಲಯಗಳ ಅರಿವಿಲ್ಲದವನೂ ಸಂಗೀತದ ರಾಗ ತಾಳ ಮಾಧುಯ೯ವನ್ನು ಅನುಭವಿಸಬಲ್ಲ. ಅಂತಹ ಅದ್ಭುತ ಮಾಂತ್ರಿಕ ಶಕ್ತಿ ಸಂಗೀತದ್ದು
.

ಈ ಸಂದರ್ಭದಲ್ಲಿ ಎಷ್ಟೋ ಸಹಸ್ರ ಗಾಯಕರು ನಮ್ಮನ್ನು ರಂಜಿಸಿದ್ದಾರೆ, ಕೆಲವರನ್ನು ಹೆಸರಿಸೊದಾದರೆ.. ಡಾ ರಾಜ್ ಕುಮಾರ್, ಎಸ್ ಪಿ ಬಾಲಸುಬ್ರಹ್ಮಣ್ಯಂ, ಪಿ ಬಿ ಶ್ರೀನಿವಾಸ್, ಘಂಟಸಾಲ, ಎಸ್ ಜಾನಕಿ , ವಾಣಿ ಜಯರಾಂ, ಪಿ ಸುಶೀಲ, ಲತ ಮಂಗೇಶ್ಕರ್, ಆಶಾ ಭೋಸ್ಲೆ, ಮಹಮ್ಮದ್ ರಫಿ, ಕಿಶೋರ್ ಕುಮಾರ್, ಎಲ್ ಆರ್ ಈಶ್ವರಿ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮಂಜುಳ ಗುರುರಾಜ್, ಬಿ ಆರ್ ಛಾಯ, ಬೆಂಗಳೂರು ಲತ, ವಿಜಯ್ ಪ್ರಕಾಶ್‌, ಅನುರಾಧ ಭಟ್, ನಂದಿತ, ರಾಜೇಶ್ ಕೃಷ್ಣನ್, ಕಸ್ತೂರಿ ಶಂಕರ್, ಹೇಮಂತ್ ಕುಮಾರ್, ಚೇತನ್ ಸೋಸ್ಕ, ಎಂ ಡಿ ಪಲ್ಲವಿ, ಕೆ ಎಸ್ ಚಿತ್ರ, ಡಾ ಶಮಿತ ಮಲ್ನಾಡ್, ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್, ಕುಮಾರ್ ಸಾನು, ಅಭಿಜಿತ್, ಸಾಧನ ಸಗ೯ಂ, ಅನುರಾಧ ಪೌಡ್ವಾಲ್ , ಶಂಕರ್ ಮಹಾದೇವನ್, ಅಚ೯ನ ಉಡುಪ, ಸಿ ಅಶ್ವಥ್‌, ಬಿ ಜಯಶ್ರೀ …

ಗಾಯಕರಿಗೆ ಮಾತ್ರವಲ್ಲದೆ ಸಂಗೀತ ನಿರ್ದೇಶಕರಿಗೆ ಈ ದಿನ ಗೌರವ ಸಲ್ಲಿಸಬೇಕು… ಜಿ ಕೆ ವೆಂಕಟೇಶ್, ಉಪೇಂದ್ರ ಕುಮಾರ್, ವಿಜಯ ಭಾಸ್ಕರ್, ರಾಜನ್ ನಾಗೇಂದ್ರ, ಎಂ ಎಸ್ ವಿಶ್ವನಾಥನ್, ಎಂ ರಂಗರಾವ್, ಟಿ ಜಿ ಲಿಂಗಪ್ಪ, ಇಳಯರಾಜ, ನಾದಬ್ರಹ್ಮ ಹಂಸಲೇಖ, ವಿ ಮನೋಹರ್, ಸಾಧು ಕೋಕಿಲ, ಕಲ್ಯಾಣ್ ಜಿ ಆನಂದ್ ಜಿ, ಲಕ್ಷ್ಮಿಕಾಂತ್ ಪ್ಯಾರೆಲಾಲ್, ಆರ್ ಡಿ ಬಮ೯ನ್, ಎಸ್ ಡಿ ಬಮ೯ನ್, ನೌಷಾದ್, ಒ ಪಿ ನಯ್ಯರ್, ಸಲೀಲ್ ಚೌದರಿ, ಶಂಕರ್ ಮಹಾದೇವನ್, ನದೀಂ ಶ್ರವಣ್, ಜತಿನ್ ಲಲಿತ್, ದೇವ, ಎಸ್ ಎ ರಾಜ್ ಕುಮಾರ್, ಎ ಆರ್ ರೆಹಮಾನ್, ಹ್ಯಾರಿಸ್ ಜಯರಾಜ್, ರಾಮ್ ಲಕ್ಷ್ಮಣ್, ರಾಜೇಶ್ ರಾಮನಾಥ್, ವಿ ಹರಿಕೃಷ್ಣ, ಗುರುಕಿರಣ್, ಅಜು೯ನ್ ಜನ್ಯ, ಅಜನೀಶ್ ಲೋಕನಾಥ್, ಶಂಕರ್ ಜೈಕಿಷನ್, ಶಂಕರ್ ಗಣೇಶ್, ಕೆ ಕಲ್ಯಾಣ್, ಆರ್ ಪಿ ಪಟ್ನಾಯಕ್, ಅನೂಪ್ ಸಿಳೀನ್, ಸಂದೀಪ್ ಚೌಟ, ಉತ್ತಂ ಸಿಂಗ್ , ಬಪ್ಪಿ ಲಹರಿ, ಅನು ಮಲ್ಲಿಕ್, ವಿಶಾಲ್ ಶೇಖರ್, ಹಿಮೇಷ್ ರೇಷಮಯ್ಯ , ಎಂ ಎಂ ಕೀರವಾಣಿ, ದೇವಿಶ್ರೀ ಪ್ರಸಾದ್, ಮಣಿ ಶಮ೯, ದೀನಾ, ಇಂದ್ರ …

ನಿಮಗೆ ಯಾರಾದರೂ ಇಲ್ಲಿ ಬಿಟ್ಟಿದ್ದರೆ ನೀವೂ ಹೆಸರಿಸಿ, ಸಾಧಕರಿಗೆ ಗೌರವ ಸಲ್ಲಿಸೋಣ..

We salute all the directors and singers on this auspicious day, keep entertaining us ..

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply