ವಿಷ್ಣು -ವಿಶ್ವೇಶ್ವರಯ್ಯ

ಭಾರತ ರತ್ನ- ಕನ್ನಡಿಗರ ಹೆಮ್ಮೆ SIR. M. ವಿಶ್ವೇಶ್ವರಯ್ಯನವರ ಸಾಧನೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನೀಡಿರುವ ಕೊಡುಗೆಗಳುಅಗಾಧವಾಗಿದೆ. ಅವರ ಹೆಸರಿನಲ್ಲಿ ಪ್ರತಿ ವರ್ಷವು,ಕರ್ನಾಟಕ ರಾಜ್ಯ ಸರ್ಕಾರ ನಾನಾ ಸಾಧಕರಿಗೆ ಪ್ರಶಸ್ತಿಯನ್ನ ನೀಡಿ ಗೌರವಾರ್ಪಣೆ ಮಾಡಲಾಗುವುದು .

1992 ಇಸವಿಯಲ್ಲಿ “ವಿಷ್ಣುವರ್ಧನ್” ಅವ್ರಿಗೆ ಈ ಪ್ರಶಸ್ತಿ ದೊರೆಯಿತು. ಅವಾರ್ಡ್ ಪಡೆದ ಬಳಿಕೆವಿಷ್ಣುವರ್ಧನ ಅವರು ಕೃತಜ್ಞ ಭಾವದಿಂದ ಭಾಷಣ ಮಾಡಿ,ತಮಗೆ ದೊರೆತ ಅತಿ ದೊಡ್ಡ ಗೌರವವಿದು ಎಂದು ನುಡಿಯುತ್ತsir.M.V. ಅವರನ್ನ ಸ್ಮರಿಸಿಕೊಂಡ್ರು.

ಕೆಲವು ದಿನಗಳು ಕಳೆದಂತೆ ನಿರ್ದೇಶಕರೋರ್ವರು “ವಿಷ್ಣುವರ್ಧನ್” ಅವರನ್ನು ಭೇಟಿ ಮಾಡಿ   sir M. ವಿಶ್ವೇಶ್ವರಯ್ಯನವರ  ಆತ್ಮ ಚರಿತ್ರೆ ಸಿನಿಮಾ ರೂಪದಲ್ಲಿ ಪ್ರಸ್ತುತ ಪಡಿಸುವ ಹೆಬ್ಬಯಕೆ ತಮಗಿದ್ದುಅದ್ರಲ್ಲಿ, ಸರ್.M.V. ಯಾಗಿ ವಿಷ್ಣುವರ್ಧನ ನಟಿಸಬೇಕೆಂದು ಕೇಳಿಕೊಂಡ್ರು.

ಅದಕ್ಕೆ ತಮ್ಮ ಅಭಿಪ್ರಾಯವನ್ನ ವಿಷ್ಣು ಹೀಗೆ ಹೇಳಿದ್ರಂತೆ

ವಿಶ್ವೇಶ್ವರಯ್ಯನವರ ಕೀರ್ತಿ ಹಾಗೂ ಸಾಧನೆಗಳ ಪರಾಕಾಷ್ಠೆಯನ್ನ ಹೊತ್ತು, ನಂತರ ಅವರಾಗಿ ನಟಿಸೋದು ಬಹಳ ದೊಡ್ಡ ಜವಾಬ್ದಾರಿ, ಅವರು ನಡೆದು ಬಂದ ಹಾದಿ, ಬಿಟ್ಟು ಹೋದ ಹೆಜ್ಜೆ ಗುರುತು ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶಿ. ಆ ಹೆಜ್ಜೆ ಗುರುತುಗಳಿಗೆ ನಾನು ಕೈ ಜೋಡಿಸಿ ನಮನಗಳನ್ನಅರ್ಪಿಸಬಹುದೆ ಹೊರತಾಗಿ, ಆ ಹೆಜ್ಜೆ ಮೇಲೆ ನಿಲ್ಲೋ ಪ್ರಯತ್ನ ಮಾಡಬಾರದು ಎಂದು ಹೇಳಿದರು..

  • ಗಣಿತದಮಾಂತ್ರಿಕರಾದಶಕುಂತಲಾ ದೇವಿ,  ಶ್ರೀನಿವಾಸ್ ರಾಮನುಜಮ ಅವರ ಜೀವನದ ಪಯಣವನ್ನ ಇತ್ತೀಚಿನ ದಿನಗಳಲ್ಲಿ ಸಿನಿಮಾ ಮೂಲಕ ಮತ್ತೆ ಮೆಲುಕು ಹಾಕುವ ಕೆಲಸ ನಡೆಯಿತು, ಕೆಲವು ಅರಿಯದ ಸತ್ಯ ಸಂಗತಿಗಳನ್ನು ತಿಳಿದು ಅವರ ಬಗ್ಗೆ ಇದ್ದ ಗೌರವ ದುಪ್ಪಟ್ಟಾಯಿತು. ಈಗಲಾದರೂ ಸರ್.M.V ಅವರ ಬಯೋಪಿಕ್ ಬಂದರೆ ಅದು ಹಲವು ಆದರ್ಶಗಳನ್ನ ಧಾರೆ ಎರೆಯುವ ಕಳಶವಾಗಿರುತ್ತೆ..

Sir.M. ವಿಶ್ವೇಶ್ವರಯ್ಯ ಅವರ ಜನ್ಮ ದಿನವಾದ, ಸೆಪ್ಟೆಂಬರ್ 15, “engineers day” ಎಂದು ದೇಶದಾದ್ಯಂತ ಆಚರಿಸಲ್ಪಡುವುದು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply